ಆಜ್ರಿ- ಬೆಳ್ಳಾಲ ಸೇತುವೆ ಬೇಡಿಕೆ: ಈ ವರ್ಷವೂ ನಿರಾಸೆ

Team Udayavani, Jul 28, 2018, 6:55 AM IST

1107kdpp10.jpg

ಆಜ್ರಿ: ಒಳ್ಳೆಯ ರಸ್ತೆ ಇದೆ. ಆದರೆ ನದಿ ದಾಟಲು ಸೇತುವೆ ಇಲ್ಲ. 10 ಕಿ.ಮೀ. ದೂರ ಸಂಚರಿಸುವ ದಾರಿಗೆ ಸೇತುವೆಯಿಲ್ಲದೆ 30 ಕಿ. ಮೀ. ಸಂಚರಿಸುವ ದುಸ್ಥಿತಿ ಬೆಳ್ಳಾಲ, ಮೋರ್ಟು ಭಾಗದ ಜನರದ್ದು.

ಕುಂದಾಪುರದಿಂದ 35 ಕಿ. ಮೀ. ದೂರದ, ಸಿದ್ದಾಪುರ ಸಮೀಪದ ಆಜ್ರಿ – ಬೆಳ್ಳಾಲಕ್ಕೆ ಸಂಪರ್ಕ ಕಲ್ಪಿಸುವ ಮೋರ್ಟು ಬಳಿ ಚಕ್ರಾ ನದಿಗೆ ಕಳೆದ ಜನವರಿಯಲ್ಲಿ ಸೇತುವೆ ನಿರ್ಮಾಣಕ್ಕೆ ಮಂಜೂರಾಗಿದ್ದು, 3 ಕೋ.ರೂ. ಅನುದಾನ ಘೋಷಣೆಯಾಗಿತ್ತು. ಮಾರ್ಚ್‌ನಲ್ಲಿ ಕಾಮಗಾರಿಯೂ ಪ್ರಾರಂಭವಾಗಿದೆ. ಟೆಂಡರ್‌ ಆಗುವಾಗ ತಡವಾಗಿದ್ದರಿಂದ ಕಾಮಗಾರಿ ಶುರುವಾಗಲು ತಡವಾಗಿದೆ. 

ಪಿಲ್ಲರ್‌ ಮಾತ್ರ ಆಗಿದೆ 
ಕಳೆದ ಮಾರ್ಚ್‌ನಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಮೇ ವರೆಗೆ ಕಾಮಗಾರಿಗೆ ಸಮಯವಿದ್ದರೂ 3 ಪಿಲ್ಲರ್‌ ಮತ್ತೂಂದು ಅರ್ಧ ಪಿಲ್ಲರ್‌ ಆಗಿದೆ.
  
ಮಳೆಗಾಲದಲ್ಲಿ ಸಂಪರ್ಕ ಕಡಿತ
ಸಿದ್ದಾಪುರ ಮಾರ್ಗವಾಗಿ ಆಜ್ರಿಯಿಂದ ಮೋರ್ಟು ದಾರಿಯಾಗಿ ಬೆಳ್ಳಾಲ ಗ್ರಾಮಕ್ಕೆ ತೆರಳಬೇಕಾದರೆ ನದಿ ದಾಟಬೇಕು. ಬೇಸಗೆಯಲ್ಲಿ ಈ ಊರಿನವರು ತಾತ್ಕಾಲಿಕ ಕಾಲು ಸಂಕದ ಮೂಲಕವೇ ನದಿ ದಾಟುತ್ತಾರೆ. ಇದರಲ್ಲಿ ದ್ವಿಚಕ್ರ ವಾಹನ ಸಂಚಾರ ಸಾಧ್ಯವಿದೆ. ಅದು ಬಿಟ್ಟರೆ ಬೇರಾವುದೇ ವಾಹನ ಚಾಲನೆ ಸಾಧ್ಯವಿಲ್ಲ. 
 
ನೂರಾರು ಮಕ್ಕಳಿಗೆ ತೊಂದರೆ 
ಬೆಳ್ಳಾಲ, ಕೆರಾಡಿ, ಮಾರಣಕಟ್ಟೆ ಕಡೆಗಳಿಂದ ಸಿದ್ದಾಪುರ, ಹೆಮ್ಮಕ್ಕಿ, ಶಂಕರನಾರಾಯಣ ಶಾಲೆ- ಕಾಲೇಜುಗಳಿಗೆ ವಿದ್ಯಾರ್ಜನೆಗಾಗಿ ಸುಮಾರು 250 ರಿಂದ 300 ಮಕ್ಕಳು ಬರು ತ್ತಿದ್ದು, ಮಳೆಗಾಲದಲ್ಲಿ ಅವರು ಸುತ್ತು ಹಾಕಿ ತೆರಳುತ್ತಾರೆ. ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ.

ಕುಂದಾಪುರವೇ ಹತ್ತಿರ…! 
ಆಜ್ರಿಯಿಂದ ಚಕ್ರ ನದಿ ದಾಟಿ ಮೋರ್ಟು-ಬೆಳ್ಳಾಲ- ಕೆರಾಡಿ- ಮಾರಣಕಟ್ಟೆಯಾಗಿ ಕೊಲ್ಲೂರಿಗೆ ತೆರಲು ಹತ್ತಿರದ ಮಾರ್ಗ ಇದಾಗಿದೆ. ಆದರೆ ಸೇತುವೆಯಿಲ್ಲದೆ ಸುತ್ತು ಬಳಸಬೇಕಾಗಿದೆ. ಬೆಳ್ಳಾಲ, ಕೆರಾಡಿ, ಮಾರಣಕಟ್ಟೆ ಭಾಗದಲ್ಲಿ ಸುಮಾರು 1,000ಕ್ಕೂ ಹೆಚ್ಚು ಮನೆಗಳಿದ್ದು, ಈ ಭಾಗದ ಜನರಿಗೆ ಸಿದ್ದಾಪುರ ಹತ್ತಿರದ ಪೇಟೆ. ಆದರೆ ಮಳೆಗಾಲ ಆರಂಭವಾದ ಮೇಲೆ ಸಿದ್ದಾಪುರಕ್ಕೆ ಹೋಗಬೇಕಾದರೆ  30 ಕಿ.ಮೀ. ಸುತ್ತು ಹಾಕಿ ತೆರಳಬೇಕು. ಆದ್ದರಿಂದ ಇವರಿಗೆ ಕುಂದಾಪುರವೇ ಹತ್ತಿರ ಎನ್ನುವ ಸ್ಥಿತಿ ಇದೆ. 

ಶೀಘ್ರ ಕಾಮಗಾರಿ ಪೂರ್ಣಕ್ಕೆ ಪ್ರಯತ್ನ
ಬೆಳ್ಳಾಲದಿಂದ ಆಜ್ರಿಗೆ ಸಂಪರ್ಕ ಕಲ್ಪಿಸುವ ಮೋರ್ಟು ಬಳಿ ಸೇತುವೆಗೆ 3 ಕೋ.ರೂ. ಮಂಜೂರಾಗಿದೆ. ಅನುದಾನವೂ ಬಿಡುಗಡೆಗೊಂಡಿದ್ದು, ಕಾಮಗಾರಿಯೂ ಪ್ರಾರಂಭವಾಗಿದೆ. ಈಗ ಮಳೆಗಾಲವಾಗಿದ್ದು, ಆ ಬಳಿಕ ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು. 
– ಬಿ.ಎಂ. ಸುಕುಮಾರ ಶೆಟ್ಟಿ, 
ಬೈಂದೂರು ಶಾಸಕರು

ಆಗಿದ್ದರೆ ತುಂಬಾ ಪ್ರಯೋಜನ
ಮೋರ್ಟುಗೆ ಸೇತುವೆ ಮಂಜೂರಾಗಿರುವುದು ತುಂಬಾ ಸಂತೋಷದ ವಿಚಾರ. ಹಾಗೆಯೇ ಕಾಮಗಾರಿಯೂ ಆದಷ್ಟು ಬೇಗ ಮುಗಿದರೆ ಒಳ್ಳೆಯದು. ಈ ವರ್ಷವೇ ಆಗಿದ್ದರೆ ಈ ಭಾಗದ ಜನರು, ಶಾಲಾ – ಕಾಲೇಜು ಮಕ್ಕಳಿಗೆ ಮಳೆಗಾಲದಲ್ಲಿ ಪ್ರಯೋಜನವಾಗುತ್ತಿತ್ತು. 
– ಉದಯ ಪೂಜಾರಿ ಮೋರ್ಟು 

– ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Guns and Roses Review

Guns and Roses Review: ನೆತ್ತರ ಹಾದಿ ಪ್ರೇಮ್‌ ಕಹಾನಿ

2-vitla

Vitla: ಇಡಿ ಅಧಿಕಾರಿಗಳಂತೆ ನಟಿಸಿ ದರೋಡೆ: ದೋಚಿದ್ದು ಸುಮಾರು 30 ಲಕ್ಷ

Sydney Test: Team India got small lead in first innings

Sydney Test: ವೇಗಿಗಳ ಉರಿದಾಳಿಗೆ ನಲುಗಿದ ಆಸೀಸ್;‌ ಭಾರತಕ್ಕೆ ಅಲ್ಪ ಮುನ್ನಡೆ

INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್‌ ಶರ್ಮಾ; ವಿಡಿಯೋ ನೋಡಿ

INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್‌ ಶರ್ಮಾ; ವಿಡಿಯೋ ನೋಡಿ

Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

JDS leader hits at Chikkaballapura

Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ

Horoscope new-1

Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-mobile-tower

Gram Panchayat ಆದಾಯಕ್ಕೆ ಟೆಲಿಕಾಂ ಕಂಪೆನಿಗಳಿಂದ ಕುತ್ತು

Exam 3

Udayavani follow-up; ಶುಲ್ಕ ಪಡೆದೂ ಮುದ್ರಿತ ಪುಸ್ತಕ ನೀಡದ ಕರ್ನಾಟಕ ಮುಕ್ತ ವಿವಿ

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

accident

Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Guns and Roses Review

Guns and Roses Review: ನೆತ್ತರ ಹಾದಿ ಪ್ರೇಮ್‌ ಕಹಾನಿ

2-vitla

Vitla: ಇಡಿ ಅಧಿಕಾರಿಗಳಂತೆ ನಟಿಸಿ ದರೋಡೆ: ದೋಚಿದ್ದು ಸುಮಾರು 30 ಲಕ್ಷ

Sydney Test: Team India got small lead in first innings

Sydney Test: ವೇಗಿಗಳ ಉರಿದಾಳಿಗೆ ನಲುಗಿದ ಆಸೀಸ್;‌ ಭಾರತಕ್ಕೆ ಅಲ್ಪ ಮುನ್ನಡೆ

INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್‌ ಶರ್ಮಾ; ವಿಡಿಯೋ ನೋಡಿ

INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್‌ ಶರ್ಮಾ; ವಿಡಿಯೋ ನೋಡಿ

Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.