ಬಜೆಯಲ್ಲಿ ನೀರಿನ ಮಟ್ಟ ಕುಸಿತ: ಉಡುಪಿಗೆ 2 ದಿನಕ್ಕೊಮ್ಮೆ ನೀರು
Team Udayavani, Mar 22, 2017, 3:50 AM IST
ಉಡುಪಿ: ನಗರಸಭಾ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಮಾಡುವ ಬಜೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹದ ಮಟ್ಟ ದಿನೇ ದಿನೇ ಕುಸಿಯುತ್ತಿದ್ದು, ಮಾ. 23ರಿಂದ ನಗರಸಭೆಯ ಒಟ್ಟು 35 ವಾರ್ಡ್‌ಗಳನ್ನು 2 ವಿಭಾಗಳಾಗಿ ವಿಂಗಡಿಸಿ ಪ್ರತೀ ವಾರ್ಡ್‌ಗೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡುವ ನಿರ್ಧಾರಕ್ಕೆ ನಗರಸಭೆ ಬಂದಿದೆ.
ಮಾ. 23ರಿಂದ ಈ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಲಿದ್ದು, ಮೊದಲ ಕಂತಿನಲ್ಲಿ 21 ವಾರ್ಡ್‌ಗಳಾದ ಕುಂಜಿಬೆಟ್ಟು, ತೆಂಕಪೇಟೆ, ಒಳಕಾಡು, ಬೈಲೂರು, ಕಿನ್ನಿಮೂಲ್ಕಿ, ಅಜ್ಜರಕಾಡು, ಅಂಬಲಪಾಡಿ, ಬನ್ನಂಜೆ, ಶಿರಿಬೀಡು, ಕೊಳ, ವಡಭಾಂಡೇಶ್ವರ, ಕಲ್ಮಾಡಿ, ಇಂದಿರಾನಗರ, ಚಿಟಾ³ಡಿ, ಬಡಗುಬೆಟ್ಟು, ಕೊಡವೂರು, ಕಸ್ತೂರ್ಬಾನಗರ, ಮಲ್ಪೆ ಸೆಂಟ್ರಲ್, ಇಂದ್ರಾಳಿ, ಸಗ್ರಿ ಹಾಗೂ ಮೂಡುಪೆರಂಪಳ್ಳಿಗೆ ನೀರು ಪೂರೈಕೆ ಮಾಡಲಾಗುವುದು.
2ನೇ ಕಂತಿನಲ್ಲಿ ಮಾ. 24ರಂದು 14 ವಾರ್ಡ್‌ಗಳಾದ ಸರಳೇಬೆಟ್ಟು, ಈಶ್ವರನಗರ, ಮಣಿಪಾಲ, ಕಕ್ಕುಂಜೆ, ಕರಂಬಳ್ಳಿ, ಮೂಡುಧಿಬೈಲು, ಕೊಡಂಕೂರು, ನಿಟ್ಟೂರು, ಸುಬ್ರಹ್ಮಣ್ಯಧಿನಗರ, ಗೋಪಾಲಪುರ, ಕಡಿಧಿಯಾಳಿ, ಗುಂಡಿಬೈಲು, ಸೆಟ್ಟಿಬೆಟ್ಟು ಹಾಗೂ ಪರ್ಕಳಕ್ಕೆ ನೀರು ಪೂರೈಕೆ ಮಾಡಲಾಗುವುದು. ಇದೇ ಮಾದರಿಯಲ್ಲಿ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಪ್ರಕ್ರಿಯೆ ನಡೆಯಲಿದೆ.
ನಗರಸಭಾ ವ್ಯಾಪ್ತಿಯ ನಳ್ಳಿ ನೀರು ಪೂರೈಕೆಧಿಯಲ್ಲಿ ವ್ಯತ್ಯಯ ಉಂಟಾದರೆ ಟ್ಯಾಂಕರ್ ಮೂಲಕ ಪ್ರತಿ ಮನೆಗೆ ತಲಾ 500 ಲೀ. ನೀರು ಸರಬರಾಜು ಮಾಡಲಿದ್ದಾರೆ.
ಸಹಾಯವಾಣಿ ಸಂಖ್ಯೆ
ದೂರುಗಳಿದ್ದಲ್ಲಿ 8496989248, 8496989166, 8496989184, 8496989122 ಮೊಬೈಲ್ ನಂಬರ್‌ಗೆ
ಕರೆ ಮಾಡಿ ತಿಳಿಸಬಹುದು. ಅದಲ್ಲದೆ ನಗರಸಭೆಯ ಕಾರ್ಯಪಾಲಕ ಅಭಿಯಂತ ಕೆ. ಗಣೇಶ್ (8496989759) ಹಾಗೂ ಪರಿಸರ ಅಭಿಯಂತ ರಾಘವೇಂದ್ರ ಬಿ. ಎಸ್.(9448507244) ಅವರಿಗೆ ತಿಳಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.