ಬೆಳ್ಮಣ್‌: ಅಸಮರ್ಪಕ ಕಸ ವಿಲೇವಾರಿ

ಇಲ್ಲಿ ಸ್ವಚ್ಛ ಭಾರತ ಕೂಗು ಪ್ರಚಾರಕ್ಕೆ ಸೀಮಿತ

Team Udayavani, Mar 7, 2020, 4:49 AM IST

garbbage

ಬಳಕೆಯಲ್ಲಿಲ್ಲದ ಕಸ ನಿರ್ವಹಣಾ ಘಟಕ.

ಬೆಳ್ಮಣ್‌: ಎಲ್ಲೆಡೆ ತ್ಯಾಜ್ಯ ನಿರ್ವಹಣೆ, ತ್ಯಾಜ್ಯ ಸಮಸ್ಯೆ ತಲೆನೋವು ತಂದಿರುವಾಗಲೇ ಇಲ್ಲಿನ ಗ್ರಾ.ಪಂ. ತ್ಯಾಜ್ಯ  ನಿರ್ವಹಣೆ ಬಗ್ಗೆ ಅಪಸ್ವರ ಕೇಳಿ ಬರುತ್ತಿದೆ. ಪ್ಲಾಸ್ಟಿಕ್‌ ಸಹಿತ ವಿವಿಧ ತ್ಯಾಜ್ಯಗಳನ್ನು ನಿರ್ವಹಣೆ ಘಟಕದ ಪಕ್ಕದಲ್ಲೇ ಸುಡುತ್ತಿರುವುದು ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ.

ಪರಿಸರಕ್ಕೆ ಹಾನಿ
ಬೆಳ್ಮಣ್‌ ಪಂಚಾಯತ್‌ ಆಡಳಿತ ತನ್ನ ವ್ಯಾಪ್ತಿಯ ಮನೆಗಳು ಹಾಗೂ ಅಂಗಡಿ ಮುಂಗಟ್ಟುಗಳಿಂದ ತ್ಯಾಜ್ಯ-ಕಸ ಸಂಗ್ರಹಿಸುತ್ತಿದೆ. ಅದನ್ನು ನಿರ್ವಹಣ ಘಟಕದ ಬಳಿ ತಂದು ಪ್ಲಾಸ್ಟಿಕ್‌ ತ್ಯಾಜ್ಯಗಳಿಗೆ ಬೆಂಕಿ ಇಡಲಾಗುತ್ತಿದೆ. ತ್ಯಾಜ್ಯ ಉರಿಸುವುದರಿಂದ ಜನರಿಗೆ ವಿಷಾನಿಲ ದೇಹ ಸೇರುವ ಭೀತಿ ಕಾಡುತ್ತಿದೆ.

ಹೊಗೆಯಿಂದಾವೃತ ಪ್ರದೇಶ
ತ್ಯಾಜ್ಯವನ್ನು ಸುಡುವುದರಿಂದ ಪರಿಸರದಲ್ಲಿ ಭಾರೀ ಹೊಗೆ ತುಂಬಿದ್ದು ಜನರು ಆತಂಕಿತರಾಗಿದ್ದಾರೆ. ಹಸಿ-ಒಣ ಕಸವನ್ನೂ ಒಂದೇ ಕಡೆ ಸುರಿಯುವುದರಿಂದಲೂ ಪರಿಸರ ವಾಸನೆ ಬೀರುತ್ತಿದೆ. ಪ್ಲಾಸ್ಟಿಕ್‌ ಬಾಟಲಿಗಳು, ಮದ್ಯದ ಬಾಟಲಿಗಳು ಹಾಗೂ ಕೋಳಿಯ ತ್ಯಾಜ್ಯ ಎಲ್ಲವನ್ನೂ ಇಲ್ಲಿ ಸುರಿದು ಒಣಗಿದ ಬಳಿಕ ಬೆಂಕಿ ಹಾಕಲಾಗುತ್ತಿದೆ. ಇತ್ತೀಚೆಗೆ ಇಲ್ಲಿ ಕಸಕ್ಕೆ ಹಾಕಿದ ಬೆಂಕಿ ಪಕ್ಕದ ಖಾಸಗಿ ಗುಡ್ಡ ಪ್ರದೇಶಕ್ಕೆ ಹರಡಿದ್ದು ಗಿಡ ಮರಗಳು ಸುಟ್ಟು ಕರಕಲಾಗಿತ್ತು.

ಕಸ ವಿಲೇವಾರಿ ಘಟಕ ಪ್ರಯೋಜನಕ್ಕಿಲ್ಲ
ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ನಿರ್ವಹಣೆ ಮಾಡಲು ಸ್ವಚ್ಚ ಭಾರತ್‌ ಮಿಷನ್‌ ಗ್ರಾಮೀಣ ಯೋಜನೆ ಅಡಿಯಲ್ಲಿ ಸುಮಾರು 14 ಲಕ್ಷ ರೂ. ವೆಚ್ಚದಲ್ಲಿ ಜಂತ್ರದಲ್ಲಿ ತ್ಯಾಜ್ಯ ವಿಲೇವಾರಿ ಘಟಕ 2017 ರಲ್ಲಿ ನಿರ್ಮಾಣವಾಗಿತ್ತು. ಆದರೆ ಪಂಚಾಯತ್‌ ಈವರೆಗೂ ಇಲ್ಲಿ ತ್ಯಾಜ್ಯ ನಿರ್ವಹಣೆಗೆ ಮುಂದಾಗಿಲ್ಲ. ಇದರಿಂದ ಅಷ್ಟೊಂದು ವೆಚ್ಚ ಮಾಡಿ ನಿರ್ಮಿಸಿದ ಘಟಕ ಭೂತ ಬಂಗಲೆಯಂತಾಗಿದೆ.

ಪಂಚಾಯತ್‌ ಕಚೇರಿ ಪಕ್ಕ ತ್ಯಾಜ್ಯ
ಜಂತ್ರ ನಿರ್ವಹಣೆ ಘಟಕ ಕೆಲಸ ಮಾಡದೇ ಇರುವುದು ಒಂದೆಡೆಯಾದರೆ, ಪಂಚಾಯತ್‌ ಕಟ್ಟಡದ ಹಿಂಭಾಗದಲ್ಲಿರುವ ಹಳೆಯ ಕಟ್ಟಡ ತ್ಯಾಜ್ಯ ಗೋದಾಮು ಆಗಿ ಮಾರ್ಪಟ್ಟಿದೆ. ಇಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಮೂಟೆಗಟ್ಟಲೆ ಪೇರಿಸಿಡಲಾಗಿದೆ. ಕೆಲವೊಂದು ತ್ಯಾಜ್ಯಗಳನ್ನು ಇಲ್ಲಿ ಶೇಖರಿಸಿ ಇಡಲಾಗಿದ್ದರೆ, ಹೆಚ್ಚಿನವುಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಪ್ಲಾಸ್ಟಿಕ್‌ ಸುಟ್ಟರೆ ಅದರ ವಿಷಾನಿಲ ಮಾರಕ ಎಂಬ ಅರಿವು ಇದ್ದರೂ, ಅರಿವು ಮೂಡಿಸಬೇಕಾದ ಗ್ರಾ.ಪಂ. ತ್ಯಾಜ್ಯ ಸುಡುವುದು ಜನರ ಬೇಸರಕ್ಕೆ ಕಾರಣವಾಗಿದೆ.

ಸೂಕ್ತ ಕ್ರಮ
ಈ ಬಗ್ಗೆ ಪಂಚಾಯತ್‌ ಸದಸ್ಯರ ಸಭೆ ಕರೆದು ಕ್ರಮ ಕೈಗೊಳ್ಳುತ್ತೇವೆ.
-ವಾರಿಜಾ ಕೋಟ್ಯಾನ್‌, ಬೆಳ್ಮಣ್‌ ಗ್ರಾ.ಪಂ. ಅಧ್ಯಕ್ಷೆ

ಗಮನಕ್ಕೆ ತರಲಾಗುವುದು
ಈ ಬಗ್ಗೆ ಸ್ಥಳೀಯ ಪಂಚಾಯತ್‌ ಹಾಗೂ ಜಿಲ್ಲಾ ಪಂಚಾಯತ್‌ನ ಗಮನಕ್ಕೂ ತರುತ್ತೇನೆ. -ರೇಶ್ಮಾ ಉದಯ್‌ ಶೆಟ್ಟಿ, ಜಿ.ಪಂ ಸದಸ್ಯೆ, ಬೆಳ್ಮಣ್‌.

ಇಲ್ಲಿ ಸಂಗ್ರಹಿಸಲಾದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದೆ ಜಂತ್ರದ ಶ್ಮಶಾನದ ಬಳಿ ನಿರ್ವಹಣ ಘಟಕದ ಬಳಿಯಲ್ಲೇ ರಾಶಿ ಹಾಕಿ ಬೆಂಕಿ ಹಾಕಲಾಗುತ್ತಿದೆ ಇದರಿಂದ ಪರಿಸರಕ್ಕೆ ಅಪಾಯ ಕಾದಿದೆ. .
-ಅಶೋಕ್‌ ಕುಮಾರ್‌ ಜಂತ್ರ, ಸ್ಥಳೀಯರು

ಟಾಪ್ ನ್ಯೂಸ್

BGT 2024-25: Virat Kohli returns to form in Aussies

BGT 2024-25: ಆಸೀಸ್‌ ನಲ್ಲಿ ಲಯಕ್ಕೆ ಮರಳಿದ ವಿರಾಟ್‌ ಕೊಹ್ಲಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರು ಪಾಲು

Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Youth assaulted near Belagavi airport compound

Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

4

BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

2

Udupi: ಯುವತಿ ನಾಪತ್ತೆ; ದೂರು ದಾಖಲು

Devadurga

Karkala: ಅಕ್ರಮ ಮದ್ಯ ದಾಸ್ತಾನು; ಆರೋಪಿ ಸೆರೆ

Brahmavar

Malpe: ಅಸ್ವಾಭಾವಿಕ ಸಾವು; ಪ್ರಕರಣ ದಾಖಲು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

BGT 2024-25: Virat Kohli returns to form in Aussies

BGT 2024-25: ಆಸೀಸ್‌ ನಲ್ಲಿ ಲಯಕ್ಕೆ ಮರಳಿದ ವಿರಾಟ್‌ ಕೊಹ್ಲಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರು ಪಾಲು

Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Youth assaulted near Belagavi airport compound

Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.