ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಗೊಳ್ಳುತ್ತಿರುವ ಬೆಳಪು ಜಾರಂದಾಯ ಕೆರೆ
1 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ
Team Udayavani, Nov 25, 2019, 5:23 AM IST
ಕಾಪು: ಬೆಳಪು ಗ್ರಾಮದ ಪುರಾತನ ಮತ್ತು ಇತಿಹಾಸ ಪ್ರಸಿದ್ಧವಾದ ಸುಮಾರು 3 ಎಕ್ರೆ ವಿಸ್ತೀರ್ಣ ಪ್ರದೇಶದಲ್ಲಿರುವ ಬೆಳಪು ಜಾರಂದಾಯ ಕೆರೆಯನ್ನು ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಬೆಳಪು ಗ್ರಾಮ ಪಂಚಾಯತ್ ಮುಂದಾಗಿದೆ.
ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ಮುಖಾಂತರ ಅಭಿವೃದ್ಧಿಗೊಂಡಿರುವ ಜಾರಂದಾಯ ಕೆರೆಯನ್ನು ಪ್ರವಾಸಿಗರಿಗೆ ಅನುಕೂಲವಾಗುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಪ್ರಿಯಾ ಇನ್‌ಲಾÂಂಡ್ ಫಿಶರಿಸ್ ಮತ್ತು ಬೋಟ್ ಸ್ಫೋರ್ಟ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಚಾಲನೆ ನೀಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ಮೂಳೂರಿನಿಂದ 1 ಕಿ.ಮೀ ಅಂತರದಲ್ಲಿರುವ ಆಕರ್ಷಣೀಯ ಜಾರಂದಾಯ ಕೆರೆ ಪಕ್ಕದಲ್ಲಿ ಅತೀ ಎತ್ತರದ ಬಂಡೆ ಇದ್ದು. ಬಂಡೆಯ ಮೇಲೇರಿ ಅಲ್ಲಿಂದ ಕಾಪು ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳನ್ನು ಮತ್ತು ಕರಾವಳಿಯ ಸಮುದ್ರವನ್ನು ವೀಕ್ಷಿಸಲು ವೀಕ್ಷಣಾ ಯಂತ್ರವನ್ನು ಅಳವಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
ವಿವಿಧ ವ್ಯವಸ್ಥೆಗಳ ಜೋಡಣೆ
ಕೆರೆಯ ಅಭಿವೃದ್ಧಿಯೊಂದಿಗೆ ಪುಟ್ಟ ಮಕ್ಕಳಿಗೆ, ಮಹಿಳೆಯರಿಗಾಗಿ ಮನೋರಂಜನಾ ಪಾರ್ಕ್ ನಿರ್ಮಿಸುವುದು. ಪ್ರವಾಸಿಗರಿಗಾಗಿ ಪೆಡೆಲ್ ಬೋಟ್, ರೋಬೋಟ್ ಮೋಟಾರ್ ಬೋಟ್, ಉದ್ಯಾನವನ, ವಿಶ್ರಾಂತಿ ಕುರ್ಚಿಗಳು, ಕೆರೆಯ ಸುತ್ತಲೂ ಔಷಧಿ ಗಿಡಗಳನ್ನು ಬೆಳೆಸುವುದು ಸಿಹಿ ನೀರಿನ ವಿವಿಧ ಜಾತಿಯ ಮೀನು ಮರಿಗಳ ಸಾಕಾಣಿಕೆಯ ಉದೇªಶ ಹೊಂದಲಾಗಿದೆ.
ಪ್ರವಾಸಿಗರಿಗೆ ವಿಮೆ ಒದಗಿಸಲು ಚಿಂತನೆ
ಕೆರೆಯ ಸುತ್ತಮುತ್ತಲಿನಲ್ಲಿ ಸ್ವತ್ಛತೆಯನ್ನು ಕಾಪಾಡುವುದು, ಕೆರೆಯ ದಂಡೆಯ ಉದ್ದಕ್ಕೂ ಆಯುರ್ವೇದ ಗಿಡಗಳನ್ನು ನೆಟ್ಟು ಸಂರಕ್ಷಿಸುವುದು, ಆಮ್ಲಜನಕ ಹೊರಸೂಸುವ ಗಿಡಗಳನ್ನು ನೆಡುವುದರ ಜೊತೆಯಲ್ಲಿ ಹೂ ಗಿಡಗಳನ್ನು ಬೆಳೆಸುವುದು. ಬೋಟಿನಲ್ಲಿ ವಿಹರಿಸುವವರಿಗೆ ಲೆ„ಫ್ ಜಾಕೆಟ್ ಅಳವಡಿಸುವುದು, ಪ್ರವಾಸಿಗರ ರಕ್ಷಣೆಗೆ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಿಸುವುದು, ಶೌಚಾಲಯ ಮತ್ತು ಸ್ನಾನಗƒಹದ ನಿರ್ಮಾಣ, ಬೋಟಿನಲ್ಲಿ ವಿಹರಿಸುವ ಸಾರ್ವಜನಿಕರಿಗೆ ಜೀವ ವಿಮೆ ಒದಗಿಸಲು ಯೋಜನೆ ರೂಪಿಸಲಾಗಿದೆ.
ಹೆಚ್ಚಿನ ಅನುದಾನಕ್ಕೆ ಮನವಿ
ಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ ಕೆರೆಯ ಅಭಿವೃದ್ಧಿ ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ 2 ಬೋಟಿಂಗ್ ಮತ್ತು ಸೋಲಾರ್ ದೀಪಗಳನ್ನು ಒದಗಿಸಲಾಗಿದೆ. ಜಾರಂದಾಯ ಕೆರೆಗೆ ಹೋಗುವ ಸಾರ್ವಜನಿಕ ರಸ್ತೆ, ಹೆ„ಮಾಸ್ಕ್ ವಿದ್ಯುತ್ ದೀಪ ಮತ್ತು ಉದ್ಯಾನವನ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಪ್ರವಾಸೋದ್ಯಮ ಇಲಾಖೆಗೆ ಅನುದಾನಕ್ಕಾಗಿ ಬೆಳಪು ಗ್ರಾ.ಪಂ ಮೂಲಕ ಮನವಿ ಮಾಡಿಕೊಳ್ಳಲಾಗಿದೆ.
ಇಲ್ಲಿ ಬೋಟಿಂಗ್‌ನ್ನು ನಡೆಸುವ ಸಂದರ್ಭದಲ್ಲಿ ಅಂಗವಿಕಲ ಮಕ್ಕಳಿಗೆ ಮತ್ತು ವಿಕಲಚೇತನರಿಗೆ ಬೋಟ್ ರೈಡಿಂಗ್ ಉಚಿತವಾಗಿ ನೀಡಲಾಗುವುದು. ಶಾಲಾ ಮಕ್ಕಳಿಗೆ ರಿಯಾಯತಿ ದರದಲ್ಲಿ ಬೋಟಿಂಗ್, ಜಲಕ್ರೀಡೆ, ನದಿ ದಾಟುವಿಕೆ, ಆಟೋಟಗಳಿಗೆ, ನೀರಿನ ಪಾಠಗಳಿಗೆ ಉಚಿತವಾಗಿ ಸೇವೆಯನ್ನು ನೀಡಲು ಸಹಕರಿಸುತ್ತೇವೆ. ಕೆರೆಯ ಭಾಗದಲ್ಲಿ ಸಾರ್ವಜನಿಕ ವಸ್ತು ಪ್ರದರ್ಶನ-ಮಾರಾಟ,
ವಿವಿಧ ಮನೋರಂಜನಾ ಕ್ರೀಡೆಗಳನ್ನು ಆಯೋಜಿಸಲಾಗುವುದು. ಪರಿಸರಕ್ಕೆ ಮಾರಕವಾದ ಡೀಸೆಲ್, ಪೆಟ್ರೋಲ್, ಸೀಮೆಎಣ್ಣೆ ಬಳಸದೆ ಅದರ ಬದಲಾಗಿ ಪರಿಸರ ಸ್ನೇಹ ಎಲ್.ಪಿ.ಜಿ ಅಳವಡಿಕೆಗೆ ಚಿಂತನೆ ನಡೆಸಲಾಗಿದೆ ಎಂದು ಬೆಳಪು ಗ್ರಾ.ಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಯೋಜನೆಗೆ ಚಾಲನೆ
ಬೆಳಪು ಗ್ರಾಮದಲ್ಲಿ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ, ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಮತ್ತು ಕೈಗಾರಿಕಾ ಪಾರ್ಕ್ ನಿರ್ಮಾಣವಾಗುತ್ತಿದ್ದು ಅದರ ಜತೆಗೆ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಪ್ರವಾಸಿಗರ ಆಕರ್ಷಣೆಗೆ ಪೂರಕವಾಗುವ ಜಾರಂದಾಯ ಕೆರೆಯ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿಗೆ ಒಂದು ಸವಾಲು ಆಗುವ ರೀತಿಯಲ್ಲಿ ಸುಗ್ರಾಮವನ್ನಾಗಿ ರೂಪಿಸಬಹುದೆಂಬುದಕ್ಕೆ ಪುಟ್ಟ ಬೆಳಪು ಗ್ರಾಮವೇ ಸಾಕ್ಷಿಯಾಗಿದೆ.
-ಡಾ| ದೇವಿಪ್ರಸಾದ್ ಶೆಟ್ಟಿ,
ಅಧ್ಯಕ್ಷರು, ಬೆಳಪು ಗ್ರಾಮ ಪಂಚಾಯತ್
-ರಾಕೇಶ್ ಕುಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.