ಬೇಳಂಜೆ: ಉಪಯೋಗಕ್ಕೆ ಬಾರದ ರಿಕ್ಷಾ ತಂಗುದಾಣ
Team Udayavani, May 17, 2019, 6:20 AM IST
ಹೆಬ್ರಿ: ಕುಚ್ಚಾರು ಗ್ರಾ.ಪಂ.ವ್ಯಾಪ್ತಿಯ ಬೇಳಂಜೆಯಲ್ಲಿ ತಾ.ಪಂ. ಅನುದಾನದಲ್ಲಿ 3 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ರಿಕ್ಷಾ ತಂಗುದಾಣ ಉಪಯೋಗವಿಲ್ಲದಂತಾಗಿದೆ.
ಬೇಳಂಜೆ ಬಸ್ಸು ನಿಲ್ದಾಣದ ಸಮೀಪ ರಿಕ್ಷಾ ಸ್ಟಾಂಡ್ ಬೇಕೆನ್ನುವುದು ಇಲ್ಲಿನ ರಿಕ್ಷಾ ಚಾಲಕರ ಬೇಡಿಕೆಯಾಗಿತ್ತು. ಆದರೆ ನಿರ್ಮಾಣವಾದ ಸ್ಟಾಂಡ್ ಬಸ್ಸು ನಿಲ್ದಾಣಕ್ಕಿಂತ ಸ್ವಲ್ಪದೂರದಲ್ಲಿದೆ. ಈ ಕಾರಣ ರಿಕ್ಷಾದವರು ಹೋಗುತ್ತಿಲ್ಲ ಎನ್ನಲಾಗಿದೆ.
ಆರೋಪ
ಕಳೆದ 2 ವರ್ಷದ ಹಿಂದೆ ರಿಕ್ಷಾ ಸ್ಟಾÂಂಡ್‌ನ ತಗಡಿನ ಮಾಡು ನಿರ್ಮಾಣ ಮಾಡಿದ್ದು ಕಳೆದ 3 ತಿಂಗಳ ಹಿಂದೆ ಇಂಟರ್‌ಲಾಕ್ ಅಳವಡಿಸಲಾಗಿದೆ.ಆದರೆ ಇನ್ನೂ ಕೂಡ ಇದರ ಉಪಯೋಗ ಮಾತ್ರ ಆಗಿಯೇ ಇಲ್ಲ. ಈ ಬಗ್ಗೆ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಪ್ರಶ್ನಿಸಿದ್ದು ರಿಕ್ಷಾ ಚಾಲಕರ ಸಭೆ ಕರೆದು ಸಮಸ್ಯೆ ಬಗೆಹರಿಸುವ ಬಗ್ಗೆ ಭರವಸೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇತ್ಯರ್ಥಪಡಿಸುತ್ತೇವೆ
ಈ ಬಗ್ಗೆ ಈಗಾಗಲೇ ಪಂಚಾಯತ್‌ನಲ್ಲಿ ಚರ್ಚೆ ನಡೆಸಿದ್ದು ಶೀಘ್ರ ರಿಕ್ಷಾ ಚಾಲಕರ ಸಭೆ ಕರೆದು ನಿರ್ಮಾಣವಾದ ರಿಕ್ಷಾ ಸ್ಟಾಡ್‌ನಲ್ಲಿ ರಿಕ್ಷಾ ನಿಲ್ಲಿಸುವಂತೆ ಸೂಚಿಸಲಾಗುವುದು.
-ಆನಂದ ಕುಮಾರ್ ಬಿ.ಕೆ., ಪಿ.ಡಿ.ಒ. ಕುಚ್ಚಾರು ಗ್ರಾ.ಪಂ.
ನಮಗೆ ಅನುಕೂಲವಿಲ್ಲ
ಈಗ ನಿರ್ಮಾಣವಾದ ರಿಕ್ಷಾ ಸ್ಟಾ¤ಂಡ್ ಬಸ್ಸು ತಂಗುದಾಣದಿಂದ ದೂರವಿದ್ದು ಅಲ್ಲಿ ರಿಕ್ಷಾ ನಿಲ್ಲಿಸಿದರೆ ಜನ ಬರುವುದಿಲ್ಲ.ಈ ಬಗ್ಗೆ ಮುಂಚೆಯೇ ಪಂಚಾಯತ್ ಗಮನಕ್ಕೆ ತಂದಿದ್ದು ಬಸ್ಸುತಂಗುದಾಣ ಸಮೀಪ ಜಾಗ ಸಮತಟ್ಟು ಮಾಡಿದ್ದಾರೆ.ಆದರೆ ಬಳಿಕ ಬೇರೆ ಜಾಗದಲ್ಲಿ ನಿಲ್ದಾಣ ಮಾಡಿದ್ದಾರೆ. ಇದರಿಂದ ಅನುಕೂಲವಿಲ್ಲ.
-ಬಸವರಾಜ್, ರಿಕ್ಷಾ ಚಾಲಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.