ಅಂತರ್ಜಾಲ ಬಳಕೆಯಲ್ಲಿ ಹೆಚ್ಚಿನ ಎಚ್ಚರವಿರಲಿ 

Team Udayavani, Jul 15, 2018, 6:20 AM IST

140.gif

ಉಡುಪಿ: ತಂತ್ರಜ್ಞಾನ ಬೆಳೆಯುತ್ತಿರುವಂತೆ  ಇದನ್ನು  ಬಳಸಿಕೊಂಡು ನಡೆಯುವ ಅಪರಾಧಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅಂತರ್ಜಾಲ ಅರಿತ ಸೈಬರ್‌ ಕ್ರೈಂ ಭೇದಿಸುವುದು ಪೊಲೀಸರಿಗೂ ಸವಾಲು. ಹಾಗಾಗಿ ಅಂತರ್ಜಾಲ ಸೇರಿದಂತೆ ಸಾಮಾಜಿಕ ಜಾಲತಾಣಗಳಂತಹ ಆಧುನಿಕ ತಂತ್ರಜ್ಞಾನಗಳ ಬಳಕೆಯಲ್ಲಿ ಅತ್ಯಂತ ಹೆಚ್ಚಿನ ಜಾಗರೂಕತೆ , ಎಚ್ಚರಿಕೆ ಅಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ ನಾಯ್ಕ ಟಿ. ಹೇಳಿದರು. 

ಶನಿವಾರ ಪೊಲೀಸ್‌ ಇಲಾಖೆ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಎಸ್‌ಪಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ  ಸೈಬರ್‌ ಅಪರಾಧಗಳ ತನಿಖೆ ಕುರಿತಾದ ಕಾರ್ಯಾಗಾರ  ಉದ್ಘಾಟಿಸಿ ಅವರು ಮಾತನಾಡಿದರು. 

ಇ-ಮೇಲ್‌, ಫೇಸ್‌ಬುಕ್‌ ಮೊದಲಾದವುಗಳ ಬಳಕೆಯ ಸಂದರ್ಭದಲ್ಲಿ ಅವಸರ ಸಲ್ಲದು. ಅಪರಿಚಿತರೊಂದಿಗೆ ಸಂವಹನ ನಡೆಸುವುದರಿಂದ ಅನಾಹುತಗಳ ಸಾಧ್ಯತೆ ಹೆಚ್ಚು. ಮಕ್ಕಳ ಮೇಲೆ ಸಾಮಾಜಿಕ ಜಾಲತಾಣ ದುಷ್ಪರಿಣಾಮ ಬೀರುತ್ತವೆ. ಜತೆಗೆ ವಯೋವೃದ್ಧರು ಮೋಸ ಹೋಗುವ ಸಾಧ್ಯತೆಗಳೂ ಅಧಿಕ. ಎಚ್ಚರಿಕೆಯಿಂದ ಬಳಕೆ ಮಾಡಿದರೆ ಮಾತ್ರ ಸುರಕ್ಷಿತವಾಗಿರುತ್ತದೆ. ಬ್ಯಾಂಕ್‌ ಅಧಿಕಾರಿಗಳೆಂದು ಕರೆ ಮಾಡಿ ವಂಚಿಸುವುದು, ಬಹುಮಾನ ಗೆದ್ದುಕೊಂಡ ಬಗ್ಗೆ ಜಾಹೀರಾತು ನೀಡಿ ಮೋಸ ಮಾಡುವುದು ಮೊದಲಾದವುಗಳು ಹೆಚ್ಚುತ್ತಿವೆ ಎಂದು ನ್ಯಾಯಾಧೀಶರು ಹೇಳಿದರು. 

ಮನೆಯಿಂದಲೇ ಆರಂಭವಾಗಲಿ
ಸೈಬರ್‌ ಅಪರಾಧ ನಿಯಂತ್ರಿಸುವ ಉದ್ದೇಶದಿಂದ ಮಾಹಿತಿ ತಂತ್ರಜ್ಞಾನ ಕಾಯಿದೆ ಜಾರಿಯಲ್ಲಿದೆ. ಅದಕ್ಕೆ ತಿದ್ದುಪಡಿಗಳು ಕೂಡ ಆಗಿವೆ. ಹಲವಾರು ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಆದರೆ ಸೈಬರ್‌ ಕ್ರೈಂ ವಿರುದ್ಧದ ಹೋರಾಟ ಮನೆಯಿಂದಲೇ ಆರಂಭವಾಗಬೇಕು. ಎಚ್ಚರಿಕೆಯಿಂದ ಬಳಸಬೇಕು ಎಂದು ನ್ಯಾಯಾಧೀಶರು ಹೇಳಿದರು.

ಅಸಾಧ್ಯವಲ್ಲ,ಕಠಿನ
ಸೈಬರ್‌ ಕ್ರೈಂಗಳನ್ನು ಪತ್ತೆ ಹಚ್ಚುವುದು ಅಸಾಧ್ಯ ವೇನಲ್ಲ, ಆದರೆ ಕಷ್ಟಸಾಧ್ಯ. ಸೈಬರ್‌ ಕ್ರೈಂ ಸಮಸ್ಯೆ ಎಲ್ಲ ದೇಶಗಳಲ್ಲಿಯೂ ಇದೆ. ಹೊಸ ತಂತ್ರಜ್ಞಾನ ದುರ್ಬಳಕೆ ಮಾಡಿಕೊಳ್ಳುವ ಬಗ್ಗೆಯೂ ಯೋಜನೆಗಳು ನಡೆಯುತ್ತಲೇ ಇರುತ್ತವೆ. ಇತ್ತೀಚೆಗೆ ದುಬೈನಲ್ಲಿ ನಡೆದಿರುವ ಹ್ಯಾಕರ್‌ಗಳ ಸಮ್ಮೇಳನವೇ ಇದಕ್ಕೆ ಸಾಕ್ಷಿ. ಜನತೆ ವಂಚನೆ ಆಗುವ ಮೊದಲೇ ಎಚ್ಚರವಾಗಬೇಕು. ಈ ಬಗ್ಗೆ ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ಹೆಚ್ಚಿನ ಸಂದರ್ಭಗಳಲ್ಲಿ ಅಧಿಕ ಹಣದ ಆಸೆಯೇ ಮೋಸ ಹೋಗಲು ಕಾರಣವಾಗಿರುತ್ತದೆ ಎಂದರು.

ಹಿರಿಯ ಸಿವಿಲ್‌ ನ್ಯಾಯಾಧೀಶೆ ಲತಾ, ಸರಕಾರಿ ಅಭಿಯೋಜಕಿ ಶಾಂತಿ  ಬಾೖ ಮುಖ್ಯ ಅತಿಥಿಗಳಾಗಿದ್ದರು. ಸಹಾಯಕ (ಹಿರಿಯ) ಸರಕಾರಿ ಅಭಿಯೋಜಕಿ ಜ್ಯೋತಿ ನಾಯಕ್‌, ಕಿರಿಯ ಕಾನೂನು ಅಧಿಕಾರಿ ಮುಮ್ತಾಜ್‌ ಉಪಸ್ಥಿತರಿದ್ದರು. ಮೈಸೂರು ಕೆ.ಪಿ.ಎ. ಸೈಬರ್‌ ಕ್ರೈಂ ಲಾ ಮತ್ತು ಸೆಕ್ಯುರಿಟಿ ಟ್ರೈನರ್‌ ಡಾ| ಅನಂತ ಪ್ರಭು, ಫ್ಲೋರಿಡಾ ವಿ.ವಿ. ಸಹಾಯಕ ಪ್ರಾಧ್ಯಾಪಕ ಪ್ರೊ| ವರದರಾಜ್‌, ಅಪರ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಚಂದ್ರ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ಡಿವೈಎಸ್‌ಪಿ ಕುಮಾರಸ್ವಾಮಿ ವಂದಿಸಿದರು.

ಪೊಲೀಸರು ತಜ್ಞರ ನೆರವು ಪಡೆಯಿರಿ
ಸೈಬರ್‌ ಕ್ರೈಂಗಳ ತನಿಖೆಯ ಸಂದರ್ಭದಲ್ಲಿ ಪೊಲೀಸರು ತಮ್ಮಲ್ಲೇ ಇರುವ ತಜ್ಞರ ನೆರವು ಪಡೆದುಕೊಳ್ಳಬೇಕು. ಆಗ ಮಾತ್ರ ತನಿಖೆ ಸಮರ್ಪಕವಾಗಿ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಸಾಧ್ಯವಾಗುತ್ತದೆ. ಅಂತೆಯೇ ಅಮಾಯಕರು ಶಿಕ್ಷೆಗೊಳಗಾಗುವುದು ತಪ್ಪುತ್ತದೆ. 
– ವೆಂಕಟೇಶ್‌ ನಾಯ್ಕ ಟಿ.,ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು

ಟಾಪ್ ನ್ಯೂಸ್

Ulaibettu ಪೆರ್ಮಂಕಿ ಉದ್ಯಮಿ ದರೋಡೆ ಪ್ರಕರಣ; 10 ಮಂದಿ ಆರೋಪಿಗಳ ಬಂಧನ

Ulaibettu ಪೆರ್ಮಂಕಿ ಉದ್ಯಮಿ ದರೋಡೆ ಪ್ರಕರಣ; 10 ಮಂದಿ ಆರೋಪಿಗಳ ಬಂಧನ

Dengue ಕರಾವಳಿಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ : ಮುಂಜಾಗರೂಕತೆಯೇ ಮದ್ದು

Dengue ಕರಾವಳಿಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ : ಮುಂಜಾಗರೂಕತೆಯೇ ಮದ್ದು

Karnataka ಗ್ರಾಮಗಳಲ್ಲಿ 100 ಕಟ್ಟೆ ಪಂಚಾಯತ್‌ಗೆ ಅಸ್ತು

Karnataka ಗ್ರಾಮಗಳಲ್ಲಿ 100 ಕಟ್ಟೆ ಪಂಚಾಯತ್‌ಗೆ ಅಸ್ತು

1-agni

Agniveer; ಪರಿಹಾರವಲ್ಲ, ಪಿಂಚಣಿ,ಹುತಾತ್ಮ ಗೌರವ ಕೊಡಿ:ಯೋಧನ ತಂದೆ ಆಗ್ರಹ

1–qewewqe

Bihar ಸೇತುವೆ ಕುಸಿತಕ್ಕೆ ಹೂಳು ತೆಗೆದಿದ್ದೇ ಕಾರಣ!

1-bhole-baba

America ಶ್ವೇತ ಭವನದಂತಿದೆ ಭೋಲೆ ಬಾಬಾ ಭವ್ಯ ಆಶ್ರಮ

1wess

First case in the world; ಕೆಲಸದ ಒತ್ತಡಕ್ಕೆ ಬೇಸತ್ತು ರೋಬೋಟ್‌ ಆತ್ಮಹತ್ಯೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka ಗ್ರಾಮಗಳಲ್ಲಿ 100 ಕಟ್ಟೆ ಪಂಚಾಯತ್‌ಗೆ ಅಸ್ತು

Karnataka ಗ್ರಾಮಗಳಲ್ಲಿ 100 ಕಟ್ಟೆ ಪಂಚಾಯತ್‌ಗೆ ಅಸ್ತು

BJP Vs ಸಿಎಂ ಸಿದ್ದರಾಮಯ್ಯ ಮುಡಾ ಕಾಳಗ

BJP Vs ಸಿಎಂ ಸಿದ್ದರಾಮಯ್ಯ ಮುಡಾ ಕಾಳಗ

Dengue: ಆರೋಗ್ಯ ಅಧಿಕಾರಿಯೇ ಆಹುತಿ: ಒಂದೇ ದಿನ 286 ಪ್ರಕರಣ

Dengue: ಆರೋಗ್ಯ ಅಧಿಕಾರಿಯೇ ಆಹುತಿ: ಒಂದೇ ದಿನ 286 ಪ್ರಕರಣ

vidhana-Soudha

Cabinet Decission: ಏಳು ತಾಲೂಕುಗಳಲ್ಲಿ 100 ಹಾಸಿಗೆಗಳ ಆಸ್ಪತ್ರೆ

CM-Siddaramaiah

CM Siddaramaiah: ಮುಡಾ ಹಗರಣದಲ್ಲಿ ನನ್ನ ತಪ್ಪಿಲ್ಲ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Ulaibettu ಪೆರ್ಮಂಕಿ ಉದ್ಯಮಿ ದರೋಡೆ ಪ್ರಕರಣ; 10 ಮಂದಿ ಆರೋಪಿಗಳ ಬಂಧನ

Ulaibettu ಪೆರ್ಮಂಕಿ ಉದ್ಯಮಿ ದರೋಡೆ ಪ್ರಕರಣ; 10 ಮಂದಿ ಆರೋಪಿಗಳ ಬಂಧನ

Dengue ಕರಾವಳಿಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ : ಮುಂಜಾಗರೂಕತೆಯೇ ಮದ್ದು

Dengue ಕರಾವಳಿಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ : ಮುಂಜಾಗರೂಕತೆಯೇ ಮದ್ದು

Karnataka ಗ್ರಾಮಗಳಲ್ಲಿ 100 ಕಟ್ಟೆ ಪಂಚಾಯತ್‌ಗೆ ಅಸ್ತು

Karnataka ಗ್ರಾಮಗಳಲ್ಲಿ 100 ಕಟ್ಟೆ ಪಂಚಾಯತ್‌ಗೆ ಅಸ್ತು

1-agni

Agniveer; ಪರಿಹಾರವಲ್ಲ, ಪಿಂಚಣಿ,ಹುತಾತ್ಮ ಗೌರವ ಕೊಡಿ:ಯೋಧನ ತಂದೆ ಆಗ್ರಹ

1–qewewqe

Bihar ಸೇತುವೆ ಕುಸಿತಕ್ಕೆ ಹೂಳು ತೆಗೆದಿದ್ದೇ ಕಾರಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.