ನಿರ್ವಹಣೆ ಇಲ್ಲದೆ ಸೊರಗುತ್ತಿದೆ ನಂದಿಕೂರು ಕೈಗಾರಿಕೆ ಪ್ರದೇಶ : ಚರಂಡಿ, ಬೀದಿ ದೀಪವಿಲ್ಲ


Team Udayavani, Oct 13, 2022, 2:30 PM IST

ನಿರ್ವಹಣೆ ಇಲ್ಲದೆ ಸೊರಗುತ್ತಿದೆ ನಂದಿಕೂರು ಕೈಗಾರಿಕೆ ಪ್ರದೇಶ : ಚರಂಡಿ, ಬೀದಿ ದೀಪವಿಲ್ಲ

ಉಡುಪಿ : ನಂದಿಕೂರು ಕೈಗಾರಿಕೆ ಪ್ರದೇಶಕ್ಕೆ ಸುಮಾರು ಹನ್ನೊಂದು ವರ್ಷ ತುಂಬಿದರೂ ಕನಿಷ್ಠ ಮೂಲ ಸೌಕರ್ಯಗಳಿಲ್ಲದೇ ಸೊರಗುತ್ತಿದೆ.

ಹತ್ತು ವರ್ಷಗಳಲ್ಲಿ ಹಲವರು ಜನಪ್ರತಿನಿಧಿಗಳು ಬಂದರು, ಜಿಲ್ಲಾ ಉಸ್ತುವಾರಿ ಸಚಿವರು ಬದಲಾದರು, ಸಂಸದರೂ ಕಾರ್ಯ ನಿರ್ವಹಿಸಿದರು. ಆದರೂ ಈ ಕೈಗಾರಿಕೆ ಪ್ರದೇಶದ ಪರಿಸ್ಥಿತಿ ಬದಲಾಗಲಿಲ್ಲ.

2011ರಲ್ಲಿ ಹಂಚಿಕೆ ಮಾಡಲಾದ ಕೈಗಾರಿಕಾ ಪ್ರದೇಶವಿದು. 86.64 ಎಕ್ರೆಯಲ್ಲಿ76 ನಿವೇಶನಗಳನ್ನು ಅಭಿವೃದ್ಧಿಪಡಿಸಿ 75 ಹಂಚಲಾಗಿದೆ. ಆದರೆ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ.
ಕಾರ್ಕಳ-ಬೆಳ್ಮಣ್‌-ಪಡುಬಿದ್ರಿ ಹೆದ್ದಾರಿಗೆ ತಾಗಿಕೊಂಡಿರುವ ಪ್ರದೇಶವಿದು. ಬೆಳಪು ಕೈಗಾರಿಕೆ ಪ್ರದೇಶದಿಂದಲೂ ಸಂಪರ್ಕವಿದೆ. ಪಡುಬಿದ್ರಿ ಪೇಟೆಯಿಂದ 3-4 ಕಿಮೀ ಅಂತರದಲ್ಲಿದೆ. ಮದರಂಗಡಿ-ನಂದಿಕೂರು ಮಾರ್ಗವಾಗಿಯೂ ತಲುಪಬಹುದು.

ಈ ಕೈಗಾರಿಕೆ ಪ್ರದೇಶದ ಒಳಗಿನ ರಸ್ತೆಗಳು ವಿಶಾಲವಾಗಿವೆ. ಹಂಚಿಕೆಯಾಗಿರುವ ನಿವೇಶನಗಳಲ್ಲಿ ಕೆಲವು ಕಾರ್ಯಾರಂಭ ಮಾಡಿದ್ದರೆ, ಕೆಲವು ನಿರ್ಮಾಣ ಹಂತ ದಲ್ಲಿವೆ. ಆದರೆ ಇಲ್ಲಿ ರಸ್ತೆ ಹೊರತುಪಡಿಸಿ ಬೇರೆ ಯಾವ ಮೂಲ ಸೌಕರ್ಯವೂ ಸರಿಯಿಲ್ಲ.

ಬೀದಿ ದೀಪವಿಲ್ಲ
ಕೈಗಾರಿಕೆ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯದ ಸಮಸ್ಯೆ ಹೆಚ್ಚಿತ್ತು. ಇತ್ತೀಚೆಗೆ ಸ್ವಲ್ಪ ಬಗೆಹರಿದಿದೆ. ಆದರೆ ವೋಲ್ಟೆಜ್‌ ಕಡಿಮೆ ಇರುವುದರಿಂದ ಸಮಸ್ಯೆಯಾಗುತ್ತಿದೆ. ನಿರಂತರ ವಿದ್ಯುತ್‌ ಪೂರೈಸಬೇಕು. ಜತೆಗೆ ಕೈಗಾರಿಕೆ ಪ್ರದೇಶದಲ್ಲಿ ಬೀದಿ ದೀಪಗಳಿಲ್ಲ. ರಾತ್ರಿವೇಳೆ ಕೈಗಾರಿಕೆ ಪ್ರದೇಶ ಸಂಪೂರ್ಣ ಕತ್ತಲಲ್ಲಿದೆ. ಹಾಗಾಗಿ ಕಳ್ಳರ ಕಾಟವೂ ಹೆಚ್ಚು. ಇದಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ.

ನಿರ್ವಹಣೆ ಕೊರತೆ
ಸಮತಟ್ಟಲ್ಲದ ನಿವೇಶವನ್ನು ಹಂಚಿಕೆ ಮಾಡಿದ್ದರಿಂದ ಬಹುತೇಕ ಕೈಗಾರಿಕೋದ್ಯಮಿಗಳು ತಮ್ಮ ನಿವೇಶನವನ್ನು ಸರಿಪಡಿಸಿಕೊಂಡು ಕೈಗಾರಿಕೆ ಆರಂಭಿಸಿದ್ದಾರೆ. ಕರಾರು ಇನ್ನೂ ಮುಗಿಯದೇ ಇರುವುದರಿಂದ ಮಾಲಕತ್ವ ಸಂಪೂರ್ಣವಾಗಿ ಕೈಗಾರಿಕೆಗಳಿಗೆ ಬಂದಿಲ್ಲ. ಹೀಗಾಗಿ ನಿರ್ವಹಣೆಯನ್ನು ಕರ್ನಾಟಕ ಕೈಗಾರಿಕೆ ಪ್ರದೇಶ ಅಭಿವೃದ್ಧಿ ಮಂಡಳಿಯವರು ಮಾಡಬೇಕು ಅಥವಾ ನಮ್ಮಿಂದ ತೆರಿಗೆ ಸಂಗ್ರಹಿಸುವ ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳು ಮಾಡಬೇಕು. ಯಾರೂ ಈ ಬಗ್ಗೆ ತಲೆ ಕೆಡಿಸಿ ಕೊಳ್ಳುತ್ತಿಲ್ಲ. ತೆರಿಗೆ ಮಾತ್ರ ಕಾಲಕಾಲಕ್ಕೆ ಪಡೆಯಲಾಗುತ್ತಿದೆ ಎಂಬುದು ಕೈಗಾರಿಕೋದ್ಯಮಿಗಳ ಟೀಕೆ.

ನಿಗಾ ವ್ಯವಸ್ಥೆ ಆಗಬೇಕು
ಕೈಗಾರಿಕೆ ಪ್ರದೇಶದ ಒಳಗೆ ಯಾವುದೇ ರೀತಿಯ ಭದ್ರತಾ ವ್ಯವಸ್ಥೆ ಇಲ್ಲ. ಹೊರ ರಾಜ್ಯದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅವರ ಭದ್ರತೆಯ ಜತೆಗೆ ಅವರ ಚಟುವಟಿಕೆಗಳ ಮೇಲೂ ನಿಗಾ ವಹಿಸಬೇಕಿದೆ. ಹಾಗೆಯೇ ಕೈಗಾರಿಕೆ ಪ್ರದೇಶದ ಪ್ರಮುಖ ರಸ್ತೆಗಳಲ್ಲಿ ಮತ್ತು ದ್ವಾರಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಭದ್ರತಾ ಸಿಬಂದಿ ನೇಮಕವೂ ಮಾಡಬೇಕು ಎಂಬುದು ಹಲವರ ಅಭಿಪ್ರಾಯ.

ಚರಂಡಿ ವ್ಯವಸ್ಥೆ ಇಲ್ಲ
ಕೈಗಾರಿಕೆ ಪ್ರದೇಶದ ಒಳಗೆ ಆಳೆತ್ತರ ಗಿಡಗಂಟಿಗಳು ಬೆಳೆದಿವೆ. ಸ್ವತ್ಛತೆಗೆ ಆದ್ಯತೆ ಇಲ್ಲದೇ ಇರುವುದರಿಂದ ಕಸವೂ ಅಲ್ಲಲ್ಲಿ ರಾಶಿ ಬೀಳುತ್ತಿರುತ್ತದೆ. ಸ್ಥಳೀಯಾಡಳಿತಗಳು ಕಸವನ್ನು ಕೊಂಡೊಯ್ಯುವುದಿಲ್ಲ. ಇದೆಲ್ಲದಕ್ಕಿಂತ ಮುಖ್ಯವಾಗಿ ಕೈಗಾರಿಕೆಗಳ ತ್ಯಾಜ್ಯ ನೀರು ಬಿಡಲು ವ್ಯವಸ್ಥೆ ಇಲ್ಲ. ಚರಂಡಿಯನ್ನು ಸರಿಯಾಗಿ ನಿರ್ಮಿಸದೇ ಇರುವುದರಿಂದ ಮುಂದೆ ಬಹುದೊಡ್ಡ ಸಮಸ್ಯೆಯಾಗುವ ಸಂಭವವಿದೆ. ಕೊಳಚೆ ನೀರು ಬಿಡಲು ಬೇಕಾದ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂಬ ಆಗ್ರಹವೂ ಇದೆ.

ಸಂಪರ್ಕ ರಸ್ತೆಯ ಸಮಸ್ಯೆ
ಬೆಳಪು ಹಾಗೂ ನಂದಿಕೂರು ಕೈಗಾರಿಕೆ ಪ್ರದೇಶ ಅಕ್ಕಪಕ್ಕದಲ್ಲೇ ಇದ್ದರೂ ಸರಿಯಾದ ಸಂಪರ್ಕ ರಸ್ತೆಯಿಲ್ಲ. ಇರುವ ರಸ್ತೆಗಳು ಕಿರಿದಾಗಿದ್ದು, ಎಲ್ಲೆಡೆ ಹೊಂಡಗಳೇ ಇವೆ.ಈ ಎರಡು ಕೈಗಾರಿಕೆ ಪ್ರದೇಶವನ್ನು ಗಮನದಲ್ಲಿಟ್ಟುಕೊಂಡು ರಸ್ತೆಯನ್ನು ಅಭಿವೃದ್ಧಿಪಡಿಸಿದಲ್ಲಿ ಸ್ಥಳೀಯವಾಗಿ ಆರ್ಥಿಕತೆಗೂ ಉತ್ತೇಜನ ಸಿಗಲಿದೆ. ಕೈಗಾರಿಕೆಗಳು ಇನ್ನಷ್ಟು ಹೂಡಿಕೆ ಮಾಡಬಹುದು. ಎರಡು ಕೂಡ ಇತ್ತೀಚಿನ ವರ್ಷದಲ್ಲಿ ಅಭಿವೃದ್ಧಿಪಡಿಸಿರುವ ಕೈಗಾರಿಕೆ ಪ್ರದೇಶ ಆಗಿರುವುದರಿಂದ ಮೂಲಸೌಕರ್ಯ ಅಭಿವೃದ್ಧಿಗೂ ಅವಕಾಶ ಹೆಚ್ಚಿದೆ. ಈ ಬಗ್ಗೆ ಸಂಬಂಧಪಟ್ಟ ಆಡಳಿತ ವ್ಯವಸ್ಥೆ ವಿಶೇಷ ಗಮನ ಹರಿಸಬೇಕು ಎಂದು ಕೈಗಾರಿಕೆ ಮಾಲಕರ ಆಗ್ರಹ.

ಅಗ್ನಿಶಾಮಕ ದಳ, ಆಸ್ಪತ್ರೆ ಬೇಕು
ಕಾಪು ತಾಲೂಕು ವ್ಯಾಪ್ತಿಯ ಸುಮಾರು 15 ಕಿ.ಮೀ. ಅಂತರದಲ್ಲಿ ನಂದಿಕೂರು ಹಾಗೂ ಬೆಳಪು ಕೈಗಾರಿಕೆ ಪ್ರದೇಶವಿದೆ. ಎರಡೂ ಪ್ರದೇಶಗಳಲ್ಲಿ ಒಟ್ಟಾರೆ 150ಕ್ಕೂ ಅಧಿಕ ಎಕ್ರೆ ಭೂಮಿಯನ್ನು ಹಂಚಲಾಗಿದೆ. ಸುಮಾರು 100ಕ್ಕೂ ಅಧಿಕ ಕೈಗಾರಿಕೆಗಳಿಗೆ ನಿವೇಶನ ಹಂಚಲಾಗಿದೆ. ಕಾಪು ಕೇಂದ್ರವಾಗಿ ಅಥವಾ ಪಡುಬಿದ್ರಿ ಕೇಂದ್ರವಾಗಿಟ್ಟುಕೊಂಡು ಒಂದು ಅಗ್ನಿಶಾಮಕ ದಳದ ಠಾಣೆ ಸ್ಥಾಪನೆಯಾಗಬೇಕಿದೆ. ಅಗ್ನಿ ಅನಾಹುತಗಳು ಸಂಭವಿಸಿದಾಗ ಉಡುಪಿಯಿಂದಲೇ ಸಿಬಂದಿ ಬರಬೇಕಾಗುತ್ತದೆ. ಹೀಗಾಗಿ ಒಂದು ಅಗ್ನಿಶಾಮಕ ಠಾಣೆಯ ವ್ಯವಸ್ಥೆ ಮಾಡಬೇಕು. ಹಾಗೆಯೇ ತಾಲೂಕಿನಲ್ಲಿ ಸುಸಜ್ಜಿತವಾದ ಸರಕಾರ ಆಸ್ಪತ್ರೆಯಿಲ್ಲ. ಏನೇ ಆರೋಗ್ಯದ ಸಮಸ್ಯೆ ಬಂದರೂ ಉಡುಪಿ, ಮಣಿಪಾಲಕ್ಕೆ ಬರಬೇಕು. ಕೈಗಾರಿಕೆಗಳು ಹೆಚ್ಚು ಇರುವುದರಿಂದ ಸುಸಜ್ಜಿತ ತಾಲೂಕು ಆಸ್ಪತ್ರೆಯನ್ನು ನಿರ್ಮಿಸಬೇಕೆಂಬುದು ಸಾರ್ವಜನಿಕರ ಆಗ್ರಹ.

ಕೈಗಾರಿಕೆ ಪ್ರದೇಶದ ಒಳಗೆ ನೀರಿನ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಕ್ರಮ ಆಗಬೇಕು. ಮೂಲಸೌಕರ್ಯ ಅಭಿವೃದ್ಧಿ ವಿಷಯವಾಗಿ ಮೊದಲು ಚರಂಡಿ ವ್ಯವಸ್ಥೆ ಸರಿಮಾಡಬೇಕು. ಚರಂಡಿ ಸಮಸ್ಯೆ ಸರಿಯಾಗದಿದ್ದರೆ ಭವಿಷ್ಯದಲ್ಲಿ ಸ್ಥಳೀಯರಿಗೆ ಹೆಚ್ಚು ಸಮಸ್ಯೆಯಾಗುವ ಸಾಧ್ಯತೆ. ಸ್ಥಳೀಯರಿಗೆ ಉದ್ಯೋಗಾವಕಾಶ ಸಿಗುತ್ತಿದೆ.

ಟಾಪ್ ನ್ಯೂಸ್

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

1-ronak

National Badminton: ರೋಣಕ್‌ ಚೌಹಾಣ್‌ ಸೆಮಿಗೆ

ICC

Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್‌ ಹಂತಕ್ಕೇರಿದರೆ?

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.