ಬೆಳ್ಮಣ್ ಪಾರ್ಕಿಂಗ್ ಸಮಸ್ಯೆ ಕೊನೆಗೂ ಪರಿಹಾರ
Team Udayavani, Feb 27, 2019, 1:00 AM IST
ಬೆಳ್ಮಣ್: ಇಲ್ಲಿನ ಪೇಟೆಯಲ್ಲಿ ಬಲು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದ ಪಾರ್ಕಿಂಗ್ ಸಮಸ್ಯೆಗೆ ಬೆಳ್ಮಣ್ ರೋಟರಿ ಸಂಸ್ಥೆಯಿಂದ ಮುಕ್ತಿ ಸಿಕ್ಕಿದೆ.
13 ಲಕ್ಷ ರೂ. ವೆಚ್ಚ
ಬೆಳೆಯುತ್ತಿರುವ ಬೆಳ್ಮಣ್ ಪೇಟೆಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ. ವಾಹನ ಸವಾರರು ರಸ್ತೆಯ ಇಕ್ಕೆಲಗಳಲ್ಲಿ, ಬಸ್ಸು ನಿಲ್ದಾಣದಲ್ಲಿ ಪಾರ್ಕ್ ಮಾಡುತ್ತಿದ್ದರು. ಈ ಸಮಸ್ಯೆ ಮನಗಂಡ ಬೆಳ್ಮಣ್ ರೋಟರಿ ಸಂಸ್ಥೆಯ 2018-19 ನೇ ಸಾಲಿನ ಅಧ್ಯಕ್ಷ, ರನೀಶ್ ಆರ್.ಶೆಟ್ಟಿ ಸುಮಾರ್ 13 ಲಕ್ಷ ರೂ. ವೆಚ್ಚದಲ್ಲಿ ಸರಕಾರಿ ಪ.ಪೂ.ಕಾಲೇಜು ಎದರುಗಡೆ ಪಾರ್ಕಿಂಗ್ ಸೌಕರ್ಯದ ಯೋಜನೆ ಬಗ್ಗೆ ಚಿಂತಿಸಿದ್ದರು. ಅದರಂತೆ ಈಗ ಪಾರ್ಕಿಂಗ್ ಜಾಗ ನಿರ್ಮಾಣವಾಗಿದೆ.
ರೋಟರಿ ಜಿಲ್ಲಾ ಯೋಜನೆ ರೋಡ್ ಸೇಫ್ಟಿಯನ್ನು ಮುಂದಿಟ್ಟು ಪ್ರಾರಂಭಿಸಲಾದ ಈ ಸುಂದರ ಪಾರ್ಕಿಂಗ್ ವ್ಯವಸ್ಥೆಯನ್ನು ಕಾರ್ಕಳ ಕ್ಷೇತ್ರ ಶಾಸಕ ವಿ.ಸುನೀಲ್ ಕುಮಾರ್ ಉದ್ಘಾಟಿಸಿದ್ದಾರೆ.
ವಿವಿಧ ಮೂಲಗಳಿಂದ ಸಹಾಯ
ಈ ಕಾಮಗಾರಿಗೆ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್‌ರವರು 5 ಲಕ್ಷ ರೂ. ಅನುದಾನ, ಸ್ಥಳಿಯ ಗ್ರಾಮ ಪಂಚಾಯತ್ ವತಿಯಿಂದ 2 ಲಕ್ಷ ರೂ., ಅನಿವಾಸಿ ಭಾರತೀಯ ಉದ್ಯಮಿ ಆರ್ಥರ್ ರೊನಾಲ್ಡ್ ರವರು 1 ಲಕ್ಷ ರೂ. ನೀಡಿದ್ದಾರೆ ಉಳಿದ ಮೊತ್ತವನ್ನು ಸ್ಥಳೀಯ ದಾನಿಗಳ ನೆರವಿನಿಂದ ಹಾಗೂ ರೋಟರಿ ಸಂಸ್ಥೆ ಭರಿಸಲಾಗಿದೆ.
ವಿಭಜಕ ಅಳವಡಿಕೆ
ಇದರೊಂದಿಗೆ ಪೇಟೆಯಿಂದ ಸರಕಾರಿ ಕಾಲೇಜು ವರೆಗೆ ಹೆದ್ದಾರಿಯಲ್ಲಿ ವಿಭಾಜಕ (ಫೆ„ಬರ್ ಪೋಲ್ ಸ್ಪ್ರಿಂಗ್‌ಪೋಸ್ಟ್) ವ್ಯವಸ್ಥೆಯನ್ನೂ ರೋಟರಿ ಸಂಸ್ಥೆ ಮಾಡಿದೆ. ಮುಂದಿನ ದಿನಗಳಲ್ಲಿ ಹಿಂದೂ ರುದ್ರ ಭೂಮಿ ನವೀಕರಣದ ಯೋಜನೆಯೂ ಸಂಸ್ಥೆಗಿದೆ.
ಅಭಿವೃದ್ಧಿಯ ಕನಸು
ಬೆಳ್ಮಣ್‌ಗೆ ಶಾಶ್ವತ ಕೊಡುಗೆ ನೀಡಬೇಕೆಂದು ಮನಸ್ಸು ಮಾಡಿದ್ದೆ. ಅದರಂತೆ ಎಲ್ಲರ ಸಹಕಾರದಿಂದ ಪಾರ್ಕಿಂಗ್ ವ್ಯವಸ್ಥೆ ನಿರ್ಮಾಣಗೊಳ್ಳಲು ಸಾಧ್ಯವಾಯಿತು. ಮುಂದೆಯೂ ಬೆಳ್ಮಣ್ ಪೇಟೆಯ ಅಭಿವೃದ್ಧಿಯ ಬಗ್ಗೆ ಹಲವು ಕನಸುಗಳಿವೆ.
– ರನೀಶ್ ಆರ್.ಶೆಟ್ಟಿ, ಬೆಳ್ಮಣ್ ರೋಟರಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.