ರಸ್ತೆ ತಿರುವಿನ ಬಂಡೆ ತೆರವು
ಬೆಳ್ಮಣ್-ಶಿರ್ವ ರಸ್ತೆ: ಅಪಘಾತ ವಲಯಕ್ಕೆ ಮುಕ್ತಿ
Team Udayavani, Dec 16, 2019, 5:53 AM IST
ಬೆಳ್ಮಣ್: ಶಿರ್ವ-ಬೆಳ್ಮಣ್ ರಸ್ತೆಯ ಪುನಾರು ಶ್ರೀ ಶಾಸ್ತಾವು ಬ್ರಹ್ಮಲಿಂಗೇಶ್ವರ ದೇವಸ್ಥಾನದ ದ್ವಾರದ ಬಳಿ ತಿರುವಿನಲ್ಲಿ ನಿರಂತರ ಅಪಘಾತ ನಡೆಯುತ್ತಿದ್ದು ಇತ್ತೀಚೆಗೆ ಸೂಡದ ಬೈಕ್ ಸವಾರ ಪ್ರಾಣ ಕಳೆದುಕೊಂಡ ಘಟನೆ ಜೀವಂತವಾಗಿರುವಾಗಲೇ ಈ ತಿರುವಿನ ಅಪಘಾತಕ್ಕೆ ಕಾರಣವಾದ ಬಂಡೆ ತೆರವು ಸಹಿತ ರಸ್ತೆ ವಿಸ್ತರಣೆಯನ್ನು ಸ್ಥಳೀಯ ಸಾಮಾಜಿಕ ಕಳಕಳಿಯ ಜನರು ಸೇರಿ ನಡೆಸಿ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಸ್ಥಳೀಯರಾದ ರಂಜಿತ್ ಕೆ.ಎಸ್. ಹಾಗೂ ಉಮೇಶ್ ಪ್ರಭು ಅವರು ಇತರರ ಸಹಕಾರದಿಂದ ಜೆಸಿಬಿ ಬಳಸಿ ತೊಂದರೆಯಾಗುತ್ತಿ¤ರುವ ತಿರುವಿನ ಬಂಡೆ ತೆರವುಗೊಳಿಸಿ ರಸ್ತೆ ವಿಸ್ತರಣೆ ನಡೆಸಿ ವಾಹನ ಸಂಚಾರ ನಿರಾತಂಕ ಗೊಳಿಸಿದ್ದಾರೆ. ಈ ಸಮಾಜಮುಖೀ ಚಿಂತನೆಗೆ ಜನಾರ್ದನ ತಂತ್ರಿ, ವಿಶ್ವನಾಥ ಪಾಟ್ಕರ್, ಮನೋಜ್, ಮಾಧವ ಪ್ರಭು, ರೋನಿ ಫೆರ್ನಾಂಡಿಸ್, ವಾದಿರಾಜ ಉಡುಪ, ಜಯರಾಮ ಪ್ರಭು, ಕೇಶವ ಆಚಾರ್ಯ, ಶಿವಾನಂದ ಆಚಾರ್ಯ, ಶಶಿಧರ ನಾಯಕ್, ವೆಂಕಟರಮಣ ಪ್ರಭು, ಸುಬ್ರಹ್ಮಣ್ಯ ಮಾಸ್ಟರ್, ಶಾಂತಾ ತಂತ್ರಿ, ಉಷಾ ನಾಯಕ್, ಹೆನ್ರಿ ಮಥಾಯಸ್, ಸುಸಾಂತ್,ಜಿ.ಕೆ. ನಾಯಕ್ ಕೈ ಜೋಡಿಸಿದ್ದರು.
ಮುಂದಿನ ದಿನಗಳಲ್ಲಿ ಈ ಭಾಗದ ಬಸ್ ಚಾಲಕರು ಪ್ರಯಾಣಿಕರನ್ನು ಹತ್ತಿ ಇಳಿಸುವಾಗ ಈ ಜಂಕ್ಷನ್‌ನಲ್ಲಿ ಡಾಮರು ರಸ್ತೆ ಬಿಟ್ಟು ನಿಲ್ಲಿಸಿ ಇತರ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಡಬೇಕೆಂದು ಇಲ್ಲಿನ ಸಂಘಟಕರು ವಿನಂತಿಸಿದ್ದಾರೆ.
ಈ ಭಾಗದ ಸಾಮಾಜಿಕ ಕಳಕಳಿಯ ಚಿಂತನೆಗೆ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.