ಟ್ಯಾಂಕರ್‌ಗೆ ಸರಕಾರಿ ನೀರು ಎಂದು ಬ್ಯಾನರ್ ಹಾಕಿಸಿ
Team Udayavani, Mar 17, 2018, 7:35 AM IST
ಕುಂದಾಪುರ: ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಟ್ಯಾಂಕರ್ ನೀರು ಪೂರೈಕೆ ಮಾಡುತ್ತಿದ್ದು, ಕೆಲವು ಕಡೆಗಳಲ್ಲಿ ಗ್ರಾ.ಪಂ. ನವರು ಕುಡಿಯುವ ನೀರಿನ ಪೂರೈಕೆಗೆ ಸರಕಾರದಿಂದ ಅನುದಾನ ಪಡೆದರೂ ತಮ್ಮದೇ ಎನ್ನುವಂತೆ ವರ್ತಿಸುತ್ತಿದ್ದಾರೆ. ಅದಕ್ಕೆ ಎಲ್ಲ ಕಡೆಗಳಲ್ಲಿ ಇನ್ನು ಮುಂದೆ ಕಡ್ಡಾಯವಾಗಿ ಕುಡಿಯುವ ನೀರು ಪೂರೈಸುವ ಟ್ಯಾಂಕರ್‌ಗಳಿಗೆ ಸರಕಾರದಿಂದ ಕೊಡಲ್ಪಡುವ ನೀರು ಎಂದು ಬ್ಯಾನರ್ ಹಾಕಿಸಿ ಶಾಸಕ ಗೋಪಾಲ ಪೂಜಾರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಂದಾಪುರ ತಾ.ಪಂ.ನ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕು ಜಾಗೃತಿ ಸಮಿತಿ ಸಭೆಯಲ್ಲಿ ಎಲ್ಲ ಗ್ರಾ.ಪಂ.ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, 94 ಸಿ, ಗೋಮಾಳ, ಡೀಮ್ಡ್ ಫಾರೆಸ್ಟ್ ಅರ್ಜಿ ಸಮಸ್ಯೆ ಕುರಿತ ಅಹವಾಲು ಸ್ವೀಕಾರ ವೇಳೆ ಪಡುವರಿ ಹಾಗೂ ಉಪ್ಪುಂದ ಎರಡೂ ಗ್ರಾ.ಪಂ.ಗಳು ಸುಬ್ಬರಾಡಿಗೆ ನೀರು ಕೊಡದ ವಿಚಾರ ಕುರಿತಂತೆ ಮಾತನಾಡಿದ ಅವರು ಪಡುವರಿ ಗ್ರಾ.ಪಂ.ನವರು ನೀರು ಕೊಡಬೇಕು ಎಂದು ಸೂಚಿಸಿದರು.
ಕುಂದಾಪುರ, ಬೈಂದೂರು ತಾಲೂಕಿನ ಅನೇಕ ಗ್ರಾ.ಪಂ.ಗಳಿಂದ ಮುಂದಿನ ಎಪ್ರಿಲ್-ಮೇ ತಿಂಗಳಲ್ಲಿ ಕುಡಿಯುವ ನೀರಿನ ಪೂರೈಕೆಗೆ ಶಾಸಕರಿಗೆ ಹೆಚ್ಚುವರಿ ಅನುದಾನಕ್ಕೆ ಬೇಡಿಕೆಯಿಟ್ಟರು. ಅಹವಾಲು ಸ್ವೀಕರಿಸಿದ ಶಾಸಕರು, ಕರ್ಕುಂಜೆ-6.35 ಲಕ್ಷ ರೂ., ಶಂಕರನಾರಾಯಣ – 7.50 ಲಕ್ಷ ರೂ., ಶಿರೂರು-12 ಲಕ್ಷ ರೂ., ಸಿದ್ದಾಪುರ- 5.50 ಲಕ್ಷ ರೂ., ಬೆಳ್ವೆ- 6.5 ಲಕ್ಷ ರೂ., ಕಾಳಾವರ- 5 ಲಕ್ಷ ರೂ., ಅಂಪಾರು – 10 ಲಕ್ಷ ರೂ., ಕೆದೂರು- 5 ಲಕ್ಷ ರೂ. ಹೆಚ್ಚುವರಿ ಅನುದಾನಕ್ಕೆ ಬೇಡಿಕೆಯಿಟ್ಟಿದ್ದು, ರೂ. 5 ಲಕ್ಷಕ್ಕಿಂತ ಹೆಚ್ಚಿರುವುದರಿಂದ ಇ-ಟೆಂಡರ್ ಕರೆಯಿರಿ ಎಂದರು.
ಹಲವು ಕಡೆಗಳಲ್ಲಿ ಸಮಸ್ಯೆ
ಆಜ್ರಿಯಲ್ಲಿ 2 ವಾರ್ಡ್‌ಗಳಲ್ಲಿ
ನೀರಿನ ಸಮಸ್ಯೆಯಿದೆ. ಕಳೆದ ಬಾರಿ 91,800 ರೂ. ಖರ್ಚಾಗಿತ್ತು. ಈ ಬಾರಿ 1.50 ಲಕ್ಷ ರೂ. ಬೇಕಿದ್ದು, ಎಪ್ರಿಲ್ 1 ರಿಂದಲೇ ನೀರು ಪೂರೈಕೆ ಅಗತ್ಯವಿದೆ ಎಂದು ಪಂಚಾಯತ್ ವಿಎ ಮನವಿಯಿತ್ತರು. ಗಂಗೊಳ್ಳಿಯಲ್ಲಿ ಜನತಾ ಕಾಲನಿಯಲ್ಲಿ ಸಮಸ್ಯೆಯಿದ್ದು, 1 ಲಕ್ಷ ರೂ. ಬೇಕಿದೆ. ಗುಜ್ಜಾಡಿಯ ನಾಯಕ್ವಾಡಿಯಲ್ಲಿ ನೀರಿನ ಅಗತ್ಯವಿದ್ದು, 3 ಲಕ್ಷ ರೂ., ಹಳ್ಳಿಹೊಳೆಯಲ್ಲಿ ಕಳೆದ ಬಾರಿ 3 ಲಕ್ಷ ರೂ. ಖರ್ಚಾಗಿದ್ದು, 3.5 ಲಕ್ಷ ರೂ. ಬೇಕಿದೆ. ಹಟ್ಟಿಯಂಗಡಿ 2.50 ಲಕ್ಷ ರೂ. ಕಳೆದ ಬಾರಿ ಖರ್ಚಾಗಿದ್ದು, ಈ ಬಾರಿ 3 ಲಕ್ಷ ರೂ. ಬೇಕಿದೆ ಎಂದು ಗ್ರಾ.ಪಂ. ಅಧಿಕಾರಿಗಳು ಸಭೆಗೆ ತಿಳಿಸಿದರು.
ಕಟ್‌ಬೆಳ್ತೂರಿನಲ್ಲಿ ಕಳೆದ ಬಾರಿ 4 ಲಕ್ಷ ಖರ್ಚಾಗಿದ್ದು, ಈ ಬಾರಿ 4.5 ಲಕ್ಷ ರೂ. ಅಗತ್ಯವಿದೆ. ಉಳ್ಳೂರು ಕಳೆದ ಬಾರಿ 82 ಸಾವಿರ ರೂ., ಈ ಬಾರಿ 1 ಲಕ್ಷ ಬೇಕಿದೆ. ಉಳ್ಳೂರು -74 ಕಳೆದ ಬಾರಿ 2.50 ಲಕ್ಷ ರೂ., ಖರ್ಚಾಗಿದ್ದು, ಈ ಬಾರಿ 3 ಲಕ್ಷ ರೂ., ಯಡಮೊಗೆ 1 ಲಕ್ಷ ರೂ., ಜಡ್ಕಲ್‌ಗೆ 4 ಲಕ್ಷ ರೂ., ಕೆರಾಡಿಗೆ 3.5 ಲಕ್ಷ ರೂ., ಕೆರ್ಗಾಲು 1 ಲಕ್ಷ ರೂ, ಕಿರಿಮಂಜೇಶ್ವರ 4.5 ಲಕ್ಷ ರೂ., ನಾಡದಲ್ಲಿ 1.50 ಲಕ್ಷ ರೂ., ನಾವುಂದದಲ್ಲಿ ಹೆದ್ದಾರಿ ಕಾಮಗಾರಿಯಿಂದ ಸಮಸ್ಯೆಯಾಗುತ್ತಿದ್ದು, 1.50 ಲಕ್ಷ ರೂ. ಬೇಕಿದೆ.
ಕೆಲವು ಕಡೆ ಸಮಸ್ಯೆಗಳಿಲ್ಲ
ಅಮಾಸೆಬೈಲು, ರಟ್ಟಾಡಿ, ಮಚ್ಚಟ್ಟು, ಗೋಳಿಹೊಳೆ, ನೂಜಾಡಿ, ಕಾಲೊ¤àಡು, ಗುಲ್ವಾಡಿ, ಬಡಾಕೆರೆ, ಸೇನಾಪುರ, ಬಳ್ಕೂರು, ಬಸ್ರೂರು, ಕೋಣಿ, ಕಂದಾವರ, ಕುಂಭಾಶಿ, ತೆಕ್ಕಟ್ಟೆ ಗ್ರಾಮದಲ್ಲಿ ನೀರಿನ ಸಮಸ್ಯೆ ಇಲ್ಲ ಎಂದು ಸಭೆಗೆ ಅಧಿಕಾರಿಗಳು ತಿಳಿಸಿದರು.
ಮೊದಲು ತರಾಟೆ, ಬಳಿಕ ಶ್ಲಾಘನೆ
ಕೆಲವು ಗ್ರಾ.ಪಂ.ಗಳಲ್ಲಿ 94ಸಿ, ಅಕ್ರಮ-ಸಕ್ರಮ, ಡೀಮ್ಡ್ ಫಾರೆಸ್ಟ್, ಗೋಮಾಳ ಕುರಿತಂತೆ ಅರ್ಜಿ ವಿಲೇವಾರಿಗೆ ಬಾಕಿ ಇದ್ದು, ಅಧಿಕಾರಿಗಳು ಏನು ಮಾಡುತ್ತಿದ್ದೀರಾ. ಜನ ಕರೆ ಮಾಡಿದರೆ ಕೈಗೆ ಸಿಗುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರೆ, ಸಭೆಯ ಕೊನೆಗೆ ನನ್ನ ವ್ಯಾಪ್ತಿಯಲ್ಲಿ 4 ಸಾವಿರ 94 ಸಿ ಅರ್ಜಿ ವಿಲೇ ಆಗಿದ್ದು, 3,900 ಮನೆಗಳು ಮಂಜೂರಾಗಿವೆ. ಇದು ರಾಜ್ಯದಲ್ಲೇ ಉತ್ತಮ ಸಾಧನೆಯೆಂದು ಸಚಿವ ಕಾಗೊಡು ತಿಮ್ಮಪ್ಪ ಶ್ಲಾಘಿಸಿದ್ದರು. ಅಧಿಕಾರಿಗಳ ಉತ್ತಮ ಸೇವೆಯಿಂದ ನಾನು ಸಮೀಕ್ಷೆ ಯಲ್ಲಿ ರಾಜ್ಯದ ನಂ.2 ಶಾಸಕನಾದೆ. ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥಕ್ಕೆ ಅಧಿಕಾರಿ ಗಳು ಶಕ್ತಿಮೀರಿ ಶ್ರಮಿಸುತ್ತಿದ್ದು, ಸರಕಾರಕ್ಕೆ ಒಳ್ಳೆಯ ಹೆಸರು ಬರಲು ನೀವೇ ಕಾರಣಕರ್ತರು ಎಂದು ಶಾಸಕ ಗೋಪಾಲ ಪೂಜಾರಿ ಅಧಿಕಾರಿಗಳನ್ನು ಅಭಿನಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.