ಸೂರ್ಯ ದೇವನಿಗೆ ಕೋಟಿ ಕೋಟಿ ನಮಸ್ಕಾರ
Team Udayavani, Jan 13, 2022, 7:00 AM IST
ಸಂಕ್ರಮಣ ಅಥವಾ ಸಂಕ್ರಾಂತಿ ಎಂದರೆ ಸೂರ್ಯನ ದಿಕ್ಕು ಬದಲಾಗುವ ಹೊತ್ತು. ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸಾಗುವ ಕಾಲವಿದು. ಈ ಉತ್ತರಾಯಣ ಅತ್ಯಂತ ಶ್ರೇಷ್ಠ . ಜೀವಚೈತನ್ಯವಾದ ಬೆಳಕು ನೀಡುವ ಆದಿತ್ಯನಿಗೆ ನಮಿಸುವ ಸಮಯ. ಇಂಥ ಕಾಲದಲ್ಲಿ ದೇಶಾದ್ಯಂತ ಸೂರ್ಯ ನಮಸ್ಕಾರದಂಥ ಬೃಹತ್ ಕಾರ್ಯಕ್ರಮವನ್ನು ಕೇಂದ್ರದ ಆಯುಷ್ ಇಲಾಖೆ ಏರ್ಪಡಿಸಿದೆ. ನೀವೂ ಈ ಅಭಿಯಾನದಲ್ಲಿ ಭಾಗವಹಿಸಿ.
ಯಾವಾಗ?
ಶುಕ್ರವಾರ ಬೆಳಗ್ಗೆ ದೇಶಾದ್ಯಂತ ಏಕಕಾಲದಲ್ಲಿ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಲಿದೆ. ಸುಮಾರು 75 ಲಕ್ಷ ಮಂದಿ ಭಾಗಿಯಾಗುತ್ತಾರೆ ಎಂದು ಆರಂಭದಲ್ಲಿ ಆಯುಷ್ ಇಲಾಖೆ ಹೇಳಿತ್ತು. ಆದರೆ ಬುಧವಾರ ಕೇಂದ್ರ ಆಯುಷ್ ಸಚಿವ ಸರ್ಬಾನಂದ ಸೋನಾವಾಲ್ 1 ಕೋಟಿ ಮಂದಿ ಭಾಗಿಯಾಗುತ್ತಾರೆ ಎಂದಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಕನಿಷ್ಠ 75 ಲಕ್ಷ ಮಂದಿ ಈ ಸೂರ್ಯ ನಮಸ್ಕಾರ ಮಾಡಲಿದ್ದಾರೆ ಎಂದು ಕೇಂದ್ರ ಸರಕಾರ ಹೇಳಿದೆ.
ಸೂರ್ಯ ನಮಸ್ಕಾರದಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಮತ್ತು ಚೈತನ್ಯ ಹೆಚ್ಚಾಗುತ್ತದೆ. ಕೊರೊನಾದ ಸಮಯದಲ್ಲಿ ಮಾನಸಿಕ ಮತ್ತು ದೈಹಿಕವಾಗಿ ಹೆಚ್ಚು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇಂಥ ತೊಂದರೆಗಳಿಗೆ ಸೂರ್ಯ ನಮಸ್ಕಾರ ಮುಕ್ತಿ ಕೊಡಬಲ್ಲುದು. ಮುಂಜಾನೆ ಸೂರ್ಯನಮಸ್ಕಾರ ಮಾಡುವುದರಿಂದ ನಮ್ಮ ದೇಹಕ್ಕೆ ವಿಟಮಿನ್ ಡಿ ಸಿಗುತ್ತದೆ.
ಇದನ್ನೂ ಓದಿ:ಯೋಗಿ ಆದಿತ್ಯನಾಥ್ ರನ್ನು ಅಯೋಧ್ಯೆಯಿಂದ ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ?
ರಾಜ್ಯದಲ್ಲೂ ಸಿದ್ಧತೆ
ಮಕರ ಸಂಕ್ರಾಂತಿ ದಿನ ರಾಜ್ಯದ ವಿವಿಧೆಡೆ ಸೂರ್ಯ ನಮಸ್ಕಾರ ನಡೆಯಲಿದ್ದು, ಕೊರೊನಾ ಹಿನ್ನೆಲೆಯಲ್ಲಿ ಮನೆಯಿಂದಲೇ ಮಾಡುವಂತೆ ಕೋರಲಾಗಿದೆ. ನೋಂದಣಿ ಮಾಡಿಕೊಂಡು ಸೂರ್ಯನಮಸ್ಕಾರದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಆಯುಷ್ ಇಲಾಖೆಯು ಪ್ರಮಾಣಪತ್ರ ನೀಡಲಿದೆ. ವರ್ಚುವಲ್ ವೇದಿಕೆಯಲ್ಲಿ ನೀಡುವ ನಿರ್ದೇಶನಗಳನ್ನು ನೋಡಿಕೊಂಡು ನಾವು ಮನೆಗಳಲ್ಲಿ ಅಥವಾ ಮೈದಾನಗಳಲ್ಲಿ ಸೂರ್ಯ ನಮಸ್ಕಾರ ಮಾಡಬಹುದು.
ಸೂರ್ಯ ನಮಸ್ಕಾರದಿಂದ ಆಗುವ ಲಾಭಗಳು
1. ಮಾನಸಿಕ ಮತ್ತು ದೈಹಿಕ ಸ್ಥಿರತೆ
2. ಸ್ನಾಯು ಮತ್ತು ಕೀಲು ಗಳ ದೃಢತೆ
3. ಜೀರ್ಣ ಶಕ್ತಿಗೆ ಉತ್ತಮ, ನರವ್ಯೂಹಕ್ಕೂ ಒಳ್ಳೆ ಯದು
4. ನಿದ್ರಾಹೀನತೆ ಸಮಸ್ಯೆಯಿಂದ ಮುಕ್ತಿ
5. ಭುಜ ನೋವಿಗೆ ಪರಿಹಾರ
6. ಬೆನ್ನು ಹುರಿ, ಕಿಬ್ಬೊಟ್ಟೆಯ ಸ್ನಾಯುಗಳಿಗೆ ಉತ್ತಮ
7. ಸ್ತ್ರೀಯರ ಋತುಚಕ್ರ ನಿಯಮಿತಗೊಳ್ಳಲು ಸಹಕಾರಿ
8. ಖಿನ್ನತೆ, ಒತ್ತಡ ಇಳಿಸುವುದಕ್ಕೆ ಸಹಕಾರಿ
9. ತೂಕ ಇಳಿಸಿಕೊಳ್ಳುವುದಕ್ಕೆ ಸಹಕಾರಿ
ಎಲ್ಲ ಯೋಗಾಸನಗಳ ಫಲಗಳನ್ನು ಸೂರ್ಯ ನಮಸ್ಕಾರದಿಂದ ಪಡೆಯಬಹುದು. ಬೇರೆ ಆಸನಗಳನ್ನು ಮಾಡದೆ ಇರುವವರು ಕೂಡ ಸೂರ್ಯ ನಮಸ್ಕಾರ ಮಾಡುತ್ತಾರೆ. ಮಕರ ಸಂಕ್ರಾಂತಿ ಸೂರ್ಯನ ಚಲನೆಗೆ ವಿಶೇಷವಾದ ದಿನ. “ಆರೋಗ್ಯಂ ಭಾಸ್ಕರಾತ್ ಇಚ್ಛೇತ್’ ಎಂಬಂತೆ ಸೂರ್ಯನು ಆರೋಗ್ಯದಾಯಕ. ಈಗ ಕೊರೊನಾ ಕಾಲದಲ್ಲಿ ಎಲ್ಲ ಬಗೆಯ ಸೋಂಕುಗಳು ನಿವಾರಣೆಯಾಗಲು ಈ ಸೂರ್ಯ ನಮಸ್ಕಾರ ಆಂದೋಲನ ಸಹಕಾರಿಯಾಗಲಿ.
– ಶ್ರೀ ವಿಶ್ವಪ್ರಸನ್ನತೀರ್ಥರು, ಯೋಗಾಸನ ತಜ್ಞರು, ಪೇಜಾವರ ಮಠಾಧೀಶರು, ಉಡುಪಿ
ನೋಂದಣಿ ಮಾಡಿಕೊಂಡು ಭಾಗವಹಿಸಿ, ಪ್ರಮಾಣಪತ್ರ ಪಡೆದುಕೊಳ್ಳಿ
www.yogamdniy.nic..in
https://yogacertificationboard.nic.in/suryanamaskar/
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.