ಬಿ.ಟಿ. ಬದನೆಯಿಂದ ಮಟ್ಟುಗುಳ್ಳವನ್ನು ಪಾರು ಮಾಡಿದ ಕೃಷಿಕ ಲಕ್ಷ್ಮಣ್‌ ಮಟ್ಟು

ಭಾರತದಲ್ಲಿಯೇ ಮಾದರಿ ರೈತ ಉತ್ಪಾದಕ ಸಂಘ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹರಿಕಾರ

Team Udayavani, Dec 26, 2019, 5:16 AM IST

2312KPT1E-1

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಕಟಪಾಡಿ: ಮಟ್ಟುಗುಳ್ಳವನ್ನು ಬಿ.ಟಿ. ಬದನೆಯಿಂದ ಪಾರು ಮಾಡಿದ ಪದವೀಧರ ಕ್ರಾಂತಿಕಾರಿ ಕೃಷಿಕ ಲಕ್ಷ್ಮಣ ಮಟ್ಟು ಅವರು ಅಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ನಡೆದ ಹೋರಾಟದಲ್ಲಿ ಕಾಣಿಸಿಕೊಂಡಿದ್ದರು.

ಅಮೆರಿಕದ ಪ್ರಮುಖ ಕಂಪೆನಿಯಾದ ಮೊನ್ಸೆಂಟೋ ವಿರುದ್ಧ ಅಮೇರಿಕಾ ಅಧ್ಯಕ್ಷ ಒಬಾಮಾಭಾರತ ಭೇಟಿ ಸಂದರ್ಭ ಭಾರತದ 10 ಮಂದಿ ರೈತರ ಪೈಕಿ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕರ್ನಾಟಕದ ಮೊದಲ ರೈತ. ಸಾಂಪ್ರದಾಯಿಕ ಮಟ್ಟುಗುಳ್ಳವನ್ನು ಆಧುನಿಕ ವೈಜ್ಞಾನಿಕ ಕೃಷಿಯಾಗಿ ಪರಿವರ್ತಿಸಿ ಸಮಸ್ತ ಮಟ್ಟುಗುಳ್ಳ ಕೃಷಿಕರನ್ನು ಆರ್ಥಿಕವಾಗಿ ಅಭಿವೃದ್ಧಿ ಪಡಿಸುವಲ್ಲಿ ಮೊದಲಿಗನಾಗಿ ಗುರುತಿಸಿಕೊಂಡಿದ್ದರು. ಬೆಳೆ ಬೆಳೆದ ರೈತರೇ ತಮ್ಮ ಮಟ್ಟುಗುಳ್ಳ ಬೆಳೆಯ ದರವನ್ನು ನಿಗದಿ ಪಡಿಸುವಂತಹ, ಭಾರತದಲ್ಲಿಯೇ ಮಾದರಿಯಾದ ರೈತ ಉತ್ಪಾದಕ ಸಂಘವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹರಿಕಾರನಾಗಿದ್ದರು.
ಯುವಕರಿಗೆ, ಶಾಲಾ ಮಕ್ಕಳಿಗೆ ಶಾಲಾ ಕೈದೋಟ ಅಲ್ಲದೇ ತರಕಾರಿ ಬೆಳೆಸುವಲ್ಲಿ ತರಬೇತಿಯನ್ನು ನೀಡಿ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ.

ಅವಿಭಜಿತ ದ.ಕ. ಜಿಲ್ಲೆಗಳಲ್ಲಿ ಪ್ರಥಮ ಪ್ರೋಟ್ರೇ ಪದ್ಧತಿ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸಂಘವನ್ನು ಸ್ಥಾಪಿಸಿ ಟಿಲ್ಲರ್‌ ಖರೀದಿಸಿ ಐವರ ತಂಡದೊಂದಿಗೆ ಸುಮಾರು 10 ಎಕರೆ ಹಡಿಲು ಭೂಮಿಯನ್ನು ಅಭಿವೃದ್ಧಿಪಡಿಸಿ ಫಸಲು ಭರಿತ ಕೃಷಿಯನ್ನು ಬೆಳೆಸಿದ್ದರು.

ಭತ್ತದ ಬೆಳೆಯಲ್ಲಿ ಶ್ರೀಪದ್ಧತಿಯನ್ನು ಮಟ್ಟು ಗ್ರಾಮಕ್ಕೆ ಪರಿಚಯಿಸಿದ್ದ ಲಕ್ಷ್ಮಣ್‌, ಪ್ರೋಟ್ರೇ (ನರ್ಸರಿ ಮಾದರಿ)ಪದ್ಧತಿಯಲ್ಲಿ ತೆಂಗಿನ ನಾರಿನಿಂದ ಗುಳ್ಳದ ಗಿಡ ತಯಾರಿ ಅವಿಭಜಿತ ದ.ಕ. ಜಿಲ್ಲೆಗಳಲ್ಲಿಯೇ ಪ್ರಥಮವಾಗಿ ಅಳವಡಿಸಿದ್ದು ಮಾತ್ರವಲ್ಲದೇ ತರಕಾರಿಯಲ್ಲಿ ಮಲಿcಂಗ್‌ ಪದ್ಧತಿಯನ್ನು ಅಳವಡಿಸಿ, ಮಟ್ಟುಗುಳ್ಳಕ್ಕೆ ಹನಿ ನೀರಾವರಿ ಪದ್ಧತಿಯನ್ನು ಆರಂಭಿಸಿ ಇತರೇ ರೈತರಿಗೆ ಪ್ರೋತ್ಸಾಹ ನೀಡಿದ್ದು ಮಾತ್ರವಲ್ಲದೇ ಗ್ರಾಮದ 25 ಮಂದಿ ರೈತರಿಗೆ ಕಲ್ಲಂಗಡಿ ಬೆಳೆಯನ್ನು ಬೆಳೆಸಲು ಕೆ.ವಿ.ಕೆ ಬ್ರಹ್ಮಾವರ ಇವರಿಂದ ತರಬೇತಿಯನ್ನು ಕೊಡಿಸಿದ್ದಾರೆ. ತಂದೆ ಚಿನ್ನ ಆರ್‌.ಅಂಚನ್‌ ಮಾರ್ಗದರ್ಶನದಲ್ಲಿ ಎರಡು ಎಕರೆ ಪ್ರದೇಶದಲ್ಲಿ ಕಳೆದ 40 ವರ್ಷಗಳಿಂದ ಭತ್ತ, ಮಟ್ಟುಗುಳ್ಳ, ಬೆಂಡೆ, ತೆಂಗು, ಕೋಳಿ ಸಾಕಣೆ, ಟೊಮೆಟೋ, ಮೆಣಸು, ಅಲಸಂಡೆ, ಹರಿವೆ. ಪಪ್ಪಾಯಿ, ಇದೀಗ ಹಬ್ಬಹರಿದಿನಗಳಲ್ಲಿ ಹೆಚ್ಚು ಬೇಡಿಕೆ ಇರುವ ತಾವರೆ ಹೂವನ್ನು ಕೊಳದಲ್ಲಿ ಬೆಳೆಯುವ ಮೂಲಕ ಕೃಷಿಯಲ್ಲಿ ಹೊಸ ಪ್ರಯೋಗ ಶೀಲರಾಗಿದ್ದಾರೆ.ಕೃಷಿಯಲ್ಲಿ ಟಿಲ್ಲರ್‌, ಪವರ್‌ ಸ್ಪೆÅàಯರ್‌, ಪಂಪ್‌ ಸೆಟ್‌, ಶ್ರೀಪದ್ಧತಿಯ ಸ್ವತಃ ಸಿದ್ಧ ಪಡಿಸಿದ ಅಳತೆಗೋಲು ಅವರು ಬಳಸುವ ಯಂತ್ರೋಪಕರಣಗಳಾಗಿದ್ದು, ತಾಯಿ ವನಜಾ, ಪತ್ನಿ ಪ್ರಮೀಳಾ, ಮಕ್ಕಳಾದ ಅಮಿತ್‌, ನಿಶಿತ್‌, ಮನೆಮಂದಿ ಇವರೊಂದಿಗೆ ಕೃಷಿಯಲ್ಲಿ ಕೈ ಜೋಡಿಸುತ್ತಾರೆ.

ವಿದೇಶೀ ಅಧ್ಯಯನ ತಂಡ,
ನಬಾರ್ಡ್‌ ಅಧಿಕಾರಿಗಳಿಗೆ ಮಾಹಿತಿ
ಅಮೆರಿಕದ ಪೆನ್ಸಿಲ್ವೇನಿಯಾ ಯುನಿವರ್ಸಿಟಿ, ಮಲೇಷಿಯಾದ ಇಂಟರ್‌ನ್ಯಾಶನಲ್‌ ಮಣಿಪಾಲ ಯುನಿವರ್ಸಿಟಿ ವಿದ್ಯಾರ್ಥಿಗಳಿಗೆ, ಭಾರತದ ಎಲ್ಲಾ ರಾಜ್ಯಗಳ ನಬಾರ್ಡ್‌ ಟ್ರೈನಿಂಗ್‌ ಅಧಿಕಾರಿಗಳಿಗೆ, ವಿವಿಧ ಅಧ್ಯಯನ ಶೀಲರಿಗೆ ಮಟ್ಟುಗುಳ್ಳದ ಬೆಳೆಗಾರಿಕೆ, ಮಾರುಕಟ್ಟೆ, ಸಹಿತ ಸಂಘದ ಕಾರ್ಯ ವೈಖರಿಯ ಬಗ್ಗೆ ಮಾಹಿತಿಯನ್ನು ನೀಡಿರುವ ಲಕ್ಷ್ಮಣ್‌ ಅವರು ಮಟ್ಟುಗುಳ್ಳ ಬೆಳೆಗಾರರ ಸಂಘದ ಕಾರ್ಯನಿರ್ವಹಣಾಧಿಕಾರಿ ಯಾಗಿರುತ್ತಾರೆ.

ಕೃಷಿ ಮೇಳದಲ್ಲಿ ಗೌರವ
ಕೃಷಿ ಮೇಳಗಳಲ್ಲಿ ತಮ್ಮದೇ ಆದ ಶೈಲಿಯಲ್ಲಿ ರಂಗಮಂದಿರ ನಿರ್ಮಾಣ, ರೈತ ಸಂಚಾರಿ ಮಾರುಕಟ್ಟೆ ಸ್ಥಾಪನೆಯ ಮೂಲಕ ಗೌರವಕ್ಕೊಳಗಾಗಿದ್ದು, ಮಾತ್ರವಲ್ಲದೇ ಸ್ಥಳೀಯವಾಗಿ ಯುವ ಸಾಧನಾ ಪ್ರಶಸ್ತಿ ಸಹಿತ ಸಮ್ಮಾನದ ಗೌರವಗಳನ್ನು ಬಾಚಿಕೊಂಡಿದ್ದಾರೆ.

ಕೃಷಿಯಿಂದ ಒತ್ತಡರಹಿತ ಜೀವನ
ಯುವ ಶಕ್ತಿಯು ವೈಜ್ಞಾನಿಕ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಆದಾಯ, ಆರೋಗ್ಯ ವೃದ್ಧಿ ಮಾಡಿಕೊಳ್ಳಬಹುದು. ಯಾವುದೇ ಒತ್ತಡದ ಉದ್ಯೋಗಕ್ಕಿಂತಲೂ ಹೆಚ್ಚಿನ ಪಾಲು ಆದಾಯವನ್ನು ಆಧುನಿಕ ಕೃಷಿಯಲ್ಲಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಯಾರದ್ದೂ ಹಂಗಿಲ್ಲದೆ, ಅಡಿಯಾಳಾಗದೇ, ಒತ್ತಡ ರಹಿತ ಜೀವನ ಕೃಷಿಯಿಂದ ಕಟ್ಟಿಕೊಳ್ಳಬಹುದು. 10 ಕ್ವಿಂಟಾಲ್‌ ಅಕ್ಕಿ ಸಹಿತ ಸುಮಾರು 4 ಲಕ್ಷ ರೂ.ಗೂ ಅಧಿಕ ಆದಾಯ ಕೃಷಿ ಮೂಲದಿಂದ ಲಭಿಸುತ್ತದೆ . ಶ್ರಮ ಪಟ್ಟು ಕೆಲಸ ಮಾಡಿದರೆ ಕೃಷಿಯಿಂದ ಲಾಭ ಗಳಿಸಲು ಸಾಧ್ಯ
– ಲಕ್ಷ್ಮಣಮಟ್ಟು,ಕೃಷಿಕ

ಹೆಸರು:
ಲಕ್ಷ್ಮಣ ಮಟ್ಟು
ಏನೇನು ಕೃಷಿ:
ಭತ್ತ, ಮಟ್ಟುಗುಳ್ಳ ಹಾಗೂ ಇತರ ತರಕಾರಿ, ತೆಂಗು, ತಾವರೆ ಹೂವು
ಎಷ್ಟು ವರ್ಷ: 40
ಕೃಷಿ ಪ್ರದೇಶ:
ಎರಡು ಎಕರೆ ಸಂಪರ್ಕ ಸಂಖ್ಯೆ: 9964069001

-ವಿಜಯ ಆಚಾರ್ಯ,ಉಚ್ಚಿಲ

ಟಾಪ್ ನ್ಯೂಸ್

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11(1)

Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ

8

Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

10

Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು

11(1)

Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

Receive Kantraj report and reveal: Anjaney’s appeal to CM

Davanagere: ಕಾಂತರಾಜ್‌ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ

ಬೆಳಗಾವಿ:ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ

ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.