ಬ್ಯಾಂಕ್ ಸಿಬಂದಿಯ ಅಚಾತುರ್ಯ; ಒಂದೇ ಖಾತೆಯಲ್ಲಿ ಇಬ್ಬರ ವ್ಯವಹಾರ!
Team Udayavani, Feb 23, 2017, 11:53 AM IST
ಕುಂದಾಪುರ: ನಗರದ ಬ್ಯಾಂಕ್ವೊಂದರಲ್ಲಿ ಜನಧನ್ ಉಳಿತಾಯ ಖಾತೆಯನ್ನು ತೆರೆದಿದ್ದ ಮಹಿಳೆಯ ಖಾತೆಯಿಂದ ಕಳೆದ ಎರಡು ವರ್ಷಗಳಿಂದ ಇನ್ನೊಬ್ಬರು ವ್ಯವಹಾರ ನೆಡೆಸುತ್ತಿರುವ ಘಟನೆ ಇಬ್ಬರೂ ಒಂದೇ ಹೊತ್ತಿಗೆ ಬ್ಯಾಂಕಿಗೆ ವ್ಯವಹಾರಕ್ಕಾಗಿ ಬಂದಾಗ ಬೆಳಕಿಗೆ ಬಂದಿದೆ.
ಕುಂದಾಪುರದ ಗಿರಿಜಾ ಅವರು ಎರಡು ವರ್ಷಗಳ ಹಿಂದೆ ಇಲ್ಲಿನ ಬ್ಯಾಂಕ್ ಒಂದರಲ್ಲಿ ಜನ್ಧನ್ ಉಳಿತಾಯ ಖಾತೆಯನ್ನು ತೆರೆದಿದ್ದರು. ಗ್ಯಾಸ್ ಸಬ್ಸಿಡಿಗೋಸ್ಕರ ಆಧಾರ್ ಲಿಂಕ್ಸ ಮಾಡಿದ್ದಲ್ಲದೇ ಉಳಿತಾಯ ಹಣವನ್ನು ಖಾತೆಯಲ್ಲಿ ಇರಿಸಿದ್ದರು. ಆದರೆ ಅವರು ಬ್ಯಾಂಕಿಗೆ ಹಲವು ಸಮಯದಿಂದ ಬಂದಿರಲಿಲ್ಲ. ಮಂಗಳವಾರ ತುರ್ತು ಹಣದ ಆವಶ್ಯಕತೆ ಇರುವುದರಿಂದ ಅವರು ಏಳು ಸಾವಿರ ನಗದೀಕರಣಕ್ಕೆ ಹೋದಾಗ ಅದೇ ವೇಳೆ ಅದೇ ಖಾತೆಯಲ್ಲಿ ವ್ಯವಹಾರ ನಡೆಸುತ್ತಿರುವ ಮಹಿಳೆ ಬ್ಯಾಂಕಿಗೆ ಬಂದಾಗ ನಗದೀಕರಣಕ್ಕೆ ಆಕ್ಷೇಪ ವ್ಯಕ್ತವಾಯಿತು. ಆವಾಗಲೇ ಈ ವಿಷಯ ಬಹಿರಂಗಗೊಂಡಿದೆ. ಗಿರಿಜಾ ಎನ್ನುವ ಇನ್ನೋರ್ವ ಮಹಿಳೆಗೂ ಬ್ಯಾಂಕ್ ನೀಡಿದ ಉಳಿತಾಯ ಖಾತೆಯ ನಂಬ್ರ ಹಾಗೂ ಈ ಮೊದಲು ಗಿರಿಜಾ ಅವರು ತೆರೆದಿರುವ ಖಾತೆಯ ನಂಬ್ರ ಒಂದೇ ಅಗಿರುವುದು ಈ ಅಚಾತುರ್ಯಕ್ಕೆ ಕಾರಣವಾಯಿತು. ಬ್ಯಾಂಕಿನ ಆಚಾತುರ್ಯದಿಂದ ಇಬ್ಬರಿಗೂ ಅದೇ ಖಾತೆಯಲ್ಲಿ ಎಟಿಎಂ ಕಾರ್ಡು ನೀಡಿದೆ.
ಬ್ಯಾಂಕಿನಲ್ಲಿ ಆಗಿರುವ ಆಚಾತುರ್ಯವನ್ನು ಸರಿಪಡಿಸಲಾಗುವುದು ಎಂದು ಹೊಸದಾಗಿ ಬಂದ ಪ್ರಬಂಧಕರು ತಿಳಿಸಿದ್ದಾರೆ. ಅಲ್ಲದೇ ದಾಖಲೆಗಳನ್ನು ಸರಿಪಡಿಸಿ ಖಾತೆಗಳನ್ನು ಬೇರ್ಪಡಿಸುವ ಕಾರ್ಯ ನಡೆಸಲಿದ್ದು ಮಹಿಳೆಗೆ ನ್ಯಾಯ ಒದಗಿಸುವ ಬಗ್ಗೆ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.