ಅಯ್ಯಪ್ಪ ಸ್ವಾಮಿ ದರ್ಶನಕ್ಕೂ ಆನ್‌ಲೈನ್ ಬುಕ್ಕಿಂಗ್!
ಶಬರಿಮಲೆಗೆ ತೆರಳಲು ಹಲವು ಷರತ್ತು
Team Udayavani, Dec 7, 2021, 7:00 AM IST
ಉಡುಪಿ: ಕೋವಿಡ್ ರೂಪಾಂತರಿ ತಳಿ ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಶಬರಿಮಲೆಗೆ ತೆರಳುವ ಭಕ್ತರು ಹಲವಾರು ಷರತ್ತುಗಳನ್ನು ಅನುಸರಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.
ಕೇರಳ ಸರಕಾರ ನಿತ್ಯ 25 ಸಾವಿರದಿಂದ 30 ಸಾವಿರ ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಿರುವುದರಿಂದ ದರ್ಶನಾಕಾಂಕ್ಷಿಗಳು ಕನಿಷ್ಠ 10 ದಿನಗಳ ಮೊದಲೇ ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬೇಕು. ಆನ್‌ಲೈನ್ ಬುಕಿಂಗ್ ಮಾಡಿಸಿಕೊಳ್ಳದವರಿಗೆ ನೀಲಕ್ಕಲ್‌ನಲ್ಲಿ ಸ್ಥಳದಲ್ಲಿಯೇ ಬುಕಿಂಗ್ ಮಾಡಿ ತೆರಳಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಕೋವಿಡ್ ನೆಗೆಟಿವ್ ವರದಿ ಹಾಗೂ ಆಧಾರ್ ಕಾರ್ಡ್ ನೀಡಬೇಕಾಗುತ್ತದೆ. ಅಲ್ಲಿ ಕೊರೊನಾ ಪರೀಕ್ಷೆಯನ್ನೂ ನಡೆಸಲಾಗುವುದು.
ಸಮಯ ಮೀರಿದರೆ ದರ್ಶನವಿಲ್ಲ
ಮುಂಗಡ ಬುಕ್ಕಿಂಗ್ ಮಾಡಿದರೆ ಆನ್‌ಲೈನ್ ಮೂಲಕವೇ ಸ್ಲಾಟ್ ನೀಡಲಾಗುತ್ತದೆ. ನಿರ್ದಿಷ್ಟ ದಿನಾಂಕ, ಸಮಯದಲ್ಲಿಯೇ ದರ್ಶನಕ್ಕೆ ಹಾಜರಿರಬೇಕು. ವಿಳಂಬವಾದರೆ ಅವಕಾಶ ಅನಂತರದವರ ಪಾಲಾಗುತ್ತದೆ. ಮುಂಗಡ ಬುಕ್ಕಿಂಗ್ ಪರಿಷ್ಕರಿಸಲು ಅವಕಾಶವಿಲ್ಲ; ಹೊಸದಾಗಿಯೇ ಪ್ರಕ್ರಿಯೆ ನಡೆಸಬೇಕು. ಇಲ್ಲದಿದ್ದರೆ ಆಯಾ ಜಿಲ್ಲೆಯ ಅಯ್ಯಪ್ಪ ಸೇವಾ ಸಮಾಜಂನ ಪ್ರಮುಖರನ್ನು ಸಂಪರ್ಕಿಸಬಹುದಾಗಿದೆ. ದೇವರ ದರ್ಶನ ಬಯಸುವವರು ಕೋವಿಡ್ ಲಸಿಕೆಯ ಎರಡೂ ಡೋಸ್‌ಗಳನ್ನು ಕಡ್ಡಾಯವಾಗಿ ಪಡೆದಿರಬೇಕು ಎನ್ನುತ್ತಾರೆ ಮಲ್ಪೆ ಅಯ್ಯಪ್ಪ ಸ್ವಾಮಿ ಮಂದಿರದ ಅಧ್ಯಕ್ಷ ಧನಂಜಯ ಕಾಂಚನ್.
ಶೀಘ್ರ ಸೇವೆ
ತಂಡವಾಗಿ ಹೋಗುವ ಭಕ್ತರು ಕೊಂಡುಹೋದ ಇರುಮುಡಿ, ತುಪ್ಪವನ್ನು ಒಂದೇ ಪಾತ್ರೆಗೆ ಹಾಕಿ ಅವರ ಎದುರಲ್ಲೇ ದೇವರಿಗೆ ಅಭಿಷೇಕ ಮಾಡಿ ಪ್ರಸಾದ ನೀಡುತ್ತಿದ್ದರು. ಆದರೆ ಈಗ ಭಕ್ತರು ಕೊಂಡುಹೋಗುವ ಇರುಮುಡಿ, ತುಪ್ಪವನ್ನು ದೇವಸ್ಥಾನದ ಒಳಗಿರುವ ಡ್ರಮ್‌ಗೆ ಹಾಕಿದರೆ ಅದಾಗಲೇ ದೇವರಿಗೆ ಅಭಿಷೇಕ ಮಾಡಿರುವ ತುಪ್ಪವನ್ನು ನೀಡಲಾಗುತ್ತದೆ. ಇದರಿಂದಾಗಿ ಭಕ್ತರು ಹೆಚ್ಚುಕಾಲ ದೇವಸ್ಥಾನದೊಳಗೆ ನಿಲ್ಲುವುದು ತಪ್ಪುತ್ತದೆ; ಸೇವೆ, ದರ್ಶನವೂ ಶೀಘ್ರ ಸಿಗುತ್ತದೆ.
ಇದನ್ನೂ ಓದಿ:ಹಾವುಗಳ ಹಾವಳಿ ತಡೆಯದೆ ಮನೆಗೇ ಬೆಂಕಿಯಿಟ್ಟ!
ಭಕ್ತರ ಸಂಖ್ಯೆ ಇಳಿಕೆ
ವರ್ಷಂಪ್ರತಿ ಈ ಎರಡೂ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುತ್ತಿದ್ದರು. ಕೋವಿಡ್ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಕಳೆದ ಎರಡು ವರ್ಷಗಳಿಂದ ಶಿಬಿರದ ಮೂಲಕ ಯಾರೂ ತೆರಳಿರಲಿಲ್ಲ. ಕೆಲವರಷ್ಟೇ ತಾವಾಗಿಯೇ ತೆರಳಿದ್ದರು. ಈ ಬಾರಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ 600ಕ್ಕೂ ಅಧಿಕ ಅಯ್ಯಪ್ಪ ಸ್ವಾಮಿಯ ಶಿಬಿರಗಳಿದ್ದು, 20ರಿಂದ 25 ಸಾವಿರ ವ್ರತಧಾರಿಗಳು ದರ್ಶನಕ್ಕೆ ತೆರಳಲಿದ್ದಾರೆ.
ಮಕರ ಸಂಕ್ರಮಣಕ್ಕೆ ಕಾತರ
ಜ. 14ರಂದು ಗೋಚರಿಸುವ ಮಕರ ಜ್ಯೋತಿಯ ಮೂಲಕ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಬೇಕು ಎನ್ನುವುದು ಹೆಚ್ಚಿನ ಭಕ್ತರ ಕನಸು. ಆನ್‌ಲೈನ್ ಬುಕ್ಕಿಂಗ್‌ನಿಂದಾಗಿ ಜ್ಯೋತಿಯ ವೀಕ್ಷಣೆ ಅವಕಾಶ ಎಲ್ಲರಿಗೂ ಕಷ್ಟ. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಇನ್ನೂ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ. ಅದಾಗ್ಯೂ ಈ ದಿನ ದರ್ಶನಕ್ಕೆ ಹಲವಾರು ಮಂದಿ ಕಾತರರಾಗಿದ್ದಾರೆ.
ಕೋವಿಡ್ ಕಾರಣ ಕಳೆದ 2 ವರ್ಷಗಳಲ್ಲಿ ಭಕ್ತರು ಶಿಬಿರದ ಮೂಲಕ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಿಲ್ಲ. ಈ ಬಾರಿಯೂ ಸಂಖ್ಯೆ ಕಡಿಮೆಯೇ ಇದೆ. ಈಗಾಗಲೇ ಬುಕಿಂಗ್ ಆರಂಭಗೊಂಡಿದ್ದು, ಹಲವರು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ.
– ರಾಧಾಕೃಷ್ಣ ಮೆಂಡನ್,
ಅಯ್ಯಪ್ಪ ಸೇವಾ ಸಮಾಜಂನ ಉಡುಪಿ ಜಿಲ್ಲಾಧ್ಯಕ್ಷ /
– ಗಣೇಶ್ ಪುದುವಾಳ್,
ಶಬರಿಮಲೆ ಅಯ್ಯಪ್ಪ ಸೇವಾ ಸಮಿತಿಯ ದ.ಕ. ಜಿಲ್ಲಾಧ್ಯಕ್ಷ
– ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
Siddapura: ಅದೃಷ್ಟ ತಂದ ಲಾರಿ ಧರ್ಮಸ್ಥಳ ಕ್ಷೇತ್ರಕ್ಕೆ ಸಮರ್ಪಣೆ
Bengaluru: ಮಾದಾವರ ವಿಸ್ತರಿತ ಮೆಟ್ರೊದಲ್ಲಿ ಮೊದಲ ದಿನ 16000 ಜನ ಪ್ರಯಾಣ
Balaganur: ಕಾಲುವೆಯಲ್ಲಿ ನವಜಾತ ಶಿಶು ದೇಹ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.