ಬೆಳ್ಮಣ್: ರಸ್ತೆ ವಿಸ್ತರಣೆಗೆ ಶತಮಾನ ಕಂಡ ಮರಗಳಿಗೆ ಕೊಡಲಿ
Team Udayavani, Jan 26, 2021, 3:00 AM IST
ಬೆಳ್ಮಣ್: ರಸ್ತೆ ವಿಸ್ತರಣೆಯ ಜತೆ ಅಭಿವೃದ್ಧಿಗಾಗಿ ರಸ್ತೆಯ ಇಕ್ಕೆಲಗಳಲ್ಲಿದ್ದ ಶತಮಾನ ಕಂಡ ನೂರಾರು ಮರಗಳನ್ನು ಹನನ ಮಾಡಲಾಗಿವೆ.ಕಾರ್ಕಳ ತಾಲೂಕಿನ ಬೆಳ್ಮಣ್ ಪೇಟೆಯಿಂದ ಜಂತ್ರ ಸಾಗುವವರೆಗೆ ಅಂಕು ಡೊಂಕಾಗಿದ್ದ ರಸ್ತೆಯ ವಿಸ್ತರಣೆ ಕಾಮಗಾರಿ ಬಿರುಸಿನಿಂದ ನಡೆಯುತ್ತಿದ್ದು ರಸ್ತೆಯ ಪಕ್ಕದಲ್ಲಿ ನೂರಾರು ವರ್ಷಗಳಿಂದ ಬೆಳೆದು ನಿಂತಿದ್ದ ಬೃಹತ್ ಮರಗಳನ್ನು ಕಡಿದು ರಸ್ತೆಯನ್ನು ಅಭಿವೃದ್ಧಿಪಡಿಸ ಲಾಗುತ್ತಿದೆ. ಗ್ರಾಮೀಣ ಭಾಗದ ರಸ್ತೆಗಳು ಅಭಿವೃದ್ಧಿಯಾಗುತ್ತಿರುವುದು ಒಂದೆಡೆ ಖುಷಿಯಾಗುತ್ತಿದ್ದರೆ ಇನ್ನೊಂದೆಡೆ ಅಭಿವೃದ್ಧಿಯ ನೆಪದಲ್ಲಿ ನೂರಾರು ವರ್ಷಗಳಿಂದ ಬೆಳೆದು ನಿಂತ ಬೃಹತ್ ಮರಗಳು ಧರೆಗುರುಳುತ್ತಿರುವುದು ವಿಷಾದನೀಯ ಎಂದು ಈ ಭಾಗದ ಪರಿಸರ ಪ್ರೇಮಿಗಳು ಅಳಲು ತೋಡಿಕೊಂಡಿದ್ದಾರೆ.
ಇಲಾಖೆಯ ಮೂಲಕವೇ ಮರಗಳು ಧರಾಶಾಹಿ :
ಬೆಳ್ಮಣ್‌ನಿಂದ ಶಿರ್ವ ಸಾಗುವ ಈ ರಸ್ತೆಯ ಅಭಿವೃದ್ಧಿಗಾಗಿ ಈಗಾಗಲೇ ಇಲಾಖಾ ಅನುಮತಿಯಂತೆ ಸುಮಾರು ಅರ್ಧ ಕಿ.ಮೀ. ಅಂತರದಲ್ಲೇ 42 ಮರ ಗಳನ್ನು ಕಡಿಯಲಾಗಿದ್ದು ಅರಣ್ಯ ಇಲಾಖೆಯ ಅನುಮತಿಯಂತೆ ಮರವನ್ನು ಸರಕಾರಿ ಡಿಪೋಗೆ ಸಾಗಿಸಲಾಗಿದೆ. ಇನ್ನು ನೂರಾರು ವರ್ಷಗಳಿಂದ ದಟ್ಟವಾಗಿ ಬೆಳೆದು ನಿಂತಿದ್ದ ಆಲದ ಮರಗಳು ಧರೆಗುರುಳಿದ್ದು ಹಚ್ಚ ಹಸುರಿನಿಂದ ಕೂಡಿದ ರಸ್ತೆಯ ಇಕ್ಕೆಲಗಳು ಶ್ಮಶಾನ ಸದೃಶವಾಗಿದೆ.
ಅಪಘಾತ ವಲಯ :
ಬೆಳ್ಮಣ್‌ನಿಂದ ಜಂತ್ರದವರೆಗೆ ರಸ್ತೆಯು ತಿರುವು ಮುರುವಿನಿಂದ ಕೂಡಿದ್ದು ಕಳೆದ ಹಲವು ವರ್ಷಗಳಿಂದ ಈ ರಸ್ತೆಯಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿವೆ. ಕಳೆದ ಬಾರಿ ಬೈಕ್ ಸವಾರನೊಬ್ಬ ಬಸ್ಸಿನಡಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟರೆ, ಬಸ್ಸು ಟಿಪ್ಪರ್ ನಡುವೆ ಢಿಕ್ಕಿ ಸಂಭವಿಸಿ ಯುವತಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟಿದ್ದಳು. ಈ ಕಾರಣಕ್ಕಾಗಿಯೂ ಈ ರಸ್ತೆಯ ವಿಸ್ತರಣೆ ಕಾಮಗಾರಿ ನಡೆಯಬೇಕೆಂಬ ಬಹು ಜನರ ಬೇಡಿಕೆಯಂತೆ ಬೆಳ್ಮಣ್‌ನಿಂದ ಇದೀಗ ಜಂತ್ರದವರೆಗೆ ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ.
ರಸ್ತೆ ಅಭಿವೃದ್ಧಿಯಾಗಬೇಕಾದುದು ಎಲ್ಲರಿಗೂ ಅಗತ್ಯ. ಆದರೆ ಸಾಲು ಸಾಲು ಮರಗಳು ಧರಾಶಾಹಿಯಾಗಿರುವುದು ಮಾತ್ರ ದುರದೃಷ್ಟಕರ, ರಸ್ತೆ ಅಭಿವೃದ್ಧಿ ಯಾದ ಬಳಿಕ ಮತ್ತೆ ರಸ್ತೆಯ ಇಕ್ಕೆಲಗಳಲ್ಲಿ ನೆರಳು ನೀಡಲು ಗಿಡಗಳನ್ನು ಬೆಳೆಸುವತ್ತ ಅಧಿಕಾರಿಗಳು ಕ್ರಮ ಕೈಗೊಳ್ಳಲಿ ಎನ್ನುವುದೇ ಪ್ರಕೃತಿ ಪ್ರಿಯರ ಆಶಯ.
ಅರಣ್ಯ ಇಲಾಖೆಯ ಅನುಮತಿಯಂತೆ ಸುಮಾರು 42 ಮರಗಳಿಗೆ ಕಡಿಯಲು ಪರವಾನಿಗೆ ಆಗಿದ್ದು ರಸ್ತೆಯ ಅಭಿವೃದ್ಧಿಗಾಗಿ ಮರಗಳನ್ನು ಕಡಿದು ಡಿಪೋಗೆ ಸಾಗಿಸಲಾಗಿದೆ. ಮುಂದೆ ರಸ್ತೆ ವಿಸ್ತರಣೆಗೊಂಡ ಬಳಿಕ ಮತ್ತೆ ಗಿಡಗಳನ್ನು ಬೆಳೆಸುವ ಕ್ರಮ ಕೈಗೊಳ್ಳುತ್ತೇವೆ.-ಪ್ರಕಾಶ್ಚಂದ್ರ ಬೆಳ್ಮಣ್,ಉಪ ವಲಯ ಅರಣ್ಯಾಧಿಕಾರಿ
ರಸ್ತೆಯ ವಿಸ್ತರಣೆ ಸಮಾಧಾನದ ಸಂಗತಿ, ಆದರೆ ರಸ್ತೆಯ ಇಕ್ಕೆಲಗಳ ಶತಮಾನ ಕಂಡ ಮರಗಳಿಗೆ ಕೊಡಲಿಯೇಟು ಸಲ್ಲದು. -ರೋಷನ್ ಜಂತ್ರ, ನಾಗರಿಕ
-ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.