ಬೀಜಾಡಿ-ಗೋಪಾಡಿ ರಾ.ಹೆ.:ಬೀಡಾಡಿ ದನಗಳ ಕಾರುಬಾರು
Team Udayavani, Jul 8, 2019, 5:56 AM IST
ಕೋಟೇಶ್ವರ: ಬೀಜಾಡಿ- ಗೋಪಾಡಿಯಲ್ಲಿ ಹಾದುಹೋಗುವ ರಾ.ಹೆದ್ದಾರಿಯಲ್ಲಿ ಬೀಡಾಡಿ ದನಗಳು ಹೆಚ್ಚಿದ್ದು ವಾಹನ ಸವಾರರಿಗೆ ಅಪಾಯ ತಂದೊಡ್ಡುತ್ತಿವೆ. ರಸ್ತೆಯಲ್ಲೇ ನಿಂತಿರುವ, ಏಕಾಏಕಿ ಅಡ್ಡದಾಟುವ ಗೋವುಗಳಿಗೆ ವಾಹನ ಸವಾರರು ಢಿಕ್ಕಿ ಹೊಡೆಯುವ ಪ್ರಕರಣಗಳು ಹೆಚ್ಚುತ್ತಿದ್ದು, ಇದು ಸವಾರರಲ್ಲಿ ಆಂತಕವನ್ನುಂಟು ಮಾಡಿದೆ.
ರಾ.ಹೆದ್ದಾರಿ ಸನಿಹ ಹಸಿಹುಲ್ಲು
ಸಾಮಾನ್ಯವಾಗಿ ಮಳೆಗಾಲದ ಮೊದಲು ರಾ.ಹೆದ್ದಾರಿಯ ಇಕ್ಕೆಲಗಳಲ್ಲಿ ಬೆಳೆದಿರುವ ಹಸಿ ಹುಲ್ಲು ಸಹಿತ ಪೊದೆಗಳನ್ನು ಸ್ವತ್ಛಗೊಳಿಸುವ ಕ್ರಮವಿತ್ತು. ಆದರೆ ಈ ವರ್ಷ ಈ ಕಾರ್ಯ ನಡೆಸದೇ ಇರುವುದರಿಂದ ಗೋವುಗಳು ರಸ್ತೆಗೆ ಬಂದು ಮೇಯುತ್ತಿವೆ. ಜತೆಗೆ ಡಿವೈಡರ್‌ಗೂ ಲಗ್ಗೆ ಹಾಕಿ ಹುಲ್ಲು ತಿನ್ನುತ್ತಿವೆ.
ಗ್ರಾ.ಪಂ. ಕ್ರಮ ಕೈಗೊಳ್ಳಬೇಕು
ಕಾನೂನು ಪ್ರಕಾರ ಜಾನುವಾರುಗಳನ್ನು ಮೇವಿಗಾಗಿ ರಸ್ತೆಗೆ ಬಿಡುವಂತಿಲ್ಲ. ಅಂತಹ ಸಂದರ್ಭದಲ್ಲಿ ಗ್ರಾ.ಪಂ. ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಿ ಅದಕ್ಕೆ ಪ್ರತಿಕ್ರಿಯಿಸದಿದ್ದಲ್ಲಿ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಸಾರ್ವಜನಿಕ ಸಂಚಾರಕ್ಕೆ ತೊಂದರೆ ತಪ್ಪಿದ್ದಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ನೋಟಿಸ್ ನೀಡಲಾಗಿದೆ
ಜಾನುವಾರುಗಳು ರಾಷ್ಟ್ರೀಯ ಹೆದ್ದಾರಿ ಸಹಿತ ಮುಖ್ಯ ರಸ್ತೆಯಲ್ಲಿ ಹಿಂಡು ಹಿಂಡಾಗಿ ಸಾಗುತ್ತಿವೆ. ಇದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತಿವೆ.ಅಪಘಾತಗಳೂ ಸಂಭವಿಸಿ ಜಾನುವಾರು ಹಾಗೂ ಸಂಚಾರಿಗಳಿಗೂ ತೀವ್ರ ಪ್ರಮಾಣದಲ್ಲಿ ಗಾಯಗಳಾಗುತ್ತಿದೆ. ಈ ಬಗ್ಗೆ ಸಾಕುಪ್ರಾಣಿಗಳ ಮಾಲಕರಿಗೆ ನೋಟಿಸ್ ನೀಡಿ ಮುಖ್ಯ ರಸ್ತೆಗೆ ಜಾನುವಾರುಗಳನ್ನು ಬಿಡದಿರುವಂತೆ ಎಚ್ಚರಿಕೆ ನೀಡಲಾಗಿದೆ.
-ಗಣೇಶ,
ಪಿಡಿಒ, ಗೋಪಾಡಿ ಗ್ರಾ.ಪಂ.
ಎಚ್ಚರ ವಹಿಸಿ
ಗಂಡು ಕರುಗಳನ್ನು ಮೇವಿಗಾಗಿ ಬಿಡುವ ಪ್ರವೃತ್ತಿ ಕಂಡು ಬರುತ್ತಿದೆ. ಹಾಗಾಗಿ ವೇಗದಿಂದ ಸಾಗುತ್ತಿರುವ ವಾಹನಗಳ ಎದುರಿಗೆ ಅವುಗಳು ಬಂದು ಅಪಘಾತವಾಗುತ್ತಿದೆ. ರಸ್ತೆಗೆ ದನಗಳನ್ನು ಬಿಡುವವರ ವಿರುದ್ಧ ಕ್ರಮ ಕೈಗೊಳ್ಳುವುದು ಸೂಕ್ತ. ಇಲಾಖೆಗಳು ಈ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ.
-ವಾಸುದೇವ ಪ್ರಭು,
ಗ್ರಾಮಸ್ಥರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ
Bengaluru: ಕದ್ದ ಮೊಬೈಲ್ ಕೊರಿಯರ್ ಮೂಲಕ ಕೇರಳಕ್ಕೆ ರವಾನೆ!
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.