ಕಟಪಾಡಿ ಬೈಕ್‌ಗೆ ಬೆಂಗಳೂರು ಸಂಚಾರ ಪೊಲೀಸರಿಂದ ನೋಟಿಸ ನೋಟಿಸ್ !
Team Udayavani, Jul 23, 2017, 8:45 AM IST
ಕಾಪು: ಕಟಪಾಡಿಯಲ್ಲಿ ಓಡಾಡುತ್ತಿರುವ ಮೋಟಾರ್ ಬೈಕ್‌ಗೆ ಬೆಂಗಳೂರು ನಗರ ಸಂಚಾರ ಪೊಲೀಸರು ದಂಡ ಕಟ್ಟುವಂತೆ ನೋಟಿಸ್ ಜಾರಿಗೊಳಿಸಿದ್ದು ಬೈಕ್ ಮಾಲಕರನ್ನು ಆಶ್ಚರ್ಯ ಚಕಿತರನ್ನಾಗಿಸಿದೆ.
ಕಟಪಾಡಿಯಲ್ಲಿ ಮಿನಿ ಹೊಟೇಲ್ ಉದ್ಯಮ ನಡೆಸುತ್ತಿರುವ ಹರೀಶ್ ಶೆಟ್ಟಿಗಾರ್ ಅವರು ಬೆಂಗಳೂರು ನಗರ ಸಂಚಾರಿ ಪೊಲೀಸ್‌ನ ಎನ್‌ಫೋರ್ ಮೆಂಟ್ ಆಟೋಮೇಷನ್ ಸೆಂಟರ್ ಘಟಕದಿಂದ ದಂಡ ಕಟ್ಟುವ ನೋಟಿಸ್‌ನ್ನು ಸೀÌಕರಿಸಿರುವ ಬೈಕ್ ಮಾಲಕ.
100 ರೂ. ದಂಡ ಪಾವತಿಸುವಂತೆ ನೋಟಿಸ್: ಹರೀಶ್ ಶೆಟ್ಟಿಗಾರ್ ಅವರಿಗೆ ಸಂಬಂಧಿಸಿದ ಕೆಎ 20 ಇಸಿ 3200 (KA20EC3200) ಮೋಟಾರ್ ಸೈಕಲ್ ಬೆಂಗಳೂರಿನ ಐ.ಟಿ.ಪಿ.ಎಲ್. ರೋಡ್‌ನಲ್ಲಿ ಜು. 8ರಂದು ಸಂಜೆ 4.30ಕ್ಕೆ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದೆ. ಅದಕ್ಕಾಗಿ ರೂ. 100/- ನ್ನು ದಂಡ ರೂಪದಲ್ಲಿ ಪಾವತಿಸುವಂತೆ ನೋಟಿಸ್‌ನಲ್ಲಿ ಸೂಚನೆ ನೀಡಲಾಗಿದೆ.
ಬೈಕ್ ಕಟಪಾಡಿಯಲ್ಲೇ ಇತ್ತು: ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸಂತೋಷ್ ಶೆಟ್ಟಿಗಾರ್ ಅವರ ಬೈಕ್ (ಟಿವಿಎಸ್ ಸೋ³ರ್ಟ್) ಬೆಂಗಳೂರು ಸಂಚಾರ ಪೊಲೀಸರು ನೋಟಿಸ್‌ನಲ್ಲಿ ತಿಳಿಸಿರುವ ಅವಧಿಯಲ್ಲಿ ಕಟಪಾಡಿಯಲ್ಲೇ ಇತ್ತು. ಮಾತ್ರವಲ್ಲದೇ ಇದುವರೆಗೂ ಆ ಬೈಕ್ ಬೆಂಗಳೂರಿನ ಹಾದಿಯತ್ತ ಸಂಚರಿಸಲೇ ಇಲ್ಲ ಎನ್ನುವುದು ಅಸಲಿಯತ್ತು.
ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳು: ಹಾಗಾದರೆ ಬೆಂಗಳೂರು ನಗರ ಸಂಚಾರ ಪೊಲೀಸರು ನೋಟಿಸ್ ನೀಡಿರುವ ದ್ವಿಚಕ್ರ ವಾಹನ ಯಾವುದು ?, ಅಥವಾ ಒಂದೇ ರೀತಿಯ ನೋಂದಾವಣೆ ಸಂಖ್ಯೆಯನ್ನು ಹೊಂದಿರುವ ಮತ್ತೂಂದು ಬೈಕ್ ತಿರುಗಾಡುತ್ತಿದ್ದೆಯೇ ?, ಅಥವಾ ಸಂಚಾರ ಪೊಲೀಸರು ನಂಬರ್ ಕ್ಯಾಚ್ ಮಾಡುವಾಗ ಎಡವಿ ಬಿದ್ದಿದ್ದಾರೆಯೇ ?, ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಎದ್ದಿವೆ.
ನ್ಯಾಯಕ್ಕಾಗಿ ಪತ್ರ ಮುಖೇನ ಮೊರೆ: ಇದರಿಂದ ವಿಚಲಿತರಾಗಿರುವ ಹರೀಶ್ ಶೆಟ್ಟಿಗಾರ್ ಅವರು ಬೆಂಗಳೂರು ನಗರ ಸಂಚಾರ ಪೊಲೀಸ್‌ನ ಎನ್‌ಫೋರ್ಮೆಂಟ್ ಆಟೋಮೇಷನ್ ಸೆಂಟರ್ ಘಟಕದ ಜತೆಗೆ ಪತ್ರ ವ್ಯವಹಾರ ನಡೆಸಿದ್ದು, ತನ್ನ ಬೈಕ್ ಮೇಲ್ಕಾಣಿಸಿದ ದಿನದಂದು ಕಟಪಾಡಿ ಬಿಟ್ಟು ಬೇರೆಲ್ಲಿಗೂ ಸಂಚರಿಸಿಲ್ಲ. ನೀವು ನೀಡಿರುವ ನೋಟಿಸ್‌ನಿಂದ ಆಶ್ಚರ್ಯ ಮತ್ತು ಆಘಾತವುಂಟಾಗಿದ್ದು, ಇಂತಹ ನೋಂದಣೆಯ ಬೈಕ್ ಬೆಂಗಳೂರಿನಲ್ಲಿ ಬೇರೊಂದು ಇದೆಯೇ ಎನ್ನುವುದನ್ನು ಪತ್ತೆ ಹಚ್ಚಿ, ಸೂಕ್ತ ತನಿಖೆ ನಡೆಸಿ ತನಗೆ ನ್ಯಾಯ ಒದಗಿಸಿಕೊಡುವಂತೆ ವಿನಂತಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.