![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jul 2, 2023, 8:20 PM IST
ಬ್ರಹ್ಮಾವರ: ಶ್ರೀಮಠ ಬಾಳೆಕುದ್ರು ಹಂಗಾರಕಟ್ಟೆ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರ ಜುಲೈ 03, ಸೋಮವಾರ ದಿಂದ ಶ್ರೀಮಠದ ಸಾನಿಧ್ಯ ದೇವರಾದ ಶ್ರೀಲಕ್ಷ್ಮೀ ನೃಸಿಂಹ ದೇವರ ಸನ್ನಿಧಿಯಲ್ಲಿ ಚಾತುರ್ಮಾಸ್ಯ ವೃತ ಪ್ರಾರಂಭಿಸಲಿದ್ದಾರೆ.
ಭಕ್ತರ ಕ್ಷೇಮಾಭಿವೃದ್ಧಿಗಾಗಿ, ಲೋಕಕಲ್ಯಾಣಕ್ಕಾಗಿ ಸಂಕಲ್ಪಿತರಾಗಿ ಪೂಜಾಕೈಂಕರ್ಯಗಳನ್ನು ದಿನನಿತ್ಯ ನೆರವೇರಿಸಲು ನಿರ್ಧರಿಸಿದ್ದು, ವ್ಯಾಸಪೂಜಾ ಚಾತುರ್ಮಾಸ್ಯ ಸಂಕಲ್ಪಾದಿ ಧರ್ಮಗಳನ್ನು ನಡೆಸಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಚಾತುರ್ಮಾಸ್ಯದ ಶುಭ ಸಂದರ್ಭದಲ್ಲಿ ಪ್ರತಿದಿನ ಬೆಳಗ್ಗೆ 10.30 ರಿಂದ 12.30 ರವರೆಗೆ ಸ್ಥಳೀಯ ಹಾಗೂ ಪರವೂರಿನ ಭಜನಾ ತಂಡಗಳಿಂದ ವಿಷ್ಣು ಸಹಸ್ರನಾಮ ಪಠಣ ಮತ್ತು ಭಜನಾ ಕಾರ್ಯಕ್ರಮ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಶ್ರೀಮಠ ಬಾಳೆಕುದ್ರು ವ್ಯವಸ್ಥಾಪನಾ ಸಮಿತಿಯ ಪರವಾಗಿ ಮಂಜುನಾಥ ಭಟ್ (9148592107) ಅವರನ್ನು ಸಂಪರ್ಕಿಸಬಹುದು.
You seem to have an Ad Blocker on.
To continue reading, please turn it off or whitelist Udayavani.