ಬಂಟ್ವಾಡಿ – ಕೆಳಾಕಳಿ ಮಾರಿಕಾಂಬಾ ದೇವಿ ಜಾತ್ರೋತ್ಸವ
Team Udayavani, May 10, 2019, 6:10 AM IST
ಕುಂದಾಪುರ: ಹಕ್ಲಾಡಿ ಗ್ರಾಮದ ಕೆಳಾಕಳಿ – ಬಂಟ್ವಾಡಿಯಲ್ಲಿರುವ ಶ್ರೀ ಮಾರಿಕಾಂಬ ದೇವಿ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ಜರಗಿತು.
ಮೇ 6ರಂದು ರಾತ್ರಿ ಶ್ರೀ ದೇವಿಯ ವೈಭವದ ಬೀಡಿಗೆ ಮೆರವಣಿಗೆ, ಮೇ 7ರಂದು ಬಲಿಪೂಜೆ, ಆ ಬಳಿಕ ಭಕ್ತಿ ಲಹರಿ, ಸಂಜೆ 5ಕ್ಕೆ ಭಜನೆ, ಬಂಟ್ವಾಡಿ ಶಾಲೆಯ “ಯಕ್ಷ ದೀವಿ’ಗೆ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನಗೊಂಡಿತು. ಮೇ 8ರಂದು ಬೆಳಗ್ಗೆ ಬೇವು ಉಡಿಸುವುದು, ಸುತ್ತಕ್ಕಿ ಸೇವೆ, ಬೇವಿನ ಸೊಪ್ಪಿನ ಸೇವೆ ಹಾಗೂ ಕಸ ಗುಡಿಸುವ ಸೇವೆ ಮುನ್ನ ಗದ್ದುಗೆ ಯಲ್ಲಿ ಪೂಜಿಸಲ್ಪಡುವ ದೇವಿಗೆ ಮಹಾ ಮಂಗಳಾರತಿ, ಆ ಬಳಿಕ ಗಣೇಶ್ ಗಂಗೊಳ್ಳಿ ಬಳಗದಿಂದ ಗಾನ ಲಹರಿ, ಸಂಜೆ ಶ್ರೀ ಪಾಂಚಜನ್ಯ ಮಹಿಳಾ ಭಜನ ಮಂಡಳಿ ದೊಡ್ಡ ಹಿತ್ಲು ಗಂಗೊಳ್ಳಿ ವತಿಯಿಂದ ಭಜನೆ ನಡೆಯಿತು.
ಗುರುವಾರ ಬೆಳಗ್ಗೆ ತುಲಾಭಾರ ಸೇವೆ, ಬಲಿ ಕಾರ್ಯಕ್ರಮ, ಸಂಜೆ ಶ್ರೀ ಚೆನ್ನಬಸವೇಶ್ವರ ಭಜನಾ ಮಂಡಳಿ ನಾಯಕವಾಡಿ ಹಾಗೂ ಶ್ರೀ ರಾಮ ಮಂದಿರ ಭಜನ ಮಂಡಳಿ ಕಂಚುಗೋಡು ಇವರಿಂದ ಭಜನೆ, ರಾತ್ರಿ ಮಾರಿ ಹೊಡೆಯುವುದು, ರಾತ್ರಿ 1ಕ್ಕೆ ಶ್ರೀ ದೇವಿಯ ವೈಭವದ ಪುರ ಪ್ರವೇಶ ನೆರವೇರಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್ಬಾಟ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.