ಬೆಂಗಳೂರು – ವಾಸ್ಕೋ ರೈಲು: ಇಂದು ಸಿಎಂ ಯಡಿಯೂರಪ್ಪ ಚಾಲನೆ
Team Udayavani, Mar 7, 2020, 6:17 AM IST
ಕುಂದಾಪುರ/ ಉಡುಪಿ: ಕರಾವಳಿಗರ ಬಹುದಿನಗಳ ಕನಸು ಶನಿವಾರ ನನಸಾಗಲಿದ್ದು, ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ವಾಸ್ಕೋ – ಬೆಂಗಳೂರು ರೈಲು ಸಂಚಾರ ಆರಂಭಿಸಲಿದೆ. ಮಾ. 7ರಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಲ್ಲಿ ಮುಖ್ಯ ಮಂತ್ರಿ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.
ಮಾ. 7ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ಯಶವಂತಪುರದಿಂದ ಸಂಚಾರ ಆರಂಭಿಸಲಿದೆ.
ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅಧ್ಯಕ್ಷತೆ ವಹಿಸಲಿದ್ದು, ಸಚಿವರಾದ ಸದಾನಂದ ಗೌಡ,ನಿರ್ಮಲಾ ಸೀತಾರಾಮನ್, ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಕುಂದಾಪುರ ಹಿತರಕ್ಷಣ ಸಮಿತಿ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ವೇಳಾಪಟ್ಟಿ
ಪ್ರತೀ ದಿನ ಸಂಜೆ 6ಕ್ಕೆ ಯಶವಂತಪುರದಿಂದ 14 ಬೋಗಿಗಳ ಈ ರೈಲು ಹೊರಡಲಿದ್ದು, ಕುಣಿಗಲ್ ಮೂಲಕವಾಗಿ ಹಾಸನಕ್ಕೆ ರಾತ್ರಿ 9.15ಕ್ಕೆ,ಪಡೀಲ್‌ಬೆಳಗ್ಗಿನ ಜಾವ 3ಕ್ಕೆ, ಉಡುಪಿಗೆ ಬೆಳಗ್ಗೆ 5ಕ್ಕೆ, ಕುಂದಾಪುರ 5.30ಕ್ಕೆ, ಕಾರವಾರಕ್ಕೆ ಬೆಳಗ್ಗೆ 8.30 ಮತ್ತು ವಾಸ್ಕೋಗೆ ಬೆಳಗ್ಗೆ 10.30ಕ್ಕೆ ತಲುಪಲಿದೆ. ಮತ್ತೆ ವಾಪಾಸು ವಾಸ್ಕೋದಿಂದ ಸಂಜೆ 5.20ಕ್ಕೆ ಹೊರಡಲಿದ್ದು, ಸಂಜೆ 7.25ಕ್ಕೆ ಕಾರವಾರ, 9.30ಕ್ಕೆ ಕುಂದಾಪುರ, 10ಕ್ಕೆ ಉಡುಪಿ, ಬೆಳಗ್ಗೆ 8ಕ್ಕೆ ಯಶವಂತಪುರ ತಲುಪಲಿದೆ.
ಎಲ್ಲೆಲ್ಲ ನಿಲುಗಡೆ?
ಯಶವಂತಪುರ, ಚಿಕ್ಕಬಾಣಾವರ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಾಣಿಯೂರು, ಕಬಕ – ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾಕೂìರು, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರಸ್ತೆ, ಅಂಕೋಲಾ, ಕಾರವಾರ, ವಾಸ್ಕೋಗಳಲ್ಲಿ ನಿಲುಗಡೆಯಾಗಲಿದೆ.
ಬಂಟ್ವಾಳ – ಮೂಲ್ಕಿ: ನಿಲುಗಡೆ
ಈ ಮೊದಲಿನ ವೇಳಾಪಟ್ಟಿಯಲ್ಲಿ ಬಂಟ್ವಾಳ, ಮೂಲ್ಕಿ, ಕಾಣಿಯೂರಿನಲ್ಲಿ ಈ ರೈಲಿಗೆ ನಿಲುಗಡೆಗೆ ಅವಕಾಶವಿರಲಿಲ್ಲ. ಆದರೆ ಆ ಬಳಿಕ ಇಲ್ಲಿನ ರೈಲು ಪ್ರಯಾಣಿಕರು, ಜನಪ್ರತಿನಿಧಿಗಳು, ಸಮಿತಿಗಳ ಮನವಿಗೆ ಅಧಿಕಾರಿಗಳು ಸ್ಪಂದಿಸಿ ದ್ದಾರೆ. ಪರಿಷ್ಕೃತ ವೇಳಾಪಟ್ಟಿಯಲ್ಲಿ ಹೆಚ್ಚುವರಿಯಾಗಿ ಕಾಣಿಯೂರು, ಬಂಟ್ವಾಳ, ಮೂಲ್ಕಿ ಹಾಗೂ ಹೊನ್ನಾವರದಲ್ಲಿಯೂ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ಕಾರವಾರ ರೈಲು ರದ್ದು
ಇದುವರೆಗೆ ಬೆಂಗಳೂರು- ಕಾರವಾರ ನಡುವೆ ವಾರದಲ್ಲಿ ಮೂರು ದಿನ ಮೈಸೂರು ಮೂಲಕ ಸಂಚರಿಸುತ್ತಿದ್ದ ರಾತ್ರಿ ರೈಲು (16523-16524) ಮತ್ತು ಮೂರು ದಿನ ಶ್ರವಣಬೆಳಗೊಳ ಮೂಲಕ ಸಂಚರಿಸುತ್ತಿದ್ದ ರೈಲು (16513/16514) ಸೇವೆಯನ್ನು ರದ್ದುಗೊಳಿಸಲಾಗಿದೆ. ಪೆರ್ನಮ್- ಕಾರವಾರ ನಡುವೆ ಓಡಾಡುತ್ತಿದ್ದ ಡೆಮು ರೈಲು (70103/104) ಆಂಶಿಕವಾಗಿ ರದ್ದಾಗಿದೆ. ಈ ರೈಲು ಇನ್ನು ಮುಂದೆ ಕಾರವಾರದಿಂದ ಮಡಗಾಂವ್ ವರೆಗೆ ಸಂಚರಿಸದೆ ಮಡಗಾಂವ್ ನಿಂದ ಪೆರ್ನಮ್ ನಡುವೆ ಸಂಚರಿಸಲಿದೆ. ಈ ಸಂಚಾರ ಮಾ. 7ರಿಂದ ಆರಂಭವಾಗಲಿದೆ ಎಂದು ರೈಲ್ವೇ ಮಂಡಳಿ ಪ್ರಕಟನೆ ತಿಳಿಸಿದೆ.
ರೈಲು ರದ್ದು: ವಿರೋಧ
ಮಂಗಳೂರು: ಬೆಂಗಳೂರು -ಕಾರವಾರ ರಾತ್ರಿ ರೈಲ್‌ನ್ನು ಶನಿವಾರದಿಂದ ರದ್ದುಪಡಿಸುವ ರೈಲ್ವೆ ಸಚಿವಾಲಯದ ನಿರ್ಧಾರಕ್ಕೆ ರೈಲು ಬಳಕೆದಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇನ್ನು ಮುಂದಕ್ಕೆ ಈ ರೈಲು ಕಾರವಾರದ ಭಾಗವನ್ನು ಬಿಟ್ಟು ಬೆಂಗಳೂರಿನಿಂದ ಮಂಗಳೂರು ಸೆಂಟ್ರಲ್ ಮೂಲಕ ಕಣ್ಣೂರಿಗೆ ಚಲಿಸಲಿದೆ.
ಬೆಂಗಳೂರು-ಕಾರವಾರ ರೈಲು ಕಾರವಾರ, ಕುಂದಾಪುರ, ಉಡುಪಿ ಭಾಗದ ಜನರಿಗೆ ಮೈಸೂರು ಸಂಚಾರಕ್ಕೆ ಉಪಯುಕ್ತವಾಗಿತ್ತು. ಕಾರವಾರಕ್ಕೆ ಹೊಸ ರೈಲು ಪ್ರಾರಂಭದ ನಂತರವೂ ಬೆಂಗಳೂರು-ಕಾರವಾರ ಭಾಗದಲ್ಲಿ ಮೈಸೂರು, ಬೆಂಗಳೂರು ರೈಲು ಸಂಚಾರಕ್ಕೆ ಉತ್ತಮ ಬೇಡಿಕೆ ಇರುತ್ತದೆ. ಇದೀಗ ರೈಲು ಸಂಚಾರ ರದ್ದುಗೊಳಿಸಿರುವುದರಿಂದ ಈ ಭಾಗದ ಜನರಿಗೆ ಅನಾನುಕೂಲವಾಗಲಿದ್ದು ಈ ರೈಲನ್ನು ಮುಂದುವರಿಸಬೇಕು ಎಂದು ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿಕರ ಅಭಿವೃದ್ದಿ ಸಂಘದ ಸಲಹೆಗಾರ ಅನಿಲ್ ಹೆಗೆzಯವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
MUST WATCH
ಹೊಸ ಸೇರ್ಪಡೆ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Belagavi Session: ಬರಾಕ್ ಒಬಾಮಾ ಆಹ್ವಾನಕ್ಕೆ ಸರಕಾರ ತೀರ್ಮಾನ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.