ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯಶಸ್ವಿಯಾಗುವುದೆ?
Team Udayavani, Dec 20, 2018, 11:17 AM IST
ಉಡುಪಿ: ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಯೋಜನೆಗಳನ್ನು ವಿಲೀನಗೊಳಿಸಿ ಜಾರಿಗೆ ತರಲಾಗಿರುವ “ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆ ಉಡುಪಿ ಜಿಲ್ಲೆಯಲ್ಲಿ ಜೂನ್‌ನಿಂದ ಆರಂಭವಾಗಿದೆ. ಆದರೆ ಜನರಲ್ಲಿರುವ ಗೊಂದಲ, ಅಸಮಾಧಾನ ದೂರವಾಗಿಲ್ಲ. “ಹಿಂದಿನ ಯಶಸ್ವಿನಿ ಯೋಜನೆಯೇ ಚೆನ್ನಾಗಿತ್ತು’ ಎಂಬ ಅಭಿಪ್ರಾಯಗಳೇ ಕೇಳಿಬರುತ್ತಿವೆ.
ಯಶಸ್ವಿನಿ ಯೋಜನೆಯಲ್ಲಿ ನೇರವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಅವಕಾಶವಿತ್ತು. ಆದರೆ ಹೊಸ ಯೋಜನೆಯಲ್ಲಿ ಸರಕಾರಿ ಆಸ್ಪತ್ರೆಗೇ ತೆರಳಬೇಕು. ಅಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದರೆ ಮಾತ್ರ ಖಾಸಗಿಗೆ ಅವಕಾಶವಿದೆ. ಇದು ಜನರ ಅಸಮಾಧಾನಕ್ಕೆ ಮುಖ್ಯ ಕಾರಣ.
ಕಾರ್ಡ್ ವಿತರಣೆ ಆರಂಭವಾಗಿಲ್ಲ
ಅಜ್ಜರಕಾಡಿನ ಜಿಲ್ಲಾಸ್ಪತ್ರೆ ಮತ್ತು ಕುಂದಾಪುರ ತಾಲೂಕು ಆಸ್ಪತ್ರೆಗಳಲ್ಲಿ ಯೋಜನೆಯಡಿ ಸೇವೆ ಜೂನ್‌ನಿಂದ ಆರಂಭ ಗೊಂಡಿದೆ. ಕಾರ್ಡ್ ವಿತರಣೆ ಇನ್ನಷ್ಟೇ ಆರಂಭವಾಗಬೇಕಿದೆ. ಸದ್ಯ ಅಗತ್ಯ ಇರುವವರಿಗೆ ಖಾಸಗಿ ಆಸ್ಪತ್ರೆಗೆ ರೆಫರಲ್ ಬರೆದು ಕೊಡಲಾಗುತ್ತದೆ. ಈ ಖಾಸಗಿ ಆಸ್ಪತ್ರೆಯಲ್ಲಿ ಬಿಪಿಎಲ್‌ನವರಿಗೆ ಉಚಿತ ಹಾಗೂ ಎಪಿಎಲ್‌ನವರಿಗೆ ಚಿಕಿತ್ಸಾ ಪ್ಯಾಕೇಜ್ ದರಗಳ ವೆಚ್ಚದ ಶೇ.30ರಷ್ಟು ಮೊತ್ತವನ್ನು ಸರಕಾರ ಭರಿಸುತ್ತದೆ.
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಜೂನ್‌ನಲ್ಲಿ 113, ಜುಲೈನಲ್ಲಿ 193, ಆಗಸ್ಟ್‌ನಲ್ಲಿ 161, ಸೆಪ್ಟಂಬರ್‌ನಲ್ಲಿ 150, ಅಕ್ಟೋಬರ್‌ನಲ್ಲಿ 150, ನವೆಂಬರ್‌ನಲ್ಲಿ 139 ಹಾಗೂ ಡಿ.16ರ ವರೆಗೆ 74 ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ. ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ 252 ಮಂದಿ ಉಪಯೋಗ ಪಡೆದುಕೊಂಡಿದ್ದಾರೆ. ಕಾರ್ಕಳ ತಾಲೂಕು ಆಸ್ಪತ್ರೆ ನವೀಕರಣಗೊಳ್ಳುತ್ತಿರುವುದರಿಂದ ಸೇವೆ ಆರಂಭಗೊಂಡಿಲ್ಲ.
ದ.ಕ: 31,357 ಆರೋಗ್ಯ ಕಾರ್ಡ್ ವಿತರಣೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜೂನ್‌ನಿಂದ ನವೆಂಬರ್ ವರೆಗೆ ವೆನಾÉಕ್ ಜಿಲ್ಲಾ ಆಸ್ಪತ್ರೆಯ ಮೂಲಕ 31,357 ಕಾರ್ಡ್ ವಿತರಿಸಲಾಗಿದೆ.
ಜಿಲ್ಲೆಯ 8 ಸರಕಾರಿ ಆಸ್ಪತ್ರೆಗಳು ಮತ್ತು 32 ಖಾಸಗಿ ಆಸ್ಪತ್ರೆಗಳು ನೋಂದಣಿಗೊಂಡಿವೆ. ಜೂನ್‌ನಿಂದ ನವೆಂಬರ್ ತನಕ 2,362 ರೋಗಿಗಳು 1,118.35 ಲಕ್ಷ ರೂ. ಮೊತ್ತದ ಚಿಕಿತ್ಸೆ ಪಡೆದಿದ್ದಾರೆ.
ಜಿಲ್ಲಾ/ತಾಲೂಕು ಆಸ್ಪತ್ರೆಗಳಿಂದ ಖಾಸಗಿ ಆಸ್ಪತ್ರೆಗಳಿಗೆ ರೆಫರಲ್ ಮಾಡುವ ವ್ಯವಸ್ಥೆಯ ಬಗ್ಗೆ ಜನರಿಗೆ ಅಸಮಾಧಾನವಿದೆ. ಆದಾಗ್ಯೂ ಈ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡರೆ ಅನುಕೂಲವಾಗಲಿದೆ. ಹೆಚ್ಚು ಖಾಸಗಿ ಆಸ್ಪತ್ರೆಗಳನ್ನು ನೋಂದಾಯಿಸಿ ತುರ್ತಾಗಿ ಚಿಕಿತ್ಸೆ ದೊರೆಯುವಂತೆ ಮಾಡಬೇಕು. ಗೊಂದಲಗಳನ್ನು ಬಗೆಹರಿಸಬೇಕು ಎಂದು ಸಮಾಜಸೇವಾ ಕಾರ್ಯಕರ್ತರೊಬ್ಬರು ಅಭಿಪ್ರಾಯ ಪಡುತ್ತಾರೆ.
ಯಶಸ್ವಿನಿಯ ಎಲ್ಲ ಆಸ್ಪತ್ರೆಗಳ ನೋಂದಣಿ
ಯಶಸ್ವಿನಿಯಡಿ ನೋಂದಾವಣೆಗೊಂಡಿದ್ದ ಖಾಸಗಿ ಆಸ್ಪತ್ರೆಗಳು ಈ ಯೋಜನೆಯಡಿಯೂ ನೋಂದಣಿಗೊಂಡಿವೆ. ಎರಡು ಮಲ್ಟಿ ಸ್ಪೆಷಾಲಿಟಿ ಮತ್ತು 18 ಇತರ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅವಕಾಶವಿದೆ. ಒಂದು ಅರ್ಹ ಬಿಪಿಎಲ್ ಕುಟುಂಬಕ್ಕೆ ವರ್ಷಕ್ಕೆ 5 ಲ.ರೂ. ಮೊತ್ತದ ಚಿಕಿತ್ಸೆ ಉಚಿತವಾಗಿ ದೊರೆಯುತ್ತದೆ. ಎಪಿಎಲ್‌ನವರಿಗೆ 1.5 ಲ.ರೂ.ವರೆಗೆ ಚಿಕಿತ್ಸೆ ದೊರೆಯುತ್ತದೆ.
ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಯೊಂದಿಗೆ ಜಿಲ್ಲಾಸ್ಪತ್ರೆ/ ತಾಲೂಕು ಆಸ್ಪತ್ರೆಗೆ ತೆರಳಿದರೆ ನೋಂದಣಿ ಮಾಡಲಾಗುತ್ತದೆ. ಅನಾರೋಗ್ಯಕ್ಕೀಡಾಗಿ ಬಂದಾಗ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ 1800-4258330, ಸಹಾಯವಾಣಿ 104, ಆಶಾ ಕಾರ್ಯಕರ್ತೆಯರು, ಆರೋಗ್ಯ ಮಿತ್ರರನ್ನು ಸಂಪರ್ಕಿಸಬಹುದು.
ವ್ಯತ್ಯಾಸವೇನು?
ಯಶಸ್ವಿನಿ ಯೋಜನೆ ಸಹಕಾರ ಸಂಘಗಳ ಸದಸ್ಯ ರಿಗೆ ಸೀಮಿತವಾಗಿತ್ತು. ಆದರೆ ಹೊಸ ಯೋಜನೆ ಎಲ್ಲರಿಗೂ ಲಭ್ಯ. ಯಶಸ್ವಿನಿಯಲ್ಲಿ ದ್ವಿತೀಯ ಹಾಗೂ ತೃತೀಯ ಹಂತದ 823 ಚಿಕಿತ್ಸೆಗಳು ಮಾತ್ರ ದೊರೆಯುತ್ತಿದ್ದವು. ಹೊಸ ಯೋಜನೆಯಲ್ಲಿ ಪ್ರಾಥಮಿಕದಿಂದ ತುರ್ತು ಚಿಕಿತ್ಸೆಯ ವರೆಗೆ 1,516 ಚಿಕಿತ್ಸೆಗಳನ್ನು ಒದಗಿಸಲಾಗುತ್ತದೆ.
ಹೃದಯಾಘಾತ, ನ್ಯೂರೋ ಸರ್ಜರಿ ಮೊದಲಾದ ಕೆಲವು ಸೂಚಿತ ತುರ್ತು ಚಿಕಿತ್ಸೆಗಳಿಗೆ ನೇರವಾಗಿ ನೋಂದಾಯಿತ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬಹುದು. ಯಶಸ್ವಿನಿ ಯೋಜನೆಗಿಂತಲೂ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ. ಜಿಲ್ಲಾಸ್ಪತ್ರೆ/ತಾಲೂಕು ಆಸ್ಪತ್ರೆಗಳಲ್ಲಿಯೂ ತುರ್ತು ಸಂದರ್ಭಗಳಿಗೆ ಶೀಘ್ರ ಸ್ಪಂದಿಸಲಾಗುತ್ತದೆ. ದಿನದ 24 ಗಂಟೆಗಳ ಕಾಲ ಕೂಡ ಸೇವೆ ದೊರೆಯುತ್ತದೆ.
– ಸಚ್ಚಿದಾನಂದ ಸಂಯೋಜನಾಧಿಕಾರಿ, ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.