ಬಜಗೋಳಿ ಪೇಟೆಯಲ್ಲಿ ರಾಶಿಬಿದ್ದಿದೆ ತ್ಯಾಜ್ಯ
Team Udayavani, Jul 2, 2018, 6:00 AM IST
ಕಾರ್ಕಳ: ಹರಿದ ಗೋಣಿ ಚೀಲಗಳು, ಪ್ಲಾಸ್ಟಿಕ್ ತೊಟ್ಟೆಗಳು, ಹುಡಿ ಯಾಗಿ ಬಿದ್ದಿರುವ ಗಾಜಿನ ಗ್ಲಾಸ್‌ಗಳು, ಬಿಯರ್ ಬಾಟಲ್‌ಗಳು, ರಟ್ಟು, ಪೇಪರ್ ತುಂಡುಗಳು, ಬೊಂಡದ ಚಿಪ್ಪುಗಳು, ತರಕಾರಿ ತ್ಯಾಜ್ಯಗಳು, ನೊಣಗಳು ಹಾರಾಡುತ್ತ, ನಾಯಿಗಳು ತಿನ್ನುತ್ತಿರುವ ಕೊಳೆತ ಆಹಾರ ಪದಾರ್ಥಗಳು ಇಂತಹ ತ್ಯಾಜ್ಯ, ಕೊಳಕುಗಳ ದರ್ಶನವಾಗುತ್ತಿರುವುದು ತಾಲೂಕಿನ ಬಜಗೋಳಿ ಪೇಟೆಯಲ್ಲಿ…
ವಿಲೇವಾರಿ ಮಾಡಿದರೂ ಅಷ್ಟೇ !
ಇಲ್ಲಿ ಕಸ ವಿಲೇವಾರಿ ವಾಹನ ಪ್ರತಿ ದಿನ ಬರುತ್ತದೆ. ಅವರು ತುಂಬಿಸಿಟ್ಟ ತ್ಯಾಜ್ಯಗಳನ್ನು ಮಾತ್ರ ಸಾಗಿಸುತ್ತಾರೆ. ಅದರಲ್ಲೂ ಕೆಲವು ಆಯ್ದ ಕಸವನ್ನು ಮಾತ್ರ ಕೊಂಡೊಯ್ಯುತ್ತಾರೆ ಎನ್ನುವ ಆರೋಪವಿದೆ. ಉಳಿದಂತೆ ಇಲ್ಲಿನ ಕಸ ವಿಲೇವಾರಿಯಾಗುವುದೇ ಇಲ್ಲ.
ಸಾಂಕ್ರಾಮಿಕ ರೋಗದ ಭೀತಿ
ಸದ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಡೆಂಗ್ಯೂ, ಮಲೇರಿಯಾ ಬಾಧೆ ಹೆಚ್ಚಾಗುತ್ತಿದೆ. ಬಜಗೋಳಿಯಲ್ಲೂ ಇದರ ಬಗ್ಗೆ ಕಿಂಚಿತ್ತೂ ಕಾಳಜಿ ತೋರಿದಂತಿಲ್ಲ. ಮಳೆಗಾಲಕ್ಕೂ ಮೊದಲೇ ಅಲ್ಲಿ ಬಿದ್ದಂತಹ ಕಸ ತ್ಯಾಜ್ಯಗಳು ಇನ್ನೂ ಹಾಗೆಯೇ ಇದ್ದು, ಸೊಳ್ಳೆ ಉತ್ಪತ್ತಿ ಕೇಂದ್ರದಂತಿದೆ. ಪೇಟೆಯ ಆಸುಪಾಸಿನ ಜನತೆ ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ.
ಬಜಗೋಳಿ ಪೇಟೆಯಲ್ಲಿ ಒಳಚರಂಡಿ ವ್ಯವಸ್ಥೆ ಪ್ರಾರಂಭಿಸಿ ಐದಾರು ತಿಂಗಳುಗಳೇ ಕಳೆದು ಹೋಗಿದೆ. ಅದಿನ್ನೂ ನಿಧಾನವಾಗಿ ಸಾಗುತ್ತಿದ್ದು ಪ್ರಗತಿ ಕಂಡಿಲ್ಲ. ಹೀಗಾಗಿ ಒಳಚರಂಡಿ ವ್ಯವಸ್ಥೆಗೆಂದು ಅಗೆದು ಹಾಕಿರುವ ಮಣ್ಣಿನಿಂದಾಗಿ ಪೇಟೆ ಮತ್ತಷ್ಟು ಮಲೀನಗೊಳ್ಳುತ್ತಿದೆ ಎಂಬುದು ಸ್ಥಳೀಯರ ದೂರು.
ಎಲ್ಲರ ಜವಾಬ್ದಾರಿ
ಬಜಗೋಳಿ ಪೇಟೆಯಲ್ಲಿ ದಿನದಿಂದ ದಿನಕ್ಕೆ ಮಲೀನ ಹೆಚ್ಚಾಗುತ್ತಿದೆ. ಸ್ಥಳೀಯ ಪಂಚಾಯತ್ ಸ್ವಚ್ಛತೆಗೆ ಆದ್ಯತೆ ನೀಡಿ ಕ್ರಮ ಕೈಗೊಳ್ಳಬೇಕು. ಪೇಟೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ.
– ಪ್ರವೀಣ್, ಸ್ಥಳೀಯ ನಿವಾಸಿ
ಇಡೀ ಪೇಟೆ ಸ್ವಚ್ಛವಾಗಲಿ
ಅಂಗಡಿಗಳ ಮುಂಭಾಗದಲ್ಲಿದ್ದ ಕಸವನ್ನು ಮಾತ್ರ ವಿಲೇವಾರಿ ಮಾಡಿದರೆ ಸಾಕಾಗುವುದಿಲ್ಲ. ಸ್ವತ್ಛತೆ ಮಳೆ ಬರುವ ಮೊದಲೇ ಮಾಡಿದ್ದರೆ ಒಳ್ಳೇದಿತ್ತು. ನಂತರ ಕಸ ವಿಲೇವಾರಿ ಸರಿಯಾಗಿ ಮಾಡಿದರೆ ಸ್ವಚ್ಛತೆ ಕಾಪಾಡಿಕೊಳ್ಳಬಹುದು. ಅಂಗಡಿಯ ಕಸ ಸಂಗ್ರಹಣೆಗೆ ತಿಂಗಳಿಗೆ 150 ರೂ. ಪಾವತಿಸುತ್ತೇವೆ.
– ಸ್ಥಳೀಯ ಅಂಗಡಿ ಮಾಲಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Anmol Bishnoi; ಅಪರಾಧ ಜಾಲದ ಪ್ರಾಬಲ್ಯ ಸ್ಥಾಪಿಸಲು ಬಾಬಾ ಸಿದ್ದಿಕ್ ಹ*ತ್ಯೆ!
Ullala: ಲಾರಿ-ಬೈಕ್ ಅಪಘಾತ: ಮೆಡಿಕಲ್ ಅಂಗಡಿ ಮಾಲೀಕ ದಾರುಣ ಮೃತ್ಯು
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದಾಸನಿಗೆ ಖಾಕಿ ಶಾಕ್: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ
MRPL ನಲ್ಲಿ ಉದ್ಯೋಗ ಆಮಿಷ: ಯುವಕನಿಗೆ 1 ಲಕ್ಷ ರೂ.ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.