ಅಮ್ಮನೊಂದಿಗೆ ದಿನ ಕಳೆದ ಬನ್ನಂಜೆ ರಾಜಾ
Team Udayavani, Jul 10, 2018, 12:24 PM IST
ಮಲ್ಪೆ: ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಭೂಗತ ಪಾತಕಿ ಬನ್ನಂಜೆ ರಾಜಾ (ರಾಜೇಂದ್ರ ) ಸೋಮವಾರ ಮಲ್ಪೆಗೆ ಬಂದು ಅನಾರೋಗ್ಯದಲ್ಲಿರುವ ತನ್ನ ಅಮ್ಮನನ್ನು ಭೇಟಿಯಾಗಿ ತಾಯಿಯ ಆರೋಗ್ಯವಿಚಾರಿಸಿದ್ದಾನೆ.
ಮಲ್ಪೆ ಸಸಿತೋಟದಲ್ಲಿರುವ ಸ್ವಗೃಹಕ್ಕೆ ಆತನನ್ನು ಪೊಲೀಸರು ಬಿಗು ಭದ್ರತೆಯಲ್ಲಿ ಕರೆತಂದಿದ್ದರು. ಅನಾರೋಗ್ಯದಿಂದಿರುವ ತಾಯಿಯನ್ನು ನೋಡಲು ಅವಕಾಶ ಕಲ್ಪಿಸಬೇಕು ಎಂಬ ಆತನ ಮನವಿಗೆ ಸ್ಪಂದಿಸಿ ನ್ಯಾಯಾಲಯವು ಮಾನವೀಯ ನೆಲೆಯಲ್ಲಿ ಅನುಮತಿ ನೀಡಿದೆ. ಬೆಳಗ್ಗೆ 9ರಿಂದ ಸಂಜೆ 6 ಗಂಟೆ ವರೆಗೆ ತಾಯಿ ಜತೆ ಇರಲು ವ್ಯವಸ್ಥೆ ಮಾಡಲಾಗಿತ್ತು.
ಮನೆಮಂದಿ ಜತೆಯಲ್ಲಿ…
ಫಿಶರೀಸ್ ಶಾಲಾ ಸಭಾಭವನದ ಮುಂಭಾಗದ ರಸ್ತೆಯ ಮೂಲಕ ಬೆಳಗ್ಗೆ 9 ಗಂಟೆಗೆ ಬಿಗು ಭದ್ರತೆಯಲ್ಲಿ ರಾಜಾನನ್ನು ಮನೆಗೆ ಕರೆತರಲಾಯಿತು. ರಾಜಾ ವಾಹನದಿಂದ ಇಳಿದವನೇ ನೇರ ತಾಯಿ ಬಳಿಸಾರಿ ನಮಸ್ಕರಿಸಿ ಆರೋಗ್ಯ ವಿಚಾರಿಸಿದ. ಬಳಿಕ ಹೊರಗೆ ಇರುವ ಕುಟುಂಬದ ದೈವದ ಗುಡಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ. ಬೆಳಗ್ಗಿನ ಉಪಾಹಾರವನ್ನು ಪೊಲೀಸರೇ ತರಿಸಿದ್ದು ಅದನ್ನು ಪರೀಕ್ಷೆಗೊಳಪಡಿಸಿ ನೀಡಲಾಯಿತು.
ಮಧ್ಯಾಹ್ನ ಮನೆಯಲ್ಲೇ ತಯಾರಿಸಿದ ಕೋಳಿ ರೊಟ್ಟಿ, ಮೀನಿನ ಊಟವನ್ನು ಕುಟುಂಬದವರ ಜತೆಯಲ್ಲಿ ಕುಳಿತು ಸವಿದ. ಮನೆಯಲ್ಲಿ ತಂದೆ ಸುಂದರ ಶೆಟ್ಟಿಗಾರ್, ತಾಯಿ ನಿವೃತ್ತ ಶಿಕ್ಷಕಿ ವಿಲಾಸಿನಿ, ಒಬ್ಬ ಸಹೋದರ, ಇಬ್ಬರು ಅತ್ತಿಗೆಯರು ಮತ್ತವರ ಮಕ್ಕಳು ಹಾಗೂ ಬೆಳಗ್ಗೆಯಷ್ಟೇ ಬೆಂಗಳೂರಿನಿಂದ ಬಂದಿದ್ದ ರಾಜನ ಪತ್ನಿ ಮತ್ತು ಇಬ್ಬರು ಮಕ್ಕಳು ಜತೆಯಲ್ಲಿದ್ದರು.
ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಮನೆಗೆ ಭೇಟಿ ನೀಡಿದ್ದಾರೆ. ಸಂಜೆ 6ರ ಬಳಿಕ ಭದ್ರತೆಯಲ್ಲಿ ಉಡುಪಿ ನಗರ ಠಾಣೆಗೆ ಕರೆದೊಯ್ಯಲಾಯಿತು. ರಾತ್ರಿ ಠಾಣೆಯಲ್ಲೇ ಇಟ್ಟುಕೊಂಡು ಮಂಗಳವಾರ ಬೆಳಗ್ಗೆ ವೈದಕೀಯ ಪರೀಕ್ಷೆ ನಡೆಸಿ ಅಲ್ಲಿಂದ ಬೆಳಗಾವಿ ಜೈಲಿಗೆ ಕರೆದೊಯ್ಯಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
1995ರ ಅನಂತರ, 2015ರ ಫೆಬ್ರವರಿಯಲ್ಲಿ ಸೌತ್ ಆಫ್ರಿಕಾದ ಮೊರಕ್ಕೋದಲ್ಲಿ ಬಂಧನಕ್ಕೊಳಗಾದ ಸಂದರ್ಭ ವಿಚಾರಣೆಯ ಸಲುವಾಗಿ ಪೊಲೀಸರ ಜತೆ ಒಂದು ಸಲ ಮನೆಗೆ ಬಂದ ವೇಳೆ ತಾಯಿಯನ್ನು ನೋಡಿದ್ದು ಬಿಟ್ಟರೆ ಬಳಿಕ ತಾಯಿ – ಮಗನ ಭೇಟಿ ಇದೇ ಮೊದಲು ಎನ್ನಲಾಗಿದೆ.
ಸಹಪಾಠಿಗಳಿಗೆ ನಿರಾಸೆ
ಬನ್ನಂಜೆ ರಾಜಾ ಪ್ರೌಢಶಿಕ್ಷಣವನ್ನು ಮನೆ ಸಮೀಪದ ಫಿಶರೀಸ್ ಶಾಲೆಯಲ್ಲಿ ಪೂರೈಸಿದ್ದು, ಅಪಾರ ಸ್ನೇಹಿತರನ್ನು ಹೊಂದಿದ್ದ. ಆತನನ್ನು ನೋಡಲು ಸಹಪಾಠಿಗಳು, ನೆರೆಹೊರೆಯವರು, ಗೆಳೆಯರು ಬೆಳಗ್ಗಿನಿಂದಲೇ ಮನೆಯತ್ತ ಬರುತ್ತಿದ್ದರು. ಒಂದಿಬ್ಬರು ಹತ್ತಿರದ ಸಂಬಂಧಿಗಳಿಗೆ ಮಾತ್ರ ಗೇಟಿನ ಹೊರಗೆ ನಿಂತು ರಾಜಾನೊಂದಿಗೆ ಮಾತನಾಡಲು ಅವಕಾಶ ನೀಡಿದರು.
ಮನೆಯಲ್ಲಿ ಬಿಗಿ ಭದ್ರತೆ
ರಾಜನ ಆಗಮನದ ಹಿನ್ನೆಲೆಯಲ್ಲಿ ಮನೆಯ ಒಳಗೂ ಸೇರಿದಂತೆ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಸುತ್ತ ಸಿಸಿ ಕೆಮರಾ ಅಳವಡಿಸಲಾಗಿತ್ತು. 50 ಮೀ. ದೂರದಲ್ಲಿ ಬ್ಯಾರಿಕೇಡ್ ಅಳವಡಿಸಿ ಪೊಲೀಸರ ಹೊರತು ಮಾಧ್ಯಮ ಸಹಿತ ಯಾರಿಗೂ ಪ್ರವೇಶ ಇರಲಿಲ್ಲ. ವೃತ್ತ ನಿರೀಕ್ಷಕ ಮಂಜನಾಥ್ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದ್ದು, ಜಿಲ್ಲಾ ಶಸಸ್ತ್ರ ಮೀಸಲು ಪಡೆ, ಕೆಎಸ್‌ಆರ್‌ಪಿ, ಸಿವಿಲ್ ಪೊಲೀಸರನ್ನು ನಿಯೋಜಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Assam; ಚಹಾರ್ ಜಿಲ್ಲೆ 4 ಗ್ರಾಮ ಬಾಲ್ಯ ವಿವಾಹ ಮುಕ್ತ: ಸಿಎಂ ಹಿಮಾಂತ್
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
Mumbai-Nagpur ಹೆದ್ದಾರಿಯಲ್ಲಿ ಏಕಕಾಲದಲ್ಲಿ 50 ವಾಹನಗಳ ಟಯರ್ ಪಂಕ್ಚರ್
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.