ಬಂಡಿಮಠ ಬಸ್‌ಸ್ಟಾಂಡ್ ಈ ವಾರ್ಡ್‌ನ ಪ್ರಮುಖ ಆಕರ್ಷಣೆ
Team Udayavani, Oct 19, 2019, 5:38 AM IST
ಕಾರ್ಕಳ: ಪುರಸಭೆಯ 5ನೇ ವಾರ್ಡ್ ಬಸ್‌ನಿಲ್ದಾಣ ವಿವಾದದಿಂದಲೇ ಮುನ್ನೆಲೆಗೆ ಬಂದ ವಾರ್ಡ್. ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ (2011 12) ವೇಳೆ ನಗರದ ಬಸ್‌ಸ್ಟಾಂಡ್ ಅನ್ನು 5ನೇ ವಾರ್ಡ್‌ನ ಬಂಡಿಮಠಕ್ಕೆ ಸ್ಥಳಾಂತರಿಸಲಾಗಿತ್ತು. 2.18 ಎಕ್ರೆ ಜಾಗವನ್ನು ಬಸ್ ನಿಲ್ದಾಣಕ್ಕಾಗಿ ಕಾದಿರಿಸಲಾದ ಜಾಗವನ್ನು ಸುಮಾರು ಎರಡು ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿತ್ತು.
ವಿವಾದಪ್ರಸ್ತುತ ಬಸ್ ನಿಲ್ದಾಣ ಖಾಸಗಿಯವರ ಒಡೆತನದ ಜಾಗ
ಆಗಿರುವುದರಿಂದ ಮತ್ತು ಅಲ್ಲಿ ಬಸ್‌ನಿಲ್ದಾಣಕ್ಕೆ ಬೇಕಾದ ಮೂಲ ಸೌಕರ್ಯ ಕಲ್ಪಿಸಲು ಅವಕಾಶವಿಲ್ಲದ ಕಾರಣ ನಗರದ ಬಸ್‌ನಿಲ್ದಾಣವನ್ನು ಬಂಡಿಮಠದ ಸರಕಾರಿ ಜಾಗಕ್ಕೆ ಸ್ಥಳಾಂತರಿಸಲಾಗಿತ್ತು. ಈ ವೇಳೆ ನಗರದ ಬಸ್ ನಿಲ್ದಾಣ ಸ್ಥಳಾಂತರಿಸಬಾರದೆಂದು ಒಂದು ತಂಡ ಹಾಗೂ ಬಂಡಿಮಠ ದಲ್ಲೇ ಮುಂದುವರಿಯಬೇಕೆಂದು ಇನ್ನೊಂದು ತಂಡ ಹೋರಾಟಕ್ಕಿಳಿ ಯಿತು. ಪುರಸಭಾ ಸದಸ್ಯರಲ್ಲೂ ಕೆಲವರು ಬಂಡಿಮಠಕ್ಕೆ ಬೆಂಬಲ ನೀಡಿದ್ದರೆ, ಮತ್ತೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು.
ತಾಲೂಕು ಕಚೇರಿ, ತಾ.ಪಂ., ಪೊಲೀಸ್ ಠಾಣೆ ಸೇರಿದಂತೆ ಬಹುತೇಕ ಎಲ್ಲ ಸರಕಾರಿ ಕಚೇರಿ ಈ ಭಾಗದಲ್ಲಿವೆ ಎಂದು ಬಂಡಿಮಠದ ಬೆಂಬಲಿಗರು ಸಮರ್ಥಿಸಿದರೆ, ಕೋರ್ಟ್, ಆಸ್ಪತ್ರೆ, ಶಾಲಾ ಕಾಲೇಜು ನಗರದ ಬಸ್ ಸ್ಟಾಂಡ್ ಸಮೀಪವಿದೆ ಎಂದು ಮತ್ತೂಂದು ತಂಡ ಸಮರ್ಥಿಸಿತು. ಕೊನೆಗೆ ಪ್ರಕರಣ ಕೋರ್ಟ್ ಮೆಟ್ಟಿಲೇರಿತು. ಕೋರ್ಟ್ ತೀರ್ಪು ನೀಡಿ ಎರಡು ಬಸ್ ನಿಲ್ದಾಣಗಳನ್ನು ಸಮಾನವಾಗಿ ಬಳಸುವಂತೆ ಆದೇಶಿಸಿತು. ಪ್ರಸ್ತುತ ಕೆಎಸ್‌ಆರ್‌ಟಿಸಿ ಬಸ್‌ಗಳು ಮಾತ್ರ ಬಂಡಿಮಠಕ್ಕೆ ಬಂದು ಸಾಗುತ್ತಿವೆ.
ಗಮನಾರ್ಹ ವಿಚಾರವೇನೆಂದರೆ ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿ ಯಾಗಿದ್ದ ವೇಳೆ ಬಂಡಿಮಠ ಬಸ್ ನಿಲ್ದಾಣ ಉದ್ಘಾಟನೆಗೊಂಡು ಮರಳಿ ನಗರಕ್ಕೆ ಸ್ಥಳಾಂತರಗೊಂಡಿತು.
ಇಂದಿರಾ ಕ್ಯಾಂಟೀನ್
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಹಾತ್ವಾ ಕಾಂಕ್ಷಿ ಯೋಜನೆಗಳಲ್ಲೊಂದಾದ ಇಂದಿರಾ ಕ್ಯಾಂಟೀನ್ 5ನೇ ವಾರ್ಡ್‌ನಲ್ಲಿ ಸ್ಥಾಪನೆ ಯಾಗಿದೆ. ಅಂದಿನ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ್ದರು. 5ನೇ ವಾರ್ಡ್‌ನಲ್ಲಿರುವ ಶ್ರೀಕ್ಷೇತ್ರ ಜೋಗಿನಕೆರೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಅತ್ಯಂತ ಪುರಾತನ ದೇಗುಲಗಳಲ್ಲೊಂದು. ಬಂಡಿಮಠ ಬಸ್ ಎದುರುಗಡೆ ಮೂಡುಮಹಾಗಣಪತಿ ದೇವಸ್ಥಾನವಿದೆ.
ವಾರ್ಡ್‌ನಲ್ಲಿ 300 ಮನೆಗಳಿದ್ದು, 4ನೇ ಬಾರಿಗೆ ಪುರಸಭಾ ಸದಸ್ಯರಾಗಿರುವ ಸೀತಾರಾಮ ಅವರು ಪ್ರಸ್ತುತ ಈ ವಾರ್ಡ್ ಅನ್ನು ಪ್ರತಿನಿಧಿಸುತ್ತಿದ್ದಾರೆ. ಇವರು 2008ರಲ್ಲಿ ಪುರಸಭಾ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಬೇಡಿಕೆಗಳು
ವಾರ್ಡ್‌ನ ಮನೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಸಲುವಾಗಿ ಜರಿಗುಡ್ಡೆಯಲ್ಲೊಂದು ಓವರ್ ಹೆಡ್ ಟ್ಯಾಂಕ್‌ನ ಅಗತ್ಯವಿದೆ ಎಂದು ಸ್ಥಳೀಯರು ಹೇಳುತ್ತಾರೆ. ಇದೇ ಪರಿಸರದಲ್ಲಿ ಉದ್ಯಾನವನ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಸ್ಥಳೀಯರಿಂದ ವ್ಯಕ್ತವಾಗಿದೆ.
ಬಸ್‌ಸ್ಟಾಂಡ್ ಬಂಡಿಮಠದಲ್ಲಾಗಲಿ
ನಗರದ ಬಸ್‌ಸ್ಟಾಂಡ್ ಬಂಡಿಮಠದಲ್ಲಾಗಬೇಕು. ಅಂದೇ ಬಸ್‌ಸ್ಟಾಂಡ್ ಕಾಂಕ್ರೀಟ್‌ಗಾಗಿ ಸರಕಾರ 2 ಕೋಟಿ ರೂ. ವೆಚ್ಚ ಮಾಡಿದೆ. ವಾರ್ಡ್‌ನ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು.
– ಸೀತಾರಾಮ, ವಾರ್ಡ್ ಸದಸ್ಯರು
-ರಾಮಚಂದ್ರ ಬರೆಪ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.