ಸಂಚಾರ ದುಸ್ತರವಾದ ಜಾರ್ಕಳ -ಕುಕ್ಕಿಲ ರಸ್ತೆ
ಪ್ರಯೋಜನಕ್ಕೆ ಬಾರದ ಹೊಸ ಸೇತುವೆ ; ಸಂಪೂರ್ಣ ಕಿತ್ತುಹೋದ ಡಾಮರು
Team Udayavani, Jun 29, 2019, 5:06 AM IST
ವಿಶೇಷ ವರದಿ – ಅಜೆಕಾರು: ಬೈಲೂರು ಗ್ರಾ.ಪಂ. ವ್ಯಾಪ್ತಿಯ ಜಾರ್ಕಳ -ಕುಕ್ಕಿಲ ರಸ್ತೆ ಡಾಮರು ಭಾಗ್ಯ ಕಾಣದೆ, ಕಚ್ಚಾ ರಸ್ತೆಯಾಗಿ ಉಳಿದಿದ್ದು ರಸ್ತೆಯಲ್ಲಿ ಮಳೆ ನೀರು ನಿಂತು ರಸ್ತೆ ಸಂಪೂರ್ಣ ಕೆಸರಿನಿಂದ ಆವೃತವಾಗಿದೆ.
ಸುಮಾರು 3 ಕಿ.ಮೀ.ಯಷ್ಟು ಉದ್ದ ವಿರುವ ಈ ರಸ್ತೆಯ ಅರ್ಧ ಕಿ.ಮೀ ಭಾಗಕ್ಕೆ ಸುಮಾರು 15 ವರ್ಷಗಳ ಹಿಂದೆ ಡಾಮಾರು ಮಾಡಲಾಗಿತ್ತಾದರೂ ಅದು ಈಗ ಸಂಪೂರ್ಣ ಕಿತ್ತು ಹೋಗಿದ್ದು, ರಸ್ತೆ ಹೊಂಡಗುಂಡಿಗಳಿಂದ ಕೂಡಿದೆ.
ಈ ರಸ್ತೆ ಕುಕ್ಕುಂದೂರು ಗ್ರಾ.ಪಂ.ನ ನಕ್ರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೂಡು ರಸ್ತೆಯಾಗಿದ್ದು, ಪ್ರತಿನಿತ್ಯ ವಾಹನ ಹಾಗೂ ಪಾದಚಾರಿಗಳು ಇಲ್ಲಿ ಸಂಚರಿಸುತ್ತಿದ್ದಾರೆ. ಈ ರಸ್ತೆ ಮುಖಾಂತರ ಅಂಗನವಾಡಿ, ಶಾಲಾ ಮಕ್ಕಳು, ನಿತ್ಯ ಪ್ರಯಾಣಿಕರು ಪ್ರತಿದಿನ ಸಂಚರಿಸುತ್ತಿದ್ದು, ಇವರಿಗೆ ತೀವ್ರ ತೊಂದರೆಯಾಗಿದೆ.
ಚರಂಡಿ ವ್ಯವಸ್ಥೆ ಇಲ್ಲ
ರಸ್ತೆಯ ಇಕ್ಕೆಲಗಳಲ್ಲಿ ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ನೀರು ರಸ್ತೆಯಲ್ಲಿಯೇ ಹರಿಯು ತ್ತಿದೆ. ಅಲ್ಲದೆ ರಸ್ತೆಯ ಹೊಂಡಗಳಲ್ಲಿ ನೀರು ನಿಂತಿರುವುದರಿಂದ ವಾಹನ ಸಂಚಾರರು ಅಪಘಾತಕ್ಕೆ ಈಡಾಗುತ್ತಿದ್ದಾರೆ.
ಮರಗಿಡಗಳಿಂದ ಆವೃತ ರಸ್ತೆ
ರಸ್ತೆಯ ಇಕ್ಕೆಲಗಳಲ್ಲಿರುವ ಗಿಡ ಮರ ಗಳು ರಸ್ತೆಗೆ ಬಾಗಿಕೊಂಡಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಪ್ರಯೋಜನಕ್ಕೆ ಬಾರದ ಸೇತುವೆ ಈ ರಸ್ತೆಯಲ್ಲಿಯೇ ಇರುವ ನದಿಗೆ ಸುಸಜ್ಜಿತ ಸೇತುವೆ ನಿರ್ಮಾಣವಾಗಿದೆ ಯಾದರೂ ಸಂಪೂರ್ಣ ಹದಗೆಟ್ಟ ರಸ್ತೆಯಿಂದಾಗಿ ಸೇತುವೆ ಪ್ರಯೋಜನಕ್ಕೆ ಬಾರದಂತಾಗಿದೆ. ಜನರ ಬೇಡಿಕೆಯಂತೆ ಸೇತುವೆ ನಿರ್ಮಾಣವಾಗಿದ್ದು, ಜತೆಗೆ ರಸ್ತೆಯೂ ಅಭಿವೃದ್ಧಿಗೊಂಡಲ್ಲಿ ಸ್ಥಳೀಯರಿಗೆ ಬಹಳಷ್ಟು ಅನುಕೂಲವಾಗಬಹುದಾಗಿದೆ.
ಹಲವು ಬಾರಿ ಮನವಿ
ದಶಕಗಳಿಂದ ಹದಗೆಟ್ಟಿರುವ ರಸ್ತೆ ಯನ್ನು ದುರಸ್ತಿಪಡಿಸುವಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ನಿರಂತರ ಮನವಿ ಮಾಡಿದರೂ ಈವರೆಗೂ ರಸ್ತೆ ಅಭಿವೃದ್ಧಿಯಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಅನುದಾನಕ್ಕೆ ಪ್ರಯತ್ನ
ಈಗಾಗಲೇ ಈ ರಸ್ತೆಯಲ್ಲಿರುವ ಕುಕ್ಕಿಲ ಸಮೀಪದ ಸೇಸ ಸುವರ್ಣ ಮನೆ ಬಳಿ ಸೇತುವೆಯನ್ನು ಕೇಂದ್ರ ರಸ್ತೆ ನಿಧಿ ಅನುದಾನದಿಂದ ನಿರ್ಮಾಣ ಮಾಡಲಾಗಿದ್ದು, ಶೀಘ್ರದಲ್ಲೇ ಈ ರಸ್ತೆಯ ಕಾಮಗಾರಿಗೆ ಶಾಸಕರ ಹಾಗೂ ಸಂಸದರ ನಿಧಿಯಿಂದ ಅನುದಾನ ಬಿಡುಗಡೆಗೊಳಿಸಲು ಪ್ರಯತ್ನಿಸಿ ರಸ್ತೆ ಅಭಿವೃದ್ಧಿಗೊಳಿಸಲಾಗುವುದು.
-ಸುಮಿತ್ ಶೆಟ್ಟಿ,ಜಿಲ್ಲಾ ಪಂಚಾಯತ್,ಸದಸ್ಯರು
ಸಂಚಾರ ಅಸಾಧ್ಯ
ರಸ್ತೆ ಅತ್ಯಂತ ಹದಗೆಟ್ಟಿದ್ದು ಸಂಚಾರ ನಡೆಸುವುದೇ ಅಸಾಧ್ಯವಾಗಿದೆ. ಶೀಘ್ರ ಇದನ್ನು ದುರಸ್ತಿಗೊಳಿಸಿ ಈ ಭಾಗದ ಜನರಿಗೆ ಸಂಚಾರಕ್ಕೆ ಯೋಗ್ಯ ರಸ್ತೆ ನಿರ್ಮಿಸಿಕೊಡುವಲ್ಲಿ ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು ಸ್ಪಂದಿಸಬೇಕಾಗಿದೆ.
-ಮಹೇಂದ್ರ ಕಾಮತ್, ಕಂಬಳ ಕೋಡಿ,ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.