ಬಸ್ರೂರು -ಬಳ್ಕೂರು: ಹೊಂಡ ಬಿದ್ದ ರಸ್ತೆಗೆ ಕಾಯಕಲ್ಪ ಯಾವಾಗ?
Team Udayavani, May 23, 2019, 6:10 AM IST
ಬಸ್ರೂರು: ಬಸ್ರೂರಿನಿಂದ ವಾರಾಹಿ ನದಿ ತಟದ ಪ್ರದೇಶವಾದ ಬಳ್ಕೂರಿನ ಕೆಳ ಭಾಗಕ್ಕೆ ಹೋಗುವ ಸುಮಾರು 2.5 ಕಿ.ಮೀ.ಉದ್ದದ ರಸ್ತೆಯಲ್ಲಿ (ಗುಲ್ವಾಡಿ ವೆಂಟೆಡ್ ಡ್ಯಾಮ್ ಹತ್ತಿರದ ರಸ್ತೆ) ಈಗ ಪಾದಚಾರಿಗಳಿಗೆ ಮತ್ತು ದ್ವಿಚಕ್ರ ವಾಹನ ಸವಾರರಿಗೆ ಸಂಚಾರ ಕಷ್ಟ ಸಾಧ್ಯವಾಗಿದೆ.
ಈ ಹಿಂದೆ ರಸ್ತೆಗೆ ತೇಪೆ ಕಾರ್ಯ ನಡೆದಿತ್ತು. ಆದರೆ ತೇಪೆ ಕಿತ್ತು ಹೋಗಿ ಸಂಚಾರ ಅಸಾಧ್ಯವಾಗಿದೆ. ಬಸ್ರೂರಿನಿಂದ ಆರಂಭದಲ್ಲಿ ಸುಮಾರು 500 ಮೀ ಉದ್ದದ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದೆ.
ಆದರೆ ಬಳ್ಕೂರು ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಸುಮಾರು 1.50 ಕಿ.ಮೀ.ಉದ್ದದ ರಸ್ತೆ ದುರಸ್ತಿಯಾಗಬೇಕಿದೆ. ಈ ಭಾಗದ ಜನರಿಗೆ ಪ್ರತಿನಿತ್ಯ ಬಸ್ರೂರಿಗೆ ಹೋಗಬೇಕಾದ ಅನಿವಾರ್ಯತೆ ಇರುವುದರಿಂದ ರಸ್ತೆ ಕಾಮಗಾರಿ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ತೇಪೆ ಬೇಡ
ಬಸ್ರೂರಿನಿಂದ ಬಳ್ಕೂರು ಕೆಳ ಭಾಗಕ್ಕೆ ಹೋಗುವ ಈ ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಹಾಕಿದ ಡಾಮರು ಕಿತ್ತು ಹೋಗಿ ರಸ್ತೆಯುದ್ದಕ್ಕೂ ಹೊಂಡ ಬಿದ್ದಿದೆ. ಇಲ್ಲಿ ತೇಪೆ ಹಾಕಿದರೆ ಪ್ರಯೋಜನವಿಲ್ಲ, ರಸ್ತೆ ಪುನರ್ ನಿರ್ಮಾಣ ಅಗತ್ಯ.
-ರಾಮಕೃಷ್ಣ , ಬಳ್ಕೂರು ನಿವಾಸಿ
ಅನುದಾನ ಮಂಜೂರಾಗಿದೆ
ಬಸ್ರೂರಿನಿಂದ ಬಳ್ಕೂರಿಗೆ ಸಂಪರ್ಕ ಕಲ್ಪಿಸುವ ಗುಲ್ವಾಡಿ ವೆಂಟೆಡ್ ಡ್ಯಾಮ್ ಹತ್ತಿರದ ಈ ರಸ್ತೆಯ ಪುನರ್ ನಿರ್ಮಾಣಕ್ಕೆ ಶಾಸಕರ ಅನುದಾನ40 ಲಕ್ಷ ರೂ. ಮಂಜೂರಾಗಿದೆ.
-ಅಕ್ಷತ್ ಶೇರೆಗಾರ್, ಅಧ್ಯಕ್ಷ ,ಗ್ರಾ.ಪಂ. ಬಳ್ಕೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.