Fraud: ಬೆಳಪು; ಹಣ ಪಡೆದು ಕಾಯಿಲ್ ನೀಡದೆ ವಂಚನೆ; ದೂರು ದಾಖಲು
Team Udayavani, May 3, 2024, 6:58 AM IST
ಶಿರ್ವ: ಬೆಳಪುವಿನಲ್ಲಿರುವ ರೂಫಿಂಗ್ ಶೀಟ್ ತಯಾರು ಮಾಡುವ ಘಟಕಕ್ಕೆ ಕಚ್ಚಾ ಸಾಮಾಗ್ರಿ ಕಾಯಿಲ್ ಪೂರೈಸುವುದಾಗಿ ನಂಬಿಸಿ ಹಣ ಪಡೆದು ಕಾಯಿಲ್ ನೀಡದೆ ವಂಚಿಸಿದ ಘಟನೆಯ ಬಗ್ಗೆ ಶಿರ್ವ ಠಾಣೆಯಲ್ಲಿ ದೂರು ದಾಖಲಾಗಿದೆ.
ದುರ್ಗಾ(55) ವಂಚನೆಗೊಳಗಾದವರು. ಅವರು ಕಾಪು ತಾಲೂಕಿನ ಬೆಳಪು ಇಂಡಸ್ಟ್ರಿಯಲ್ ಏರಿಯಾದಲ್ಲಿ ರೂಫಿಂಗ್ ಶೀಟ್ ತಯಾರು ಮಾಡುವ ಘಟಕವನ್ನು ಜ. 14 ರಂದು ಪ್ರಾರಂಭಿಸಿದ್ದರು. ಘಟಕದ ಕಚ್ಚಾ ಸಾಮಾಗ್ರಿಗಾಗಿ ಗೂಗಲ್‌ನಲ್ಲಿ ಸರ್ಚ್ ಮಾಡುತ್ತಿದ್ದ ವೇಳೆ ಅವರ ಮೊಬೈಲ್‌ಗೆ ಫ್ರಾನ್ಸಿಸ್ ಡಿಸೋಜಾ ಎಂಬ ಹೆಸರಿನ ವ್ಯಕ್ತಿ ಕರೆಮಾಡಿ ನಮ್ಮ ಬಳಿ ಒಳ್ಳೆಯ ಕಾಯಿಲ್ ಇದ್ದು ನೀವು ಹಣ ಕಳುಹಿಸಿದರೆ ಕಾಯಿಲ್ ಸರಬರಾಜು ಮಾಡುವುದಾಗಿ ನಂಬಿಸಿ ಪದೇಪದೇ ಕರೆ ಮಾಡಿದ್ದಾನೆ. ಆತ ಮುಂಬೈಗೆ ಬರುವಂತೆ ತಿಳಿಸಿದಂತೆ ದುರ್ಗಾ ಅವರು ಮಾ. 28ರಂದು ಮುಂಬೈಗೆ ತೆರಳಿದ್ದು, ಮಾ. 30 ರಂದು ಮುಂಬೈಯ ತಲೋಜ ಇಂಡಸ್ಟ್ರಿಯಲ್ ಏರಿಯಾಕ್ಕೆ ಬರುವಂತೆ ಲೊಕೇಶನ್ ಕಳುಹಿಸಿದ್ದಾನೆ. ದುರ್ಗಾ ಅವರು ಅಲ್ಲಿಗೆ ಹೋದಾಗ ಒಬ್ಬ ವ್ಯಕ್ತಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ನಿಂತಿದ್ದು, ತಾನೇ ಫ್ರಾನ್ಸಿಸ್ ಡಿಸೋಜಾ ಎಂದು ಪರಿಚಯಿಸಿಕೊಂಡು ಅಲ್ಲಿಯೇ ಇದ್ದ ಗೋಡೌನ್ ಒಳಗಡೆ ಕರೆದುಕೊಂಡು ಹೋಗಿ ಅಲ್ಲಿದ್ದ ಕಾಯಿಲ್‌ನ್ನು ತೋರಿಸಿ ಗೋಡೌನ್ ಮಾಲಿಕ ತಾನೇ ಎಂದು ತಿಳಿಸಿದ್ದಾನೆ.
ಆತನ ಮಾತನ್ನು ನಂಬಿ ಕಾಯಿಲ್ ಬೇಕು ಎಂದು ಒಪ್ಪಿ ಊರಿಗೆ ಹಿಂತಿರುಗಿ ಬಂದು ಮೂಲ್ಕಿಯ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ 20 ಲ. ರೂ.ಸಾಲ ಮಾಡಿ ಸಾಲ ಮಂಜೂರಾದ ಬಳಿಕ ಎ. 18 ರಂದು ಫ್ರಾನ್ಸಿಸ್ ಡಿಸೋಜಾನಿಗೆ ಕರೆಮಾಡಿ ಹಣ ಯಾರ ಹೆಸರಿಗೆ ಕಳುಹಿಸಬೇಕು ಎಂದು ವಿಚಾರಿಸಿದ್ದಾರೆ. ಆತ ಕೊಟೇಶನ್ ಕಳುಹಿಸಿ ಮೊಬೈಲ್ ಮೂಲಕ ತಿಳಿಸಿದಂತೆ ಕೊಟೇಶನ್‌ನಲ್ಲಿದ್ದ ಖಾತೆ ನಂಬ್ರಕ್ಕೆ ಬ್ಯಾಂಕ್ ಆಫ್ ಬರೋಡಾ ಮೂಲ್ಕಿ ಶಾಖೆಯಿಂದ 8 ಲ. ರೂ. ಹಣವನ್ನು ಆರ್‌ಟಿಜಿಎಸ್ ಮೂಲಕ ಕಳುಹಿಸಿದ್ದಾರೆ. ಹಣ ಪಡೆದ ಬಳಿಕ ಆತನ ಮೊಬೈಲ್ ಸ್ವಿಚ್‌ಆಫ್ ಬರುತ್ತಿದ್ದು, ಮೊಬೈಲ್‌ನಲ್ಲಿ ಮೆಸೇಜ್ ಮೂಲಕ ಕಾಯಿಲ್ ಕೂಡಲೇ ಕಳುಹಿಸಿ ಕೊಡುತ್ತೇನೆಂದು ಉತ್ತರಿಸುತ್ತಿದ್ದಾನೆ. ಆದರೆ ಫ್ರಾನ್ಸಿಸ್ ಡಿಸೋಜಾ ಕಾಯಿಲ್ ನೀಡುವುದಾಗಿ ನಂಬಿಸಿ 8 ಲ. ರೂ. ಪಡೆದು ಕಾಯಿಲ್ ನೀಡದೆ,ಪಡೆದ ಹಣ ವಾಪಾಸು ನೀಡದೆ ನಂಬಿಕೆ ದ್ರೋಹ ಎಸಗಿದ್ದಾನೆಂದು ದುರ್ಗಾ ಅವರು ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ… ಇಬ್ಬರು ಗಂಭೀರ
Karkala: ರಸ್ತೆ ಬದಿ ತೋಡಿಗೆ ಜಾರಿದ ವಿಕ್ರಂ ಗೌಡ ಮೃತದೇಹ ಸಾಗಿಸುತ್ತಿದ್ದ ಆ್ಯಂಬ್ಯುಲೆನ್ಸ್
Udupi: ನಮ್ಮ ಶೌಚಾಲಯ ನಮ್ಮ ಗೌರವ ತಿಂಗಳ ಆಂದೋಲನಕ್ಕೆ ಚಾಲನೆ
Udupi: 10 ತಿಂಗಳಲ್ಲಿ 228 ಕಳವು ಕೇಸ್!
History: ನಕ್ಸಲ್ ಚಳವಳಿಯ ರಕ್ತಸಿಕ್ತ ಇತಿಹಾಸ; ಸಾವಿನೊಂದಿಗೆ ಪೊಲೀಸ್-ನಕ್ಸಲ್ ಮುಖಾಮುಖಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.