ಜ. 21: ಶ್ರೀಕೃಷ್ಣಮಠ ಪರಿಸರದ ಸ್ವತ್ಛತೆ
Team Udayavani, Jan 12, 2017, 3:45 AM IST
ಉಡುಪಿ: ಶ್ರೀಕೃಷ್ಣ ಮಠದ ಪರಿಸರವನ್ನು ಜ. 21ರಂದು ಸ್ವತ್ಛಗೊಳಿಸುವ ನಿರ್ಣಯವನ್ನು ಬುಧವಾರ ನಡೆದ ಸಮಾಲೋಚನ ಸಭೆಯಲ್ಲಿ ತಳೆಯಲಾಯಿತು. ಸ್ವತ್ಛ ಭಾರತ ಆಂದೋಲನಕ್ಕೆ ಪೂರಕವಾಗಿ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಆಂತರಿಕ ಮತ್ತು ಸುತ್ತುಮುತ್ತಲಿನ ಪರಿಸರವನ್ನು ನಿರಂತರವಾಗಿ ಸ್ವತ್ಛವಾಗಿಡುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ನಿರ್ಧರಿಸಿದಂತೆ ಶ್ರೀಕೃಷ್ಣ ಮಠದಲ್ಲಿ ನಡೆದ ಸಭೆಯಲ್ಲಿ ಅದೇ ದಿನ ಅಷ್ಟಮಠಾಧೀಶರ ಪ್ರತಿನಿಧಿಗಳು, ನಾಗರಿಕರು ಹಾಗೂ ಭಕ್ತರನ್ನೊಳಗೊಂಡು ಸ್ವತ್ಛತಾ ಟಾಸ್ಕ್ಫೋರ್ಸ್ ರಚನೆಗೆ ತೀರ್ಮಾನಿಸಲಾಯಿತು. ಈ ಟಾಸ್ಕ್ಫೋರ್ಸ್ ಮೂಲಕ ಸ್ವತ್ಛತೆಯ ನಿರ್ವಹಣೆಯನ್ನು ಮಾಡಲಾಗುತ್ತದೆ.
ರಥಬೀದಿ ವ್ಯಾಪಾರಮುಕ್ತ: ಸರಕಾರದ ಸಹಕಾರ ಮತ್ತು ಅಷ್ಟಮಠಾಧೀಶರ ನೇತೃತ್ವದಲ್ಲಿ ಸಂಘರ್ಷರಹಿತವಾಗಿ ಉಡುಪಿ ರಥಬೀದಿ ಪರಿಸರವನ್ನು ವ್ಯಾಪಾರ ಮುಕ್ತ ಮಾಡಲು ಪ್ರಯತ್ನ ನಡೆಸಲಾಗುವುದು ಎಂದು ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹೇಳಿದರು.
ರಥಬೀದಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಂಗಡಿಗಳಿಂದಲೂ ರಥಬೀದಿ ಮುಕ್ತವಾದರೆ ರಥಬೀದಿಯಲ್ಲಿ ಹೆಚ್ಚಿನ ಸ್ವತ್ಛತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ವಿವಿಧ ಉತ್ಸವಗಳು ನಡೆಯುವಾಗ ಸ್ಥಳಾವಕಾಶದ ಕೊರತೆ ಇದೆ. ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸರಕಾರದ ಸಹಕಾರದೊಂದಿಗೆ ಅಷ್ಟಮಠಾಧೀಶರ ಸಮ್ಮುಖದಲ್ಲಿ ಇದನ್ನು ಮಾಡಲಾಗುತ್ತದೆ ಎಂದು ಹೇಳಿದರು.
ಶ್ರೀಕೃಷ್ಣ ಮಠದ ಆವರಣ, ಪಾರ್ಕಿಂಗ್ ಪ್ರದೇಶ ಹಾಗೂ ರಥಬೀದಿ ಸ್ವತ್ಛತೆ ಮಾಡಲಾಗುವುದು.
ರಥಬೀದಿಯನ್ನು ವಾಣಿಜ್ಯ ಮುಕ್ತಗೊಳಿಸಿ ಸಂಪೂರ್ಣ ಧಾರ್ಮಿಕ ಶ್ರದ್ಧಾ ಕೇಂದ್ರವನ್ನಾಗಿ ಮಾಡಬೇಕು ಎಂದು ಶ್ರೀ ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ತಿಳಿಸಿದರು. ಶ್ರೀಕೃಷ್ಣ ಮಠ ಮಾದರಿಯಲ್ಲೇ ಪ್ರತಿ ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ವರ್ಷಕ್ಕೆ ಒಂದು ದಿನ ಸಂಪೂರ್ಣ ಸ್ವತ್ಛತೆ ಮಾಡಬೇಕು ಎಂದು ಶ್ರೀಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥರು ಸಲಹೆ ನೀಡಿದರು. ಮಠದ ದಿವಾನ್ ರಘುರಾಮಾಚಾರ್ಯ, ಅದಮಾರು ಮಠದ ದಿವಾನ್ ವೆಂಕಟರಮಣ ಮುಚ್ಚಿಂತಾಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ನಿರ್ದೇಶಕ ಪಿ.ಕೆ. ಪುರುಷೋತ್ತಮ, ನಗರಸಭಾ ಸದಸ್ಯ ಶ್ಯಾಂಪ್ರಸಾದ್ ಕುಡ್ವ ಇದ್ದರು. ವಾಸುದೇವ ಭಟ್ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಡಂಪಿಂಗ್ ಯಾರ್ಡ್ ಆದ ಮಣ್ಣಪಳ್ಳ!
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Trasi: ಸಾಂಪ್ರದಾಯಿಕ ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ, ಗೋಪಾಲ ಪೂಜಾರಿ ಭಾಗಿ
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.