ಬೇಳಂಜೆ ಸೇತುವೆ ದುರಸ್ತಿ ಕಾರ್ಯ ಆರಂಭ
Team Udayavani, May 19, 2019, 6:10 AM IST
ಹೆಬ್ರಿ: ಚಾರ ಗ್ರಾ.ಪಂ. ವ್ಯಾಪ್ತಿಯ ಹೆಬ್ರಿ-ಕುಂದಾಪುರ ಮಾರ್ಗದ ನವೋದಯ ಶಾಲೆ ಬಳಿ ಇರುವ ಹೆಬ್ರಿ ಬೇಳಂಜೆ ಸೇತುವೆ ಅಪಾಯದ ಅಂಚಿನಲ್ಲಿದ್ದು ಇದೀಗ ದುರಸ್ತಿ ಕಾರ್ಯ ಆರಂಭಗೊಂಡಿದೆ.
1958ರಲ್ಲಿ ನಿರ್ಮಾಣವಾದ ಈ ಸೇತುವೆಯ ಪ್ರಮುಖ ಪಿಲ್ಲರ್‌ಗಳ ಬುಡದಲ್ಲಿಯೇ ಕಲ್ಲುಗಳು ಕುಸಿದಿದ್ದು ಈ ಬಗ್ಗೆ ಉದಯವಾಣಿ ಎ. 29ರಂದು ಅಪಾಯದ ಅಂಚಿನಲ್ಲಿ ಹೆಬ್ರಿ-ಬೇಳಂಜೆ ಸೇತುವೆ ಎಂಬ ಲೇಖನ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಲಾಯಡ್ ನೇತೃತ್ವದಲ್ಲಿ ತಾತ್ಕಾಲಿಕ ದುರಸ್ತಿ ಕಾರ್ಯ ಆರಂಭಗೊಂಡಿದೆೆ.
ಪ್ರಮುಖ ಪಿಲ್ಲರ್‌ನ ಬುಡದಲ್ಲಿ ಬೃಹತ್ ಕಲ್ಲುಗಳು ಉರುಳಿದ್ದು ಈ ಭಾಗಕ್ಕೆ ಬುಡದಿಂದ ಕಾಂಕ್ರಿಟ್ ಕಾಮಗಾರಿ ನಡೆಯುತ್ತಿದೆ. ಈ ಬಾರಿ ಸೀತಾನದಿ ಪೂರ್ಣ ಬತ್ತಿಹೋಗಿದ್ದು, ನೀರಿಲ್ಲದ ಕಾರಣ ದುರಸ್ತಿಗೆ ಅನುಕೂಲವಾಗಿದೆ. ಪ್ರಮುಖ ಪಿಲ್ಲರ್ ಜತೆ ಇನ್ನೊಂದು ಪಿಲ್ಲರ್ ಕೂಡ ಹಾನಿಗೊಂಡಿದ್ದು ಅದನ್ನೂ ಈಗಲೇ ದುರಸ್ತಿಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.