“ಬಂಟಕಲ್ಲು ವಾರ್ಡ್‌ ರಾಜ್ಯಕ್ಕೆ ಮಾದರಿಯಾಗಲಿ ‘


Team Udayavani, Sep 12, 2017, 7:20 AM IST

1109shirva1.jpg

ಶಿರ್ವ: ಗ್ರಾಮದಲ್ಲಿ ಎಲ್ಲೆಂದರಲ್ಲಿ ಕಸ ತ್ಯಾಜ್ಯ ಹರಡಿರುವುದ ರಿಂದ ನಮ್ಮ ಅಭಿಮಾನಕ್ಕೆ ಧಕ್ಕೆಯಾಗುತ್ತದೆ ಎಂಬ ಭಾವನೆ ಜನರಲ್ಲಿ ಮೂಡಿ ಕಸ,ತ್ಯಾಜ್ಯ ಸಮಸ್ಯೆಗೆ ಶಾಶ್ವತ ಪರಿ ಹಾರ ಸಿಗಬೇಕು. ಜನರು ತ್ಯಾಜ್ಯ ನಿರ್ವ ಹಣೆಯಲ್ಲಿ ಪಂಚಾಯತ್‌ನೊಂದಿಗೆ ಕೈಜೋಡಿಸಿಕೊಂಡು ಬಟ್ಟೆ ಚೀಲ ಬಳಸುವ ದೃಢಸಂಕಲ್ಪ ಮಾಡಿ ಪ್ಲಾಸ್ಟಿಕ್‌ಎಂಬ ರಕ್ಕಸನನ್ನು ಹೊಡೆ ದೋಡಿಸಬೇಕು. ಈ ನಿಟ್ಟಿನಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ಮಹತ್ವದ ಹೆಜ್ಜೆ ಇಟ್ಟು ಪ್ರಗತಿಪರ ಕಾರ್ಯ ಮಾಡುತ್ತಿರುವ ಶಿರ್ವ ಗ್ರಾ.ಪಂ. ಬಂಟಕಲ್ಲು ವಾರ್ಡ್‌ ರಾಜ್ಯಕ್ಕೆ ಮಾದರಿಯಾಗಲಿ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಹೇಳಿದರು.

ಅವರು ಸೋಮವಾರ ಬಂಟಕಲ್ಲು ರೋಟರಿ ಭವನದಲ್ಲಿ ಶಿರ್ವ ಗ್ರಾ.ಪಂ.ವ್ಯಾಪ್ತಿಯ ಬಂಟಕಲ್ಲು ವಾರ್ಡ್‌ನ ತ್ಯಾಜ್ಯ (ಸಂಪನ್ಮೂಲ) ನಿರ್ವಹಣೆ ಹಾಗೂ ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ಜಾಗೃತಿ ಮೂಡಿಸುವ ಸ್ವತ್ಛ-ಸ್ವಸ್ಥ-ಬಂಟಕಲ್ಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಾಂಬೂರು ಶಾಂತಿಪುರ ಚರ್ಚಿನ ಧರ್ಮಗುರು ರೆ|ಫಾ | ಪಾವ್‌ ರೇಗೊ, ಸೋದೆ ವಾದಿರಾಜ ಮಠ ಎಜುಕೇಶನ್‌ ಟ್ರಸ್ಟ್‌ನ ಕಾರ್ಯದರ್ಶಿ ರತ್ನಕುಮಾರ್‌, ಶಿರ್ವ ಜಿ.ಪಂ. ಸದಸ್ಯ ವಿಲ್ಸನ್‌ ಡಿ’ಸೋಜಾ, ತಾ.ಪಂ. ಸದಸ್ಯೆ ಗೀತಾ ವಾಗೆÛ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾಧಿಕಾರಿಗಳು ಕರಪತ್ರ ಬಿಡುಗಡೆ ಮಾಡಿ ಶಿರ್ವ ಸಂತ ಮೇರಿ ಪ.ಪೂ.ಕಾಲೇಜು ಹಳೆ ವಿದ್ಯಾರ್ಥಿ ಸಂಘ ಕೊಡಮಾಡಿದ ಬಟ್ಟೆ ಚೀಲವನ್ನು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ಮತ್ತು ಸಾರ್ವಜನಿಕರಿಗೆ ವಿತರಿಸಿದರು.

ಶಿರ್ವ ರೋಟರಿ ಅಧ್ಯಕ್ಷ ಹಸನಬ್ಬ ಶೇಖ್‌, ಬಂಟಕಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಮಾಧವ ಕಾಮತ್‌,ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ಉಮೇಶ್‌ ಪ್ರಭು, ಬಂಟಕಲ್ಲು ವೀರ ಮಾರುತಿ ಕಲಾ ಸಂಘದ ಅಧ್ಯಕ್ಷ ಸತೀಶ್‌, ಬಂಟಕಲ್ಲು ಕಾರು ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ದಿನೇಶ್‌, ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ಉಮೇಶ್‌ ದೇವಾಡಿಗ ಉಪಸ್ಥಿತರಿದ್ದರು.

ಗ್ರಾಮಕರಣಿಕ ವಿಜಯ್‌,ವಾರ್ಡ್‌ ಸದಸ್ಯರಾದ ಗ್ರೇಸಿ ಕಾಡೋìಜಾ,ಸುಜಾತಾ ಕುಲಾಲ್‌, ಗ್ರಾ.ಪಂ. ಸದಸ್ಯರು, ರೋಟರಿ ಸದಸ್ಯರು, ಎಸ್‌ಆರ್‌ಎಲ್‌ಎಂ ಕಾರ್ಯಕರ್ತರು,ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ಸಂತ ಮೇರಿ ಪ.ಪೂ.ಕಾಲೇಜು ಹಳೆವಿದ್ಯಾರ್ಥಿ ಸಂಘದ ಸದಸ್ಯರು, ಶ್ರೀ ನಾರಾಯಣ ಗುರು ವಿದ್ಯಾ ಸಂಸ್ಥೆಗಳ ಶಿಕ್ಷಕರು, ವಿದ್ಯಾರ್ಥಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು. ಶಿರ್ವ ಗ್ರಾ.ಪಂ.ಸದಸ್ಯ ಕೆ.ಆರ್‌. ಪಾಟ್ಕರ್‌ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗ್ರಾ.ಪಂ.ಸದಸ್ಯೆ ವೈಲೆಟ್‌ ಕ್ಯಾಸ್ತಲಿನೋ ಕಾರ್ಯಕ್ರಮ ನಿರೂಪಿಸಿ ,ಪಂ. ಅಭಿವೃದ್ಧಿ ಅಧಿಕಾರಿ ಮಾಲತಿ ವಂದಿಸಿದರು. ಕೊನೆಯಲ್ಲಿ ಕಸದ ತೊಟ್ಟಿಗಳ ಹಸ್ತಾಂತರ ನಡೆದು ರಂಗಭೂಮಿ (ರಿ) ಉಡುಪಿ ಇವರಿಂದ  ಕಸ ರಕ್ಕಸ  ಬೀದಿ ನಾಟಕ ನಡೆಯಿತು.

ಇಚ್ಛಾ ಶಕ್ತಿಯ ಕೊರತೆ
ಶಿರ್ವ ಗ್ರಾಮದಲ್ಲಿ ಬಾಲವಾಡಿಯಿಂದ ಹಿಡಿದು ಎಂಜಿನಿಯರಿಂಗ್‌ ಕಾಲೇಜಿನವರೆಗೆ ಶಿಕ್ಷಣ ಸಂಸ್ಥೆಗಳಿವೆ. ಅತೀ ಹೆಚ್ಚು ವಿದ್ಯಾವಂತರು, ಸುಶಿಕ್ಷಿತರು ಹಾಗೂ ಅನಿವಾಸಿ ಭಾರತೀಯರಿದ್ದು ,ಯಾವುದೇ ಸಂಪನ್ಮೂಲದ ಕೊರತೆಯಿಲ್ಲ. ಆದರೆ ಶಿರ್ವ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಬರುವಾಗಲೇ ಕಸ ತ್ಯಾಜ್ಯಸಮಸ್ಯೆ, ಬೀದಿ ನಾಯಿಗಳ ಸಮಸ್ಯೆ ಇನ್ನಿತರ ಸಮಸ್ಯೆಗಳು ಕಂಡುಬರುತ್ತಿದೆ. ಯಾವುದೇ ಕೊರತೆ ಇಲ್ಲದ ಪಂಚಾಯತ್‌ ಆದರೂ ಸ್ಥಳೀಯಾಡಳಿತ ಮತ್ತು ಜನರಲ್ಲಿ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದ್ದು ಜನರು ಪಂಚಾಯತ್‌ನೊಂದಿಗೆ ಕೈಜೋಡಿಸಬೇಕಿದೆ. ಈ ದಿಸೆಯಲ್ಲಿ ಗ್ರಾ.ಪಂ.ಸದಸ್ಯ ಕೆ.ಆರ್‌ ಪಾಟ್ಕರ್‌ ನೇತೃತ್ವದಲ್ಲಿ ಬಂಟಕಲ್ಲು ವಾಡ್‌ನ‌ಲ್ಲಿ ಘನ ತ್ಯಾಜ್ಯ ನಿರ್ಮೂಲನೆಗೆ ದೃಢವಾದ ಹೆಜ್ಜೆ ಇಡುತ್ತಿರುವುದು ಸಂತೋಷದ ವಿಚಾರ.
–  ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಉಡುಪಿ ಜಿಲ್ಲಾಧಿಕಾರಿ

ಟಾಪ್ ನ್ಯೂಸ್

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

JPC misused for drama in by-election: HK Patil

Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Tragedy: KTM ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಯುವಕರು ಸ್ಥಳದಲ್ಲೇ ಮೃತ್ಯು

Tragedy: ಭೀಕರ ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Udupi: ಭತ್ತದ ಕಟಾವು ಚುರುಕು; ದ್ವಿದಳ ಧಾನ್ಯ ಬಿತ್ತನೆಗೆ ಸಿದ್ಧತೆ

8-brahmavar

Brahmavara ಬಂಟರ ಯಾನೆ ನಾಡವರ ಸಂಘ: ನಾಳೆ ನೂತನ ಪದಾಧಿಕಾರಿಗಳ ಪದಪ್ರದಾನ

6-udupi-3

Udupi: ಪ್ರಧಾನಿ ಸಹೋದರ ಸೋಮು ಬಾೖ ಶ್ರೀ ಕೃಷ್ಣಮಠಕ್ಕೆ ಭೇಟಿ

5-MAHE

MAHE Convocation: ನ. 8-10: ಮಾಹೆ ಘಟಿಕೋತ್ಸವ

Karkala ಸಿಸ್ಟರ್‌ ಡೋನಾಲ್ಡಾ ಪಾಯಸ್‌ ನಿಧನ

Karkala: ಅರುಣೋದಯ ವಿಶೇಷ ಶಾಲೆ ಮುಖ್ಯಸ್ಥೆ ಸಿಸ್ಟರ್‌ ಡೋನಾಲ್ಡಾ ಪಾಯಸ್‌ ನಿಧನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!

ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!

9

Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗ‌ಳಲ್ಲೇ ಬಸ್‌ ನಿಲುಗಡೆ; ಅನಾಹುತಕ್ಕೆ ಎಡೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

8(1)

Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.