ಬೆಳಪು ಗ್ರಾ.ಪಂ. : ಹತ್ವಾರಿ ಕೆರೆ ಅಭಿವೃದ್ಧಿಗೆ ಚಾಲನೆ
Team Udayavani, May 22, 2020, 5:06 AM IST
ಕಾಪು: ಕೋವಿಡ್-19ರ ಹರಡುವಿಕೆಯ ಭೀತಿಯಲ್ಲಿ ಇರುವ ಲಾಕ್‌ಡೌನ್ ನಿಂದಾಗಿ ಉದ್ಯೋಗವಿಲ್ಲದೆ ತೊಂದರೆಗೊಳಗಾಗಿರುವ ಗ್ರಾಮದ ಕೂಲಿ ಕಾರ್ಮಿಕರಿಗೆ ಕೂಲಿ ನೀಡುವ ನಿಟ್ಟಿನಲ್ಲಿ ಬೆಳಪು ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ಹತ್ವಾರಿ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಗ್ರಾ.ಪಂ. ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಚಾಲನೆ ನೀಡಿದರು.
ಬೆಳಪು ಗ್ರಾಮದ ಎಲ್ಲ ಮನೆಗೂ ಆಹಾರದ ಕಿಟ್‌ಗಳನ್ನು ಒದಗಿಸಲಾಗಿದೆ. ತೀರಾ ಬಡವರಿಗೆ ಔಷಧಿಗಳನ್ನು, ಮಾಸ್ಕ್ ಗಳನ್ನು, ಸ್ಯಾನಿಟೆ„ಸರ್ ಗಳನ್ನು ಒದಗಿಸಲಾಗಿದೆ. ಶುದ್ಧೀಕರಣ ಘಟಕದ ಮೂಲಕವಾಗಿ ನೀರು ನೀಡಲಾಗಿದೆ. ಪ. ಪಂಗಡ ಮತ್ತು ವಿಕಲಚೇತನರಿಗೆ ಆರ್ಥಿಕ ಸಹಕಾರ ನೀಡಲಾಗಿದ್ದು, ಉಚಿತವಾಗಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ. 4ನೇ ಹಂತದ ಲಾಕ್‌ಡೌನ್ ಸಂದರ್ಭದಲ್ಲಿ ತೀರಾ ಆರ್ಥಿಕ ಸಂಕಷ್ಟಕ್ಕೊಳಗಾದ ಗ್ರಾಮಸ್ಥರಿಗೆ ಉದ್ಯೋಗ ಚೀಟಿ ಮೂಲಕ ಉದ್ಯೋಗ ನೀಡಲಾಗುತ್ತಿದ್ದು ದಿನವೊಂದಕ್ಕೆ 8 ಗಂಟೆ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಬೆಳಪು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಚ್.ಆರ್. ರಮೇಶ್, ಉಡುಪಿ ಜಿ.ಪಂ. ಎಂಜಿನಿಯರ್ ಯಂಕಪ್ಪ ನಾಯ್ಕ, ಬೆಳಪು ಗ್ರಾ. ಪಂ. ಮಾಜಿ ಅಧ್ಯಕ್ಷಕ್ಷೆ ವಿಮಲ ಅಂಚನ್, ಪ್ರಮುಖರಾದ ಸುನಂದ, ಜಯಂತಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.