ಬೆಳಪು: ದುರ್ನಾತ ಬೀರುತ್ತಿರುವ ಮಾಂಸದ ತ್ಯಾಜ್ಯಗಳು !


Team Udayavani, Apr 29, 2019, 6:30 AM IST

belapu-durnata

ಕಾಪು: ಗ್ರಾಮೀಣ ಪ್ರದೇಶದ ಎಲ್ಲೆಡೆ ಕಸ, ತ್ಯಾಜ್ಯದ ವಿಲೇವಾರಿಯದ್ದೇ ಬಲುದೊಡ್ಡ ಸಮಸ್ಯೆಯಾಗಿದ್ದು, ರಾಜ್ಯ ಮತ್ತು ರಾಷ್ಟÅ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಬೆಳಪು ಗ್ರಾಮ ಕೂಡಾ ಈ ಸಮಸ್ಯೆಯಿಂದ ಹೊರತಾಗಿಲ್ಲ. ಅಭಿವೃದ್ಧಿಯಲ್ಲಿ ದೊಡ್ಡಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಬೆಳಪು ಗ್ರಾಮದ ವಿವಿಧೆಡೆ ಹೊರಗಿನ ಗ್ರಾಮಗಳ ತ್ಯಾಜ್ಯದ್ದೇ ಬಲುದೊಡ್ಡ ವ್ಯಾಜ್ಯವಾಗಿಬಿಟ್ಟಿದೆ.

ಗಬ್ಬೆದ್ದು ನಾರುತ್ತಿರುವ ಮುಖ್ಯ ಪ್ರದೇಶಗಳು
ಬೆಳಪು ಗ್ರಾಮದ ಕನಸಿನ ಕೂಸಾಗಿರುವ ಅತ್ಯಾಧುನಿಕ ತಂತ್ರಜ್ಞಾನದ ವಿಜ್ಞಾನ ಸಂಶೋಧನಾ ಕೇಂದ್ರ, ಮೀಸಲು ಅರಣ್ಯ ಪ್ರದೇಶ, ಸರಕಾರಿ ಪಾಲಿಟೆಕ್ನಿಕ್‌ ಕೇಂದ್ರ ಹಾಗೂ ರೈಲ್ವೇ ಟ್ರಾÂಕ್‌ ಬಳಿಯ ಪ್ರದೇಶಗಳ‌ು ಕಸದಿಂದ ಮುಚ್ಚಿ ಹೋಗಿವೆ. ಇಲ್ಲಿ ಸ್ಥಳೀಯರಿಗಿಂತ ಹೊರಗಿನವರೇ ಹೆಚ್ಚಾಗಿ ಕಸ-ತ್ಯಾಜ್ಯಗಳನ್ನು, ಕೋಳಿ – ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಎಸೆದು ಹೋಗುತ್ತಿದ್ದು, ಇದರಿಂದಾಗಿ ಬೆಳಪು ಗ್ರಾಮದ ಬಹುತೇಕ ಪ್ರದೇಶವು ಸಂಪೂರ್ಣ ಗಬ್ಬೆದ್ದು ನಾರುವ‌ಂತಾಗಿದೆ.

ಹೊರಗಿನ ತ್ಯಾಜ್ಯಗಳದ್ದೇ ಸುದ್ದಿ
ಕಸ – ತ್ಯಾಜ್ಯ ಎಸೆಯಬೇಡಿ ಎಂದು ಎಷ್ಟೇ ಬೋರ್ಡ್‌ ಹಾಕಿ ಎಚ್ಚರಿಕೆ ನೀಡಿದರೂ, ರಾತ್ರಿಯ ವೇಳೆ ಇಲ್ಲಿಗೆ ವಾಹನಗಳಲ್ಲಿ ಬರುವ ತ್ಯಾಜ್ಯ ಸೃಷ್ಟಿಯ ವ್ಯಕ್ತಿಗಳು ತಮಗೆ ಇಷ್ಟ ಬಂದ ಪ್ರದೇಶಗಳಲ್ಲಿ ತ್ಯಾಜ್ಯವನ್ನು ಸುರಿದು, ಬೆಳಪು ಗ್ರಾಮದ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಬೆಳಪು ಗ್ರಾಮದ ವ್ಯಾಪ್ತಿಗೆ ಬರುವ ಕುಂಜೂರು ರೈಲ್ವೇ ಬ್ರಿಡ್ಜ್ನಿಂದ ಹಿಡಿದು ಬೆಳಪು ರೈಲ್ವೇ ಬ್ರಿಡ್ಜ್ನವರೆಗೂ ರಸ್ತೆ ಬದಿಯಲ್ಲಿ ತ್ಯಾಜ್ಯದ ರಾಶಿ ಕಾಣುತ್ತಿದ್ದು, ಇದರಿಂದಾಗಿ ಭಾಗದ ಜನರು ಮತ್ತು ಪಾದಚಾರಿ,ವಾಹನಗಳು ಸುತ್ತು ಬಳಸಿ ತಮ್ಮೂರಿಗೆ ನಡೆದಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಈ ಗ್ರಾಮವು ಹತ್ತಾರು ಯೋಜನೆಗಳ ಅನುಷ್ಠಾನದಲ್ಲಿ ದೇಶದ ಗಮನ ಸೆಳೆದಿದ್ದು, ಸ್ವತ್ಛ ಗ್ರಾಮವೆಂಬ ಕೀರ್ತಿಗೂ ಭಾಜನವಾಗಿದ್ದು, ಇತ್ತೀಚಿನ ದಿನಗಳಳಿÉ ಕೆಲವೊಂದು ಕಿಡಿಗೇಡಿಗಳು ರಸ್ತೆ ಪಕ್ಕಗಳಲ್ಲಿ ಕಸ ಎಸೆಯುತ್ತಿರುವುದರಿಂದ ಆ ಹೆಸರಿಗೂ ಅಪಕೀರ್ತಿಯುಂಟಾಗುತ್ತಿದೆ. ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದ್ದು, ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತಿದೆ. ಕಸ ಎಳೆದಾಡುವ ಬೀದಿ ನಾಯಿಗಳ ಹಾವಳಿಯಿಂದಲೂ ಜನರಿಗೆ ತೊಂದರೆಯಾಗುತ್ತಿದೆ.

ಗ್ರಾಮದಲ್ಲಿ ಮಾದರಿಯಾದ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವ ಯೋಜನೆ ಸಿದ್ಧಪಡಿಸಲಾಗಿದ್ದು, ಅದಕ್ಕೆ ಸಂಬಧಪಟ್ಟು ಜಾಗ ಗೊತ್ತುಪಡಿಸಿ ದಾಖಲೆಯ ಆದೇಶ ನೀಡುವಂತೆ ಕಂದಾಯ ಇಲಾಖಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಕಸ ಮುಕ್ತ ಗ್ರಾಮ ನಿರ್ಮಾಣಕ್ಕಾಗಿ ಕಾವಲು ಪಡೆ ರಚಿಸಿ, ಅವ‌ರೊಂದಿಗೆ ಗ್ರಾಮದಲ್ಲಿ ಸ್ವತ್ಛ ಭಾರತ ಅಭಿಯಾನದ ಸಮರ್ಪಕ ಅನುಷ್ಟಾನಕ್ಕಾಗಿ ಎನ್‌.ಜಿ.ಒ ಗಳನ್ನು ನೇಮಕ ಮಾಡಿ, ಅವರ ಮೂಲಕ ಸ್ವತ್ಛತೆಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಬೆಳಪು ಗ್ರಾ.ಪಂ. ಅಧ್ಯಕ್ಷ ಡಾ| ದೇವಿಪ್ರಸಾದ್‌ ಶೆಟ್ಟಿ ತಿಳಿಸಿದ್ದಾರೆ.

ಅಲಲ್ಲಿ ಫಲಕ ಅಳವಡಿಸಿ, ಎಚ್ಚರಿಸಲು ಚಿಂತನೆ
ಕಸ ರಸ್ತೆಗೆ ಎಸೆಯುವುದು ಅಪರಾಧ, ಆರೋಗ್ಯಕ್ಕೆ ಹಾನಿಕರ, ಕಸವನ್ನು ಮನೆಯಲ್ಲೇ ವಿಲೇ ಮಾಡಿ, ಕೋಳಿ ಮಾಂಸ ಅಥವಾ ಇತರ ತ್ಯಾಜ್ಯ ರಸ್ತೆಯ ಪಕ್ಕದಲ್ಲಿ ಹಾಕಿದಲ್ಲಿ, ಕ್ರಿಮಿನಲ್‌ ಮೊಕದ್ದಮೆ ಹೂಡುವುದು, ಪೊಲೀಸ್‌ ಠಾಣೆಗೆ ದೂರು ನೀಡಲಾಗುವುದು, ಕಸ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವವರಿಗೆ 2000 ರೂ. ದಂಡ ವಿಧಿಸಲಾಗುವುದು, ಬೆ„ಕ್‌ ಅಥವಾ ವಾಹನಗಳಲ್ಲಿ ಬಂದು ಕಸ ಎಸೆದರೆ ವಾಹನ ಮುಟ್ಟುಗೋಲು ಹಾಕಲಾಗುವುದು, ಸಿ.ಸಿ.ಟಿ.ವಿ ಅಳವಡಿಸಿ ಜಾಗƒತ ದಳ ನೇಮಿಸುವುದು ಎಂಬಿತ್ಯಾದಿ ಎಚ್ಚರಿಕೆ ಫಲಕಗಳನ್ನು ಗ್ರಾಮದುದ್ದಕ್ಕೂ ಅಳವಡಿಸಲು ಗ್ರಾಮ ಪಂಚಾಯತ್‌ ಚಿಂತನೆ ನಡೆಸಿದೆ.

ಕಸ ಎಸೆದವರಿಗೆ ದಂಡ ; ಮಾಹಿತಿ ನೀಡಿದವರಿಗೆ ಬಹುಮಾನ
ಕಾಪು ತಾಲೂಕು ವ್ಯಾಪ್ತಿಯ ಬೆಳಪು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾರ್ವಜನಿಕರು ರಸ್ತೆ ಪಕ್ಕದಲ್ಲಿ ತಮಗಿಷ್ಟ ಬಂದಂತೆ ಕಸ ಎಸೆದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮಕ್ಕೆ ಕೈಗೊಳ್ಳಲಾಗುವುದು. ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದರೆ 2000- ರೂ. ದಂಡ ವಿಧಿಸಿ, ಅಂತಹವರ ವಿರುದ್ಧ ಪೊಲೀಸ್‌ ಠಾಣೆಗೆ ದೂರು ನೀಡಲು ನಿರ್ಧರಿಸಲಾಗಿದೆ. ಅದರೊಂದಿಗೆ ಕಸ ಮುಕ್ತ ಗ್ರಾಮ ಜಾಗƒತಿಗೆ ವಿನೂತನ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಕಸ ತಂದು ಸುರಿಯುವವರ ಬಗ್ಗೆ ಮಾಹಿತಿ ನೀಡುವವರಿಗೆ 1000 ರೂ. ನಗದು ಬಹುಮಾನ ನೀಡಲು ನಿರ್ಣಯಿಸಲಾಗಿದೆ.
-ಡಾ| ದೇವಿಪ್ರಸಾದ್‌ ಶೆಟ್ಟಿ ಅಧ್ಯಕ್ಷರು, ಬೆಳಪು ಗ್ರಾಮ ಪಂಚಾಯತ್‌

ಟಾಪ್ ನ್ಯೂಸ್

INDvAUS; For the first time in history…: Bumrah sets new record with 200 wickets

INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್‌ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ

5-aranthodu

Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ

4-road-mishap

Anandapura: ಬಸ್‌ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

State records liquor sales worth Rs 408 crore in a single day

Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ

S.Korea: Plane skids on runway and hits wall: Watch video here

S.Korea: ರನ್‌ ವೇಯಲ್ಲಿ ಸ್ಕಿಡ್‌ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

1-can

Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ

5

Udupi: ತಂಡಗಳ ನಡುವೆ ಹಲ್ಲೆ; ಪ್ರಕರಣ ದಾಖಲು

4

Malpe: ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

14

Padubidri: ವೃದ್ಧ ದಂಪತಿಗೆ ಸುರಕ್ಷಿತ ಕಾಲು ಸಂಕದ ಭರವಸೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

INDvAUS; For the first time in history…: Bumrah sets new record with 200 wickets

INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್‌ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ

5-aranthodu

Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ

4-road-mishap

Anandapura: ಬಸ್‌ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

State records liquor sales worth Rs 408 crore in a single day

Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ

S.Korea: Plane skids on runway and hits wall: Watch video here

S.Korea: ರನ್‌ ವೇಯಲ್ಲಿ ಸ್ಕಿಡ್‌ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.