ಬೆಳಪು: ಅದಾನಿ-ಯುಪಿಸಿಎಲ್ ನಿರ್ಮಿತ ಕಾಂಕ್ರೀಟ್ ರಸ್ತೆಗಳ ಉದ್ಘಾಟನೆ
Team Udayavani, Aug 7, 2017, 7:50 AM IST
ಕಾಪು: ಅದಾನಿ – ಯುಪಿಸಿಎಲ್ ಕಂಪೆನಿಯ ಸಾಮಾಜಿಕ ಹೊಣೆಗಾರಿಕೆ ಚಟುವಟಿಕೆ (ಸಿಎಸ್‌ಆರ್) ಯೋಜನೆಯಡಿ ಸುಮಾರು 25.85 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನತಾ ಕಾಲನಿ ರಸ್ತೆ ಮತ್ತು ಮಿಲಿಟರಿ ಕಾಲನಿ ರಸ್ತೆಗಳ ಕಾಂಕ್ರಿಟೀಕರಣ ಕಾಮ ಗಾರಿಯನ್ನು ಶುಕ್ರವಾರ ಕಂಪೆನಿಯ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಮತ್ತು ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಅವರು ಜಂಟಿಯಾಗಿ ಉದ್ಘಾಟಿಸಿದರು.
ಬಳಿಕ ಅದಾನಿ-ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡಿ, ಕಂಪೆನಿಯ ಸಿಎಸ್‌ಆರ್ ಯೋಜನೆಯಡಿ ಬೆಳಪು ಗ್ರಾ.ಪಂ.ಗೆ 3 ವರ್ಷದ ಅವಧಿಗೆ 3 ಕೋ.ರೂ. ನೆರವು ಘೋಷಿಸಿದ್ದು, ಪಂಚಾಯತ್ ನೀಡಿರುವ ಕ್ರಿಯಾ ಯೋಜನೆ ಮೇರೆಗೆ ಪ್ರತೀ ವರ್ಷ 1 ಕೋಟಿ ರೂ. ಮೊತ್ತದಷ್ಟು ಅಭಿವೃದ್ಧಿ ಕಾಮಗಾರಿಯನ್ನು ನಿರ್ವಹಿಸಲಿದೆ. 2017-18ನೇ ಸಾಲಿನಲ್ಲಿ ನಿರ್ವಹಿಸ ಬೇಕಾದ ಅಭಿವೃದ್ಧಿ ಕೆಲಸಗಳ ಕ್ರಿಯಾ ಯೋಜನೆಯ ಪಟ್ಟಿಯನ್ನು ಪಂಚಾಯತ್ ನೀಡಿದ್ದು, ಅತೀ ಶೀಘ್ರದಲ್ಲಿ ಕೆಲಸಗಳನ್ನು ಕೈಗೆತ್ತಿಕೊಳ್ಳ ಲಾಗುವುದು ಎಂದರು.
ಸಮಾಜಮುಖೀ ಚಟುವಟಿಕೆ
ಬೆಳಪು ಗ್ರಾ.ಪಂ. ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಅದಾನಿ ಸಂಸ್ಥೆಯು ಗ್ರಾಮೀಣ ಮೂಲಸೌಕರ್ಯದಡಿ ಬೆಳಪು ಗ್ರಾಮದ ರಸ್ತೆ ಅಭಿವೃದ್ಧಿ, ಶುದ್ಧ ಕುಡಿಯುವ ನೀರಿನ ಸೌಕರ್ಯ, ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಶಿಕ್ಷಣ ಪರಿಕರ, ಬಡವರಿಗೆ ವೈದ್ಯಕೀಯ ನೆರವು, ಗ್ರಾಮಸ್ಥರಿಗೆ ಫಲ ನೀಡುವ ಸಸಿ ವಿತರಣೆ, ರಸ್ತೆಗಳಿಗೆ ವಿದ್ಯುದ್ದೀಪ ಅಳವಡಿಕೆ ಸೇರಿದಂತೆ ಹಲವಾರು ಸಮಾಜಮುಖೀ ಚಟುವಟಿಕೆಗಳನ್ನು ನಿರ್ವಹಿಸುತ್ತಾ ಬರುತ್ತಿದೆ ಎಂದರು.
ಬೆಳಪು ಗ್ರಾ.ಪಂ. ಉಪಾಧ್ಯಕ್ಷೆ ಶೋಭಾ ಭಟ್, ತಾ.ಪಂ. ಸದಸ್ಯ ಯು.ಸಿ. ಶೇಖಬ್ಬ, ಗ್ರಾ.ಪಂ. ಸದಸ್ಯರಾದ ದಿನೇಶ್ ಪೂಜಾರಿ, ಸುರೇಶ್ ದೇವಾಡಿಗ, ಅನಿತಾ ಆನಂದ, ನೂರ್ ಜಹಾನ್, ಪೈಗಂ ಬಾನು, ವಿಜಯಲಕ್ಷ್ಮೀ ದೇವಾಡಿಗ, ಕರುಣಾಕರ ಶೆಟ್ಟಿ, ಉಷಾ ವಾಸು, ಶರತ್ ಕುಮಾರ್, ಅಭಿವೃದ್ಧಿ ಅಧಿಕಾರಿ ಎಚ್.ಆರ್. ರಮೇಶ್, ಸಿಎ ಬ್ಯಾಂಕ್‌ನ ಉಪಾಧ್ಯಕ್ಷ ಶ್ರೀವತ್ಸ ರಾವ್, ಗೃಹರಕ್ಷಕ ದಳ ಕಾಪು ಘಟಕದ ಲಕ್ಷ್ಮೀನಾರಾಯಣ, ಅದಾನಿ ಯುಪಿಸಿಎಲ್ ಕಂಪೆನಿಯ ಎಜಿಎಂ ಗಿರೀಶ್ ನಾವಡ, ಅದಾನಿ ಫೌಂಡೇಶನ್ ಸಿಬಂದಿಗಳಾದ ವಿನೀತ್ ಅಂಚನ್, ಅನುದೀಪ್ ಪೂಜಾರಿ, ಸುಕೇಶ್ ಸುವರ್ಣ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.