ಜಡ್ಕಲ್ ಸನಿಹದ ಬೆಳ್ಕಲ್ ತೀರ್ಥ: ಪ್ರಯಾಸದ ಹಾದಿಗೆ ಕಾಯಕಲ್ಪ ಎಂದು?
Team Udayavani, Dec 20, 2020, 12:46 PM IST
ಕೊಲ್ಲೂರು, ಡಿ.19: ಜಡ್ಕಲ್ ಗ್ರಾ.ಪಂ. ವ್ಯಾಪ್ತಿಯ ಬೆಳ್ಕಲ್ ತೀರ್ಥಕ್ಕೆ ಸಾಗುವುದು ಬಲು ಕಠಿನವಾಗಿದ್ದು ಮೂಕಾಂಬಿಕಾ ಅಭಯಾರಣ್ಯದ ನಡುವಿನ ಕಾಡುದಾರಿಯಲ್ಲಿ ಬಹಳಷ್ಟು ದೂರ ನಡೆದುಕೊಂಡು ಹೋಗಬೇಕಿದೆ. ಇದು ಪ್ರವಾಸಿಗರನ್ನು ಸಂಕಷ್ಟಕ್ಕೆ ನೂಕಿದೆ. ಇದಕ್ಕೊಂದು ಪರ್ಯಾಯ ವ್ಯವಸ್ಥೆಯನ್ನು ಸಂಬಂಧ ಪಟ್ಟವರು ಅಗತ್ಯವಾಗಿ ಮಾಡಬೇಕಾಗಿದೆ.
ಪ್ರಕೃತಿಯ ರಮ್ಯ ಸೌಂದರ್ಯದ ನೆಲೆಬೀಡಾದ ಬೆಳ್ಕಲ್ ತೀರ್ಥ ಪ್ರದೇಶವು ಪ್ರವಾಸಿಗರನ್ನು ಕೈಬೀಸಿ ಕರೆಯುವಂತಿದೆ. ಜಲಪಾತದ ಅಡಿಯಲ್ಲಿ ಮುಂದೆ ಸಾಗುವ ಮಂದಿಗೆ ಈ ಭಾಗದ ಧ್ಯಾನ ಕೇಂದ್ರವಾಗಿ ಪರಿಗಣಿಸಲ್ಪಟ್ಟಿದೆ.
ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು :
ಕರ್ನಾಟಕದ ವಿವಿಧ ಜಿಲ್ಲೆಗಳು ಸಹಿತ ಕೇರಳ ಹಾಗೂ ತಮಿಳುನಾಡಿನಿಂದ ಪ್ರತಿದಿನ ನೂರಾರು ಮಂದಿ ಬೆಳ್ಕಲ್ ತೀರ್ಥ ವೀಕ್ಷಿಸಲು ಆಗಮಿಸುತ್ತಾರೆ. ಜಡ್ಕಲ್‌ನಿಂದ 15 ಕಿ.ಮೀ. ದೂರದ ಬೀಸಿನಪಾರೆ, ಮುದೂರು ಮಾರ್ಗವಾಗಿ ಕೋರೆ ಮುಖದಿಂದ ಶೇಡಿಗುಂಡಿ ಹಾಗೂ ವಾಟೆಗುಂಡಿಯಿಂದ ಸಾಗಿದಾಗ ಪುರಾತನ ಕೋಟಿಲಿಂಗೇಶ್ವರ ಮಹಾಗಣಪತಿ ಹಾಗೂ ಗೋವಿಂದ ಕ್ಷೇತ್ರ ಕಂಡುಬರುತ್ತದೆ. ಈ ದೇಗುಲ ಸನಿಹದ ರಾಜ್ಯ ಸರಕಾರದ ಅಭಯಾರಣ್ಯದ ಮಾರ್ಗವಾಗಿ ಸುಮಾರು 4 ಕಿ.ಮೀ. ದೂರ ಸಾಗಿದರೆ ಕೋಟಿ ತೀರ್ಥ ಜಲಪಾತ ಕಂಡುಬರುವುದು.
ಅಭಿವೃದ್ಧಿಗೆ ಕಾನೂನು ಅಡ್ಡಿ :
ಮೂಕಾಂಬಿಕಾ ಅಭಯಾರಣ್ಯದ ವ್ಯಾಪ್ತಿಗೆ ಬರುವ ಈ ಪ್ರದೇಶದ ಅಭಿವೃದ್ಧಿಗೆ ಪೂರಕವಾದ ವ್ಯವಸ್ಥೆ ಕಲ್ಪಿಸಲು ಅರಣ್ಯ ಕಾನೂನು ಅಡ್ಡಿ ಬರುವುದರಿಂದ ಕಾಲುದಾರಿಯನ್ನು ವಿಸ್ತರಿ ಸುವ ಬಗ್ಗೆ ಪ್ರವಾಸಿಗರು ಸಲ್ಲಿಸಿದ ಮನವಿ ತಿರಸ್ಕಾರಗೊಂಡಿದೆ.ದಟ್ಟಾರಣ್ಯದ ನಡುವಿನ ಹಾದಿಯಲ್ಲಿಸಾಗಬೇಕಾದ ಬೆಳ್ಕಲ್ ತೀರ್ಥ ಪ್ರವಾಸಿಗರನ್ನು ದಿನೇ ದಿನೇ ಸೆಳೆಯುತ್ತಿದೆ.
25 ರೂ. ಶುಲ್ಕ ವಸೂಲಿ : ಪ್ರತಿ ದಿನ ಆಗಮಿಸುವ ಪ್ರತಿಯೋರ್ವ ಪ್ರವಾಸಿಗ ತಲಾ 25 ರೂ. ಶುಲ್ಕವನ್ನುಅರಣ್ಯ ಇಲಾಖೆಗೆ ನೀಡಿ ಒಳ ಪ್ರವೇಶಿಸಬೇಕಾಗಿದೆ. ಅಲ್ಲದೆ ನಿಗದಿತ ಸಮಯದಲ್ಲಿ ಹಿಂದಿರುಗಬೇಕಾಗಿದೆ. ಮಧ್ಯ ಇನ್ನಿತರ ಅಗತ್ಯ ವಸ್ತುಗಳನ್ನು ಒಯ್ಯಲು ಅವಕಾಶವಿಲ್ಲ. ಪ್ರತಿದಿನ 150 ರಿಂದ 300 ಮಂದಿ ಬೆಳ್ಕಲ್ ತೀರ್ಥ ವೀಕ್ಷಿಸಲು ಆಗಮಿಸುತ್ತಿದ್ದಾರೆ.
ಮೂಕಾಂಬಿಕಾ ಅಭಯಾರಣ್ಯದ ವ್ಯಾಪ್ತಿಗೆ ಒಳಪಡುವ ಬೆಳ್ಕಲ್ ತೀರ್ಥ ಇರುವ ಸ್ಥಿತಿಯಲ್ಲೇ ಅಗತ್ಯ ವ್ಯವಸ್ಥೆಯನ್ನು ಹೊಂದಾಣಿಕೆ ಮಾಡಬಹುದು. ಸ್ಥಳೀಯವಾಗಿ ಸಮಿತಿ ರಚಿಸಿ ಗ್ರಾಮ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಪ್ರವಾಸಿಗರಿಂದ ಪಡೆಯುತ್ತಿರುವ ಶುಲ್ಕವನ್ನು ನೇರವಾಗಿ ಸರಕಾರಕ್ಕೆ ಠೇವಣಿ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಮಿತಿ ರಚಿಸಿದರೆ ಶುಲ್ಕವನ್ನು ಬಳಸಿ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಪಾಮುಖ್ಯ ನೀಡಬಹುದು . -ಸಿದ್ದೇಶ್ , ಅರಣ್ಯಾಧಿಕಾರಿ, ಕೊಲ್ಲೂರು
ಬೆಳ್ಕಲ್ ತೀರ್ಥದ ಅಭಿವೃದ್ಧಿಗೆ ಪೂರಕ ವ್ಯವಸ್ಥೆ ಕಲ್ಪಿಸುವಲ್ಲಿ ಕಾನೂನಿನಲ್ಲಿ ಅವಕಾಶವಿದ್ದಲ್ಲಿ ಸಂಪೂರ್ಣ ಪ್ರಯತ್ನ ಮಾಡುತ್ತೇನೆ. –ಬಿ.ಎಂ.ಸುಕುಮಾರ್ ಶೆಟ್ಟಿ, ಶಾಸಕರು, ಬೈಂದೂರು
ಪ್ರತಿದಿನ ನೂರಾರು ಪ್ರವಾಸಿಗರು ಆಗಮಿಸುತ್ತಿರುವ ಪ್ರವಾಸೋದ್ಯಮ ಕೇಂದ್ರವಾಗಿರುವ ಬೆಳ್ಕಲ್ ತೀರ್ಥದ ಪ್ರಯಾಸದ ದಾರಿಯ ಅಭಿವೃದ್ಧಿಯಾಗಬೇಕು.-ವಾಸುದೇವ ಮುದೂರು, ಸಮಾಜ ಸೇವಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.