ಬೈಕಾಡಿ ಸಸ್ಯಕ್ಷೇತ್ರ: 50,000 ವಿಭಿನ್ನ ಜಾತಿ ಸಸಿ ಸಿದ್ಧ
Team Udayavani, May 24, 2018, 6:00 AM IST
ಬ್ರಹ್ಮಾವರ: ಅರಣ್ಯ ಇಲಾಖೆಯ ಬೈಕಾಡಿ ಸಸ್ಯಕ್ಷೇತ್ರದಲ್ಲಿ ಮಳೆಗಾಲದ ನಾಟಿಗೆ ಅನುಕೂಲ ವಾಗುವಂತೆ ವಿಭಿನ್ನ ಜಾತಿಯ 50,900 ಸಸಿಗಳನ್ನು ಸಿದ್ಧಗೊಳಿಸಲಾಗಿದೆ.
ಮುಖ್ಯವಾಗಿ ಮಹಾಘನಿ, ಬೇಂಗ, ಹಲಸು, ಹೆಬ್ಬಲಸು, ಮುರಿಯ, ಹೊಳೆದಾಸವಾಳ, ಕಕ್ಕೆ, ಬಿಲ್ವಪತ್ರೆ, ಬಿಲ್ವಾರ, ಸಾಗುವಾನಿ, ಶ್ರೀಗಂಧ, ಶಿವನೆ, ಕಹಿಬೇವು, ದೂಪ, ಮೇಫÉವರ್, ನೇರಳೆ, ಬಾದಾಮಿ, ಬೀಟೆ ಹೀಗೆ ಸುಮಾರು 30 ಬಗೆಯ ಗಿಡಗಳನ್ನು ತಯಾರುಗೊಳಿಸಲಾಗಿದೆ.
ಸಾರ್ವಜನಿಕರಿಗೆ ಲಭ್ಯ
ಬೈಕಾಡಿ ಸಸ್ಯಕ್ಷೇತ್ರದಲ್ಲಿ 17,500 ಸಸಿಗಳು ಸಾರ್ವ ಜನಿಕರಿಗೆ ದೊರೆಯಲಿದೆ. ಉಳಿದದ್ದು ನಡುತೋಪು, ಹಸಿರು ನಗರ ಅಭಿವೃದ್ದಿ, ಅರಣ್ಯ ಅಭಿವೃದ್ದಿಗೆ ಬಳಕೆಯಾಗುತ್ತದೆ.
ದರ ಎಷ್ಟು..?
ಚಿಕ್ಕ ಲಕೋಟೆಯ ಸಸಿ 1 ರೂ.ನಂತೆ, ದೊಡ್ಡದು 3 ರೂ. ನಂತೆ ದೊರೆಯಲಿದೆ. ಜೂನ್ ಪ್ರಥಮ ವಾರದಿಂದ ವಿತರಣೆ ಪ್ರಾರಂಭವಾಗಲಿದೆ.
ಪ್ರೋತ್ಸಾಹಧನ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಪ್ರೋತ್ಸಾಹ ಧನವೂ ದೊರೆಯಲಿದೆ. ಭೂಮಿಯ ಆರ್.ಟಿ.ಸಿ. ಜತೆಗೆ ಬ್ಯಾಂಕ್ ಪಾಸ್‌ಬುಕ್ ಪ್ರತಿ, ಭಾವಚಿತ್ರ, ಆಧಾರ್‌ಕಾರ್ಡ್ ನೀಡಬೇಕು. ಬದುಕುಳಿದ ಸಸಿಗಳಿಗೆ ಮುಂದಿನ ಮೇ ತಿಂಗಳಿನಲ್ಲಿ ತಲಾ ರೂ.30, ಮುಂದಿನ ವರ್ಷ ಮತ್ತೆ ರೂ. 30 ಹಾಗೂ 3ನೇ ವರ್ಷ ರೂ. 40 ಸಹಾಯಧನ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ. ಒಂದು ಎಕ್ರೆ ಭೂಮಿ ಹೊಂದಿದವರು ವಿಭಿನ್ನ ತಳಿಯ 500 ಸಸಿ ಪಡೆಯಬಹುದು.
ಬೈಕಾಡಿ ಸಸ್ಯಕ್ಷೇತ್ರ ಎಲ್ಲಿದೆ ?
ಬ್ರಹ್ಮಾವರ ದೂಪದಕಟ್ಟೆಯಿಂದ ಹಾರಾಡಿ ಮಾರ್ಗ ದಲ್ಲಿ ಕೇವಲ 200 ಮೀ. ತೆರಳಿದರೆ ಬೈಕಾಡಿ ಸಸ್ಯಕ್ಷೇತ್ರ ಸಿಗುತ್ತದೆ. ರಾ.ಹೆ. 66ರ ಸಮೀಪದಲ್ಲಿರುವುದರಿಂದ ಗಿಡ ಗಳನ್ನು ಕೊಂಡುಹೋಗಲು ಸಾರ್ವಜನಿಕರಿಗೆ ಸಹಕಾರಿ ಆಗಿದೆ.
ಜಿಲ್ಲೆಯಲ್ಲಿ ಎಲ್ಲೆಲ್ಲಿ ಲಭ್ಯ ?
ಉಡುಪಿ ಜಿಲ್ಲೆಯಲ್ಲಿ ಬೈಂದೂರಿನ ಸರ್ಪನಕಟ್ಟೆ, ಕುಂದಾಪುರದ ಮಾವಿನಗುಳಿ ನೇರಳಕಟ್ಟೆ, ಶಂಕರ ನಾರಾಯಣ, ಹೆಬ್ರಿಯ ಮಡಾಮಕ್ಕಿ, ಕಾರ್ಕಳದ ಶಿರ್ಲಾಲಿನಲ್ಲಿ ಸಸ್ಯ ಕ್ಷೇತ್ರಗಳಿವೆ.
ಗುಣಮಟ್ಟದ ಸಸಿ
ಹೊಸ ಮಣ್ಣು ಹಾಗೂ ಗೊಬ್ಬರವನ್ನು ಮಿಶ್ರಣ ಮಾಡಲಾಗುತ್ತದೆ. ಪ್ಲಾಸ್ಟಿಕ್ ಲಕೋಟೆಯಲ್ಲಿ ಗಿಡ ಮಾಡಿ ಪ್ರತಿನಿತ್ಯ ನೀರುಣಿಸಿ ಜೋಪಾನ ಮಾಡಲಾಗುತ್ತದೆ. ಕೆಲವು ತಳಿಯ ಸಸಿಗಳಿಗೆ ಒಂದು ವರ್ಷದ ಮೊದಲೇ ಬೀಜ ಹಾಕಿ ಆರೈಕೆ ಪ್ರಾರಂಭಿಸಲಾಗುತ್ತದೆ. ಆಗಸ್ಟ್ ನಂತರ ನಿರಂತರ ಅಭಿವೃದ್ಧಿ ಪಡಿಸಿ ಜೂನ್‌ನಲ್ಲಿ ನಾಟಿಗೆ ಸಿದ್ಧಗೊಳ್ಳುತ್ತದೆ.
ಮುತುವರ್ಜಿ ವಹಿಸಿ
ಗಿಡ ಪಡೆದವರು ಮುತುವರ್ಜಿ ವಹಿಸಿ ಸಾಕಾಣಿಕೆ ಮಾಡಿದರೆ ಮಾತ್ರ ಕೆಲಸ ಸಾರ್ಥಕವಾಗುತ್ತದೆ. ಹಸಿರು ಹೊದಿಕೆ ರಚನೆಗೆ ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಿದಂತಾಗುತ್ತದೆ.
– ಜೀವನ್‌ದಾಸ್ ಶೆಟ್ಟಿ,
ಉಪವಲಯ ಅರಣ್ಯಾಧಿಕಾರಿ
– ಪ್ರವೀಣ್ ಮುದ್ದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.