ಬಡಾ ಗ್ರಾಮ ಉಚ್ಚಿಲ: ಮರೀಚಿಕೆಯಾಗುಳಿದ ಸರ್ವೀಸ್ ರಸ್ತೆ ನಿರ್ಮಾಣ
Team Udayavani, May 14, 2019, 6:00 AM IST
ಪಡುಬಿದ್ರಿ: ಬಡಾಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣವು ಮರೀಚಿಕೆಯಾಗಿದೆ. ಪೂರ್ಣ ಗೊಂದಲಮಯವಾಗಿ ಸಂಚರಿಸುವ ಸ್ಥಳೀಯ ವಾಹನಗಳಿಂದಾಗಿ ಸರ್ವಿಸ್ ರಸ್ತೆ ಕುರಿತಾಗಿ ಹೆದ್ದಾರಿ ಅಧಿಕಾರಿಗಳ, ಉಡುಪಿ ಜಿಲ್ಲಾಡಳಿತದ ಭರವಸೆಯ ಮಾತುಗಳ ಬಗೆಗೆ ಸಾರ್ವಜನಿಕರಲ್ಲಿ ಅನುಮಾನವು ಕಾಡುತ್ತಿದೆ.
ಉಚ್ಚಿಲ ಪೇಟೆಯು ಜನನಿಬಿಡ ಸ್ಥಳವಾಗಿದ್ದು, ವೇಗದೂತ ಬಸ್ಸು ತಂಗುದಾಣಗಳ ಸಹಿತ ಹಲವು ವ್ಯಾಪಾರ ಮಳಿಗೆಗಳನ್ನು ಹೊಂದಿರುವ ಪ್ರಮುಖ ಪೇಟೆಯಾಗಿದೆ. ದೂರದೂರಿಗೆ ಸಹಿತ ಉಡುಪಿ-ಮಂಗಳೂರು ಭಾಗದತ್ತ ತೆರಳುವ ಮಂದಿ ಸಹಿತ ಪಣಿಯೂರು – ಎಲ್ಲೂರು – ಮುದರಂಗಡಿಗೆ ಇಲ್ಲಿಂದಲೇ ಸಂಪರ್ಕ ರಸ್ತೆಯೂ ಇದೆ. ಸಾವಿರಾರು ಜನರು ಉಚ್ಚಿಲ ಪೇಟೆಯನ್ನೇ ತಮ್ಮ ಕೆಲಸ ಕಾರ್ಯಗಳಿಗೆ ಆಶ್ರಯಿಸಿದ್ದಾರೆ. ಹಾಗಾಗಿ ಇಲ್ಲಿ ಸಾರ್ವಜನಿಕ ಸುರಕ್ಷತೆ ಅಷ್ಟೇ ಮುಖ್ಯವಾಗಿದೆ. ಸುಗಮ ಸಂಚಾರಕ್ಕಾಗಿ ಹೆದ್ದಾರಿ ಬದಿಯ ಸರ್ವಿಸ್ ಸಂಪರ್ಕ ರಸ್ತೆಯ ರಚನೆಯು ಅತ್ಯವಶ್ಯವಾಗಿದೆ.
2017ರಲ್ಲಿ ಕೊಟ್ಟ ಮಾತು
ಮರೆತ ರಾ. ಹೆ. ಅ.ಪ್ರಾಧಿಕಾರ
2017ರ ಅ. 23ರಂದು ಬಡಾಗ್ರಾಮ ಪಂಚಾಯತ್ ಆಶ್ರಯದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ಮುಖ್ಯ ನಿರ್ದೇಶಕ ವಿಜಯ ಸ್ಯಾಮ್ಸನ್ ಉಚ್ಚಿಲ ಬಡಾಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2 ಕಿ. ಮೀ. ಪ್ರಸ್ತಾವನೆ ಕಳುಹಿಸಲಾಗಿದ್ದ ಸರ್ವೀಸ್ ರಸ್ತೆಯನ್ನು ಗ್ರಾಮಸ್ಥರ ಬೇಡಿಕೆಯಂತೆ 3 ಕಿ. ಮೀ.ಗೆ ಹೆಚ್ಚಿಸಿ 1 ತಿಂಗಳೊಳಗಾಗಿ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದಿದ್ದರು. ಆದರೆ ಯಾವುದೂ ಕಾರ್ಯರೂಪಕ್ಕಿಳಿದಿಲ್ಲ.
ಅದಮಾರು ತಿರುವಿನಿಂದ ಮೂಳೂರು ಕಾರ್ಪೋರೇಶನ್ ಬ್ಯಾಂಕ್‌ವರೆಗೆ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಸರ್ವೀಸ್ ರಸ್ತೆ ನಿರ್ಮಿಸಲು ಅಂದು ಒತ್ತಾಯಿಸಲಾಗಿತ್ತು. ಉಚ್ಚಿಲ ಸರಸ್ವತಿ ಮಂದಿರ ಶಾಲೆಯ ಬಳಿ ಅಂಡರ್‌ಪಾಸ್ ನಿರ್ಮಿಸಲು ಆಗ್ರಹಿಸಲಾಗಿತ್ತು.
ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ
2017ರ ಅ. 25 ರಂದು ಸಂಜೆಯ ವೇಳೆಗೆ ಉಚ್ಚಿಲ ಭಾಗದ ಸಾರ್ವಜನಿಕರ ಅನುಕೂಲದ ಬೇಡಿಕೆಗಳ ಪರಿಶೀಲನೆ ನಡೆಸಲು ಅಂದಿನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಪೊಲೀಸ್ ವರಿಷ್ಠಾಧಿಕಾರಿ ಡಾ | ಸಂಜೀವ ಎಂ. ಪಾಟೀಲ್, ಎ. ಸಿ. ಶಿಲ್ಪಾ ನಾಗ್ ಅವರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಜತೆ ಭೇಟಿ ನೀಡಿದ್ದರು.
ಸ್ಥಳದಲ್ಲಿ ಜಮಾಯಿಸಿದ್ದ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿ ಅವರು ಎನ್. ಎಚ್. ಎ. ಐ., ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರೊಡನೆ ಮಾತುಕತೆ ನಡೆಸಿ ವಿವರಣೆ ಸಂಗ್ರಹಿಸಿ ಹೆದ್ದಾರಿಯ ಸ್ಥಳ ವೀಕ್ಷಣೆ ನಡೆಸಿದರು. ಆದರೆ ಯಾವ ಕಾಮಗಾರಿಗಳೂ ಈವರೆಗೆ ನಡೆದಿಲ್ಲ.
ಕೇವಲ ಬಸ್ ಬೇ ನಿರ್ಮಾಣ ಮಾತ್ರವನ್ನೇ ಉಚ್ಚಿಲ ಪೇಟೆ ಕಂಡಿದೆ. ಹೆದ್ದಾರಿ ಪಕ್ಕದಲ್ಲಿ ಎರಡು ಶಾಲೆಗಳು, ಸಭಾಭವನಗಳು, ದೇವಾಲಯಗಳು, ಚರ್ಚ್, ಮಸೀದಿ, ವಾಣಿಜ್ಯ ಮಳಿಗೆಗಳನ್ನು ಹೊಂದಿರುವ ಜನನಿಬಿಡ-ವಾಹನ ದಟ್ಟಣೆಯ ಪ್ರದೇಶವಾಗಿರುವ ಉಚ್ಚಿಲ ಭಾಗದಲ್ಲಿ ಅಧಿಕಾರಿಗಳು ನೀಡಿದ ಭರವಸೆಗಳಿಗೆ ಇದೀಗ ಸುಮಾರು ಒಂದೂವರೆ ವರ್ಷಗಳಷ್ಟು ಕಾಲ ಕಳೆದು ಹೋಗಿದೆ. ಅಪಘಾತಗಳ
ಸರಮಾಲೆಯೇ ಹೆದ್ದಾರಿ ಭಾಗದಲ್ಲಿ ನಡೆದಿದೆ. ಸಾವುಗಳೂ ಸಂಭವಿಸಿದೆ. ಆದರೆ ಸಂಬಂಧಪಟ್ಟ ಯಾವುದೇ ಇಲಾಖೆಯು ಈ ಬಗ್ಗೆ ಗಮನ ಹರಿಸುತ್ತಿಲ್ಲ.
ತಹಶೀಲ್ದಾರರಿಗೆ ಸೂಚಿಸಲಾಗಿದೆ
ಮುಂದಿನ ವಾರದೊಳಗಾಗಿ ಜಿಲ್ಲೆಯ ಶಿರೂರಿನಿಂದ ಹೆಜಮಾಡಿಯವರೆಗೆ 68 ಗ್ರಾಮಗಳಲ್ಲಿ ಹಾದು ಹೋಗುತ್ತಿರುವ ರಾ.ಹೆ. ಚತುಷ್ಪಥದ ಮಿಕ್ಕುಳಿದ ಕಾಮಗಾರಿಗಳೇನು? ಎಲ್ಲೆಲ್ಲಿ ಏನೇನು ಕಾಮಗಾರಿಯ ಕೊರತೆಗಳಿವೆ ಎನ್ನುವುದನ್ನು ಪಟ್ಟಿಮಾಡಿಕೊಂಡು ವರದಿ ಮಾಡಲು ಈಗಾಗಲೇ ಆಯಾಯ ತಹಶೀಲ್ದಾರರಿಗೆ ಸೂಚಿಸಲಾಗಿದೆ. ಈ ವರದಿಯನ್ನು ಆಧರಿಸಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಕುರಿತಾಗಿ ವಿಸ್ತೃತ ಸಭೆಯನ್ನು ನಡೆಸಲಾಗುವುದು.
– ಡಾ|ಎಸ್.ಎಸ್.ಮಧುಕೇಶ್ವರ್,
ಕುಂದಾಪುರ ಸಹಾಯಕ ಕಮಿಷನರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.