ಅಯೋಧ್ಯೆಗೂ ಉಡುಪಿಗೂ ಸುಂದರ ಬೆಸುಗೆ


Team Udayavani, Nov 18, 2017, 11:13 AM IST

18-16.jpg

ಶ್ರೀಕೃಷ್ಣ ಮಠದಲ್ಲಿ ಕಾರ್ಯಭಾರ ನಡೆಯುವು ದೆಲ್ಲಾ ಮುಖ್ಯಪ್ರಾಣನಿಂದ ಎಂಬ ನಂಬಿಕೆ ಇದೆ. ಶ್ರೀ ಮಧ್ವಾಚಾರ್ಯರು ಸುಮಾರು 750 ವರ್ಷಗಳ ಹಿಂದೆ ಶ್ರೀಕೃಷ್ಣನ ವಿಗ್ರಹವನ್ನು ಮಾತ್ರ ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು. ಆದರೆ ಇಲ್ಲಿನ ಮುಖ್ಯಪ್ರಾಣನನ್ನು ಆಚಾರ್ಯ ಮಧ್ವರು ಪ್ರತಿಷ್ಠಾಪಿಸಲಿಲ್ಲ. ಮಧ್ವರು ವಾಯು ದೇವರ ಅವತಾರ ಎಂಬ ನಂಬಿಕೆ ಇರುವುದು ಮುಖ್ಯಪ್ರಾಣನನ್ನು ಪ್ರತಿ ಷ್ಠಾಪಿಸದೆ ಇರಲು ಕಾರಣವೆನ್ನಬಹುದು ಮತ್ತು ಇದಕ್ಕೆ ಪೂರಕವಾಗಿ ಒಮ್ಮೆ ಮಧ್ವರು ಪೂಜಿಸುವಾಗ ಹನುಮ ನಾಗಿ ರಾಮನಿಗೂ, ಭೀಮನಾಗಿ ಕೃಷ್ಣನಿಗೂ, ಮಧ್ವರಾಗಿ ವೇದ ವ್ಯಾಸರಿಗೂ ಪೂಜಿಸುವುದನ್ನು ತ್ರಿವಿಕ್ರಮ ಪಂಡಿತಾಚಾರ್ಯರು ಕಂಡು ಮೂರು ಅವ ತಾರಗಳ ಮಹಿಮೆ ತಿಳಿಸುವ ವಾಯುಸ್ತುತಿ ರಚಿಸಿದರು. ವಾಯುಸ್ತುತಿಗೆ ಇಂದಿಗೂ ಭಾರೀ ಮಹತ್ವವಿದೆ. ಮಧ್ವರ ಬಳಿಕ ಸುಮಾರು ಎರಡು ಶತಮಾನಗಳ ಬಳಿಕ ಜನಿಸಿದ ಶ್ರೀ ವಾದಿರಾಜ ಸ್ವಾಮಿಗಳು ಮುಖ್ಯಪ್ರಾಣ ಮತ್ತು ಗರುಡನನ್ನು ಪ್ರತಿಷ್ಠಾಪಿಸಿದರು. 

ಶ್ರೀ ವಾದಿರಾಜರ ಕುರಿತು ವಿಶೇಷ ಸಂಶೋಧನೆ ನಡೆಸಿದ ಬಳ್ಳಾರಿ ವೀರಶೈವ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ| ಜಿ.ಕೆ. ನಿಪ್ಪಾಣಿ ಅವರು ಕೆಳಗಿನಂತೆ ಮಾಹಿತಿ ನೀಡುತ್ತಾರೆ: ಶ್ರೀಕೃಷ್ಣ ಮಠದಲ್ಲಿ 1522ರಲ್ಲಿ ಎರಡು ವರ್ಷಗಳ ಪರ್ಯಾಯವನ್ನು ಪಲಿಮಾರು ಮಠದಿಂದ ಆರಂಭಿಸಿದ ಬಳಿಕ 1532ರಲ್ಲಿ ವಾದಿರಾಜಸ್ವಾಮಿಗಳು ಸ್ವತಃ ಪರ್ಯಾಯ ಪೀಠವನ್ನು ಅಲಂಕರಿಸಿದರು. ಆಗ ಅವರಿಗೆ 52 ವರ್ಷ. ತಮ್ಮ ಪರ್ಯಾಯವಾದ ಬಳಿಕ 1538-39ರ ವೇಳೆ ವಿಜಯನಗರ ಸಾಮ್ರಾಜ್ಯದ ಕಡೆ ಸಂಚಾರಾರ್ಥ ತೆರಳುತ್ತಾರೆ. ಆಗ ರಾಜ ನಾಗಿದ್ದ ಅಚ್ಯುತದೇವರಾಯನ ಸಮಸ್ಯೆಗಳನ್ನು ಬಗೆಹರಿಸಿ 1541-42ರಲ್ಲಿ ಉತ್ತರ ಭಾರತ ಯಾತ್ರೆ ಕೈಗೊಂಡರು. ಆಗ ದಿಲ್ಲಿ, ಬದರಿಗೆ ಹೋದರು. ಅದೇ ವೇಳೆ ಅಯೋಧ್ಯೆಗೆ ತೆರಳಿ ಅಲ್ಲಿ ಉತVನನ ಮಾಡಿಸಿ ಹನುಮ- ಗರುಡನ ವಿಗ್ರಹವನ್ನು ತಂದು ಸುಮಾರು 1545ರ ವೇಳೆ ಪ್ರತಿಷ್ಠೆ ಮಾಡಿದರು. 1548-49ರಲ್ಲಿ ಎರಡನೆಯ ಪರ್ಯಾಯವನ್ನು ನಡೆಸಿದರು. 

ಇದು ವಾದಿರಾಜಗುರುಚರಿತಾಮೃತದಲ್ಲಿ ಹೀಗೆ ಉಲ್ಲೇಖವಿದೆ: ಪುನಃ ಸಂಚರಣಾಸಕೊ¤à ಗತೋ ಯೋಧ್ಯಾಂ ಪುರೀಂ ಮುನಿಃ| ತತ್ರತ್ಯ ಹನುಮತ್ತಾಕ್ಷì ಪ್ರತಿಮೇ ರೂಪ್ಯಪೀಠಕಮ್‌|…

ಪರಂಪರಾ ರಹಸ್ಯ
ಇಷ್ಟು ವಿಷಯ ಮಾತ್ರ ದಾಖಲೆಯಿಂದ ತಿಳಿಯಬಹುದಾಗಿದೆ. ಇಲ್ಲಿ ಕೇವಲ ಮೂರು ಶ್ಲೋಕಗಳಿವೆ. ಇನ್ನೂ ಹೆಚ್ಚಿನ ವಿವರಗಳು ಪರಂಪರೆಯ ರಹಸ್ಯದಿಂದ ತಿಳಿದುಬರುತ್ತವೆ. ಇದನ್ನು ಸೋದೆ ಮಠದ ಮಠಾಧಿಪತಿಗಳಾಗಿದ್ದ ಶ್ರೀ ವಿಶೊÌàತ್ತಮತೀರ್ಥರು ಹಿಂದಿನ ಸಂಪ್ರದಾಯದಂತೆ ಹೀಗೆ ಹೇಳುತ್ತಿದ್ದರು: ತ್ರೇತಾಯುಗದಲ್ಲಿ ದಶರಥನ ಅರಮನೆಯಲ್ಲಿ ಶ್ರೀ ರಾಮಚಂದ್ರನಿಗೆ ಪಟ್ಟಾಭಿಷೇಕವಾಗುವಾಗ ಸಿಂಹಾಸನದ ಮೆಟ್ಟಿಲಿನ ಬಲಭಾಗದಲ್ಲಿ ಹನುಮಂತ ಮತ್ತು ಎಡಭಾಗದಲ್ಲಿ ಗರುಡನ ಪ್ರತಿಮೆಗಳಿದ್ದವು. ಇದನ್ನು ದಿವ್ಯದೃಷ್ಟಿಯಿಂದ ತಿಳಿದ ವಾದಿರಾಜರು ಉತನನ ನಡೆಸಿ ಉಡುಪಿಗೆ ತಂದು ಪ್ರತಿಷ್ಠಾಪಿಸಿದರು.

ನಿತ್ಯ ಸಭೆ, ತಯಾರಿ, ಚರ್ಚೆ….
ಪೇಜಾವರ ಮಠದ ವಿಜಯಧ್ವಜ ಅತಿಥಿಗೃಹದಲ್ಲಿರುವ ಧರ್ಮಸಂಸದ್‌ ಕಾರ್ಯಾಲಯದಲ್ಲಿ ನಿತ್ಯವೂ ಸಭೆ, ಚರ್ಚೆ, ತಯಾರಿ ನಡೆಯುತ್ತಿದೆ. ನ. 26 ಸಂಜೆ ಎಂಜಿಎಂ ಕಾಲೇಜಿನ ಮೈದಾನದಲ್ಲಿ ನಡೆಯುವ ಹಿಂದೂ ಸಮಾಜೋತ್ಸವಕ್ಕೆ ಸಂಬಂಧಿಸಿ ಪಾರ್ಕಿಂಗ್‌, ನೀರು, ಅಡುಗೆ ತಯಾರಿ ಕುರಿತಂತೆ ಶುಕ್ರವಾರ ಸಭೆ ನಡೆಯಿತು. ಶನಿವಾರ ಜನಪ್ರತಿನಿಧಿಗಳು, ಆಟೋರಿಕ್ಷಾ- ಟ್ಯಾಕ್ಸಿಯವರ ಸಭೆ ನಡೆಯಲಿದೆ.

ಅಂದು ಕುಂದಾಪುರ ಕಡೆಯಿಂದ ಬರುವ ವಾಹನಗಳು ಕರಾವಳಿ ಬೈಪಾಸ್‌, ಬನ್ನಂಜೆ ಮಾರ್ಗವಾಗಿ ಬ್ರಹ್ಮಗಿರಿ ಮೂಲಕ ಜೋಡುಕಟ್ಟೆಯಲ್ಲಿ ಜನರನ್ನು ಇಳಿಸಿ ಅಲ್ಲಿ ಪಾರ್ಕ್‌ ಮಾಡಬೇಕು. ಕಾರ್ಕಳದ ಕಡೆಯಿಂದ ಬರುವವರು ಜೋಡುಕಟ್ಟೆ ಬಳಿ ಜನರನ್ನು ಇಳಿಸಿ ವಾಪಸು ಬೀಡಿನಗುಡ್ಡೆಯಲ್ಲಿ ವಾಹನಗಳನ್ನು ಪಾರ್ಕ್‌ ಮಾಡಬೇಕು. ಮಂಗಳೂರಿನಿಂದ ಬರುವವರು ಕಿನ್ನಿಮೂಲ್ಕಿಯಲ್ಲಿ ಬಂದು ಜೋಡುಕಟ್ಟೆಯಲ್ಲಿ ಜನರನ್ನು ಇಳಿಸಿ ಪಾರ್ಕ್‌ ಮಾಡಬೇಕು. ಜೋಡುಕಟ್ಟೆಯಿಂದ ಆಕರ್ಷಕ ಶೋಭಾಯಾತ್ರೆ ಹಿಂದೂ ಸಮಾಜೋತ್ಸವ ನಡೆಯುವ ಎಂಜಿಎಂ ಮೈದಾನದವರೆಗೆ ನಡೆಯಲಿದೆ.

ಏಕೆ ತಂದು ಪ್ರತಿಷ್ಠಾಪಿಸಿದರು ? 
ಭಗವಂತನಿಗೆ ವಿಶೇಷ ಸೇವೆ ಮಾಡಿದ ದೇವತಾ ರೂಪಗಳಿವು. ರಾಮನನ್ನು ಹನುಮಂತ ಹೊತ್ತುಕೊಂಡ ಕತೆ ರಾಮಾಯಣದಲ್ಲಿ ಕೇಳಿದ್ದೇವೆ. ಕೃಷ್ಣನಾಗಿದ್ದಾಗ ಗರುಡಾರೂಢನಾಗಿದ್ದ ಕತೆ ಕೇಳಿದ್ದೇವೆ. ಹೀಗೆ ಪ್ರಧಾನ ಕಿಂಕರ ದೇವತೆಗಳಾಗಿ ವಾದಿರಾಜರು ಪ್ರತಿಷ್ಠಾಪಿಸಿದರು.ವಾದಿರಾಜರು ಯಾವುದೋ ಒಂದು ಹನುಮ, ಗರುಡ ಪ್ರತಿಮೆ ತಂದದ್ದಲ್ಲ. ಅಯೋಧ್ಯೆಯಲ್ಲಿದ್ದ ಪ್ರತಿಮೆಯನ್ನು ತಂದು ಉತ್ತರ, ದಕ್ಷಿಣದ ಸಂಬಂಧದ ಸೇತು ನಿರ್ಮಿಸಿದರು. ಈ ಸೇತು ನಿರ್ಮಿಸಿದ್ದು ಬಹುತೇಕರಿಗೆ ಗೊತ್ತಿಲ್ಲದಿದ್ದರೂ 1985ರಲ್ಲಿ ಧರ್ಮಸಂಸದ್‌ ಮೂಲಕ ಅದೇ ಸೇತು ಆಧಾರದಲ್ಲಿ ನಿರ್ಣಯ ತಳೆಯಲಾಯಿತು, 
ಈಗ ಮತ್ತೆ ಅಂತಹ ನಿರ್ಣಯ ತಳೆಯುವ ಸನಿಹದಲ್ಲಿದ್ದೇವೆ.

ಶ್ರೀ ವಾದಿರಾಜ ಸ್ವಾಮಿಗಳು ತಮ್ಮ ಮೊದಲ (1532 -33) ಮತ್ತು ಎರಡನೆಯ ಪರ್ಯಾಯದ (1548-49) ನಡುವಿನ ಅವಧಿಯಲ್ಲಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಮುಖ್ಯಪ್ರಾಣ ಮತ್ತು ಗರುಡನ ವಿಗ್ರಹಗಳನ್ನು ಅಯೋಧ್ಯೆಯಿಂದ ತಂದು ಪ್ರತಿಷ್ಠಾಪಿಸಿದರು. 1947ರಿಂದ ಅಯೋಧ್ಯಾ ರಾಮ ಮಂದಿರದ ಸ್ಥಳದಲ್ಲಿ ಪೂಜೆ ನಡೆಯುತ್ತಿತ್ತಾದರೂ ಸಾರ್ವಜನಿಕ ದರ್ಶನವಿರಲಿಲ್ಲ. 1985ರಲ್ಲಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಪೇಜಾವರ ಶ್ರೀಗಳು ತಮ್ಮ ಮೂರನೆಯ ಪರ್ಯಾಯ ಅವಧಿಯಲ್ಲಿ ಎರಡನೆಯ ಧರ್ಮಸಂಸದ್‌ ಅಧಿವೇಶನ ಆಯೋಜಿಸಿದರು. ಆಗಲೇ ರಾಮಮಂದಿರದ ದರ್ಶನ ಸಾರ್ವಜನಿಕರಿಗೆ ದೊರಕಬೇಕು ಎಂಬ ನಿರ್ಣಯ ತಳೆಯಲಾಯಿತು. ಈಗ ಮತ್ತೆ ಧರ್ಮಸಂಸದ್‌ ಅಧಿವೇಶನ ಪೇಜಾವರ ಶ್ರೀಗಳ ಐದನೆಯ ಪರ್ಯಾಯದಲ್ಲಿ ನಡೆಯುತ್ತಿದೆ. 

ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.