ಬೆಳ್ಮಣ್: ಹೇಗಿದ್ದ ಬಾವಿ ಹೇಗಾಯ್ತು !
Team Udayavani, Mar 12, 2019, 1:00 AM IST
ಬೆಳ್ಮಣ್: 1954ರಲ್ಲಿ ನಿರ್ಮಾಣಗೊಂಡು ಇಂದಿನವರೆಗೆ ಬೆಳ್ಮಣ್ ಪರಿಸರದ ಜನರಿಗೆ ನೀರುಣಿಸುತ್ತಿದ್ದ ಸಾರ್ವಜನಿಕ ಬಾವಿಯೊಂದು ಪಾಳು ಬಿದ್ದು ಪೊದೆಯಿಂದಾವೃತಗೊಂಡ ಬಗ್ಗೆ ಉದಯವಾಣಿ ಸಚಿತ್ರ ವರದಿ ಪ್ರಕಟಿಸಿದ್ದ ಬೆನ್ನಲ್ಲೇ ಸ್ಪಂದಿಸಿದ ಇಲ್ಲಿನ ರೋಟರಿ ಸೇವಾ ಸಂಸ್ಥೆ ಬಾವಿಗೆ ಮರು ಜೀವ ನೀಡಿದೆ.
ಕಾಯಕಲ್ಪ ನೀಡಿದ ಬೆಳ್ಮಣ್ ರೋಟರಿ
ಅಂತಾರಾಷ್ಟ್ರೀಯ ಸೇವಾ ಸಂಸ್ಥೆಗಳು ಕೇವಲ ಶ್ರೀಮಂತರ ಸಂಸ್ಥೆಯೆಂಬ ಅಪವಾದವಿರುವ ಈ ಕಾಲಘಟ್ಟದಲ್ಲಿ ಬೆಳ್ಮಣ್ ರೋಟರಿ ಇದಕ್ಕೆ ಅಪವಾದ ಎಂಬಂತೆ ಹತ್ತು ಹಲವು ಜನೋಪಯೋಗಿ ಕೆಲಸಗಳನ್ನು ಮಾಡುವ ಮೂಲಕ ಮನೆ ಮಾತಾಗಿದೆ. ಹಲವಾರು ವರ್ಷಗಳ ಹಿಂದೆ ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಿದ ಈ ಬಾವಿ ಹುಲ್ಲು ಪೊದೆಗಳಿಂದ ಆವೃತಗೊಂಡ ಬಗ್ಗೆ ಉದಯವಾಣಿ ನೀಡಿದ ಸಮಗ್ರ ವರದಿಗೆ ತಕ್ಷಣ ಸ್ಪಂದಿಸಿದ ರೋಟರಿ ಅಖಾಡಕ್ಕಿಳಿದು ಬಾವಿಯ ಸ್ವರೂಪವನ್ನು ಬದಲಾಯಿಸಿದೆ. ಪಂ. ನೆರವು ಪಡೆದು ಅದಕ್ಕೆ ಹೊಸ ಸ್ವರೂಪವನ್ನು ನೀಡಿದೆ.
ಹೊಸ ಬಣ್ಣ
ಹುಲ್ಲು ಪೊದೆಗಳನ್ನು ತೆರವು ಮಾಡಿ ಬಾವಿಯನ್ನು ಸುಂದರಗೊಳಿಸಿ ಬಣ್ಣವನ್ನು ಬಳಿದು ಸುಂದರವಾಗಿಸಿದ್ದಾರೆ. ಬಾವಿಯಲ್ಲಿ ನೀರಿನ ಮಟ್ಟವೂ ಇರುವ ಕಾರಣ ಮುಂದಿನ ದಿನದಲ್ಲಿ ಬಾವಿಯ ನೀರನ್ನು ಶುದ್ಧೀಕರಿಸಿ ಸಾರ್ವಜನಿಕರ ಉಪಯೋಗಕ್ಕೆ ಹಾಗೂ ಸಮೀಪದಲ್ಲೇ ನಿರ್ಮಾಣಗೊಂಡ ಸಾರ್ವಜನಿಕ ಪಾರ್ಕಿಂಗ್ ವ್ಯವಸ್ಥೆಗೂ ಬಳಸುವ ಯೋಚನೆಯನ್ನು ಪಂ. ಹಾಗೂ ರೋಟರಿ ಸಂಸ್ಥೆ ಹಮ್ಮಿಕೊಂಡಿದೆ.
ಸಾರ್ವಜನಿಕ ಉಪಯೋಗಕ್ಕೆ
ಹುಲ್ಲು ಪೊದೆಗಳಿಂದ ತುಂಬಿದ್ದ ಈ ಬಾವಿಯನ್ನು ನಾವು ಬೆಳ್ಮಣ್‌ಗೆ ಪಾರ್ಕಿಂಗ್ ವ್ಯವಸ್ಥೆ ಮಾಡುವ ಸಂದರ್ಭದಲ್ಲಿ ಶುಚಿಗೊಳಿಸಿ ಸುಂದರವಾಗಿಸಿದ್ದೇವೆ. ಮುಂದಿನ ದಿನದಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಬರುವಲ್ಲಿ ಶ್ರಮಿಸುತ್ತೇವೆ.
-ರನೀಶ್ ಆರ್ .ಶೆಟ್ಟಿ, ಬೆಳ್ಮಣ್ ರೋಟರಿ ಅಧ್ಯಕ್ಷ
ಬೆಂಬಲ ಇದೆ
ಬೆಳ್ಮಣ್ ರೋಟರಿಯ ಜನ ಸೇವೆಗೆ ಅಭಿನಂದನೆಗಳು, ಮುಂದೆಯೂ ಪಂಚಾಯತ್ ಜತೆ ನಡೆಸುವ ಕೆಲಸಗಳಿಗೆ ಬೆಂಬಲ ಇದೆ.
-ವಾರಿಜಾ ಸಾಲ್ಯಾನ್, ಬೆಳ್ಮಣ್ ಪಂಚಾಯತ್ ಅಧ್ಯಕ್ಷೆ
ಶ್ಲಾಘನೀಯ ಕಾರ್ಯ
ಬಾವಿಯ ನೀರನ್ನು ಶುಚಿಗೊಳಿಸಿದ್ದಲ್ಲಿ ಮತ್ತೆ ಉಪಯೋಗಕ್ಕೆ ಬರುವ ಸಾಧ್ಯತೆಗಳಿಗೆ ಈ ಭಾಗದ ಒಂದಿಷ್ಟು ಮನೆಗಳಿಗೆ ಕುಡಿಯುವ ನೀರಿಗಾಗಿ ಉಪಯೋಗಕ್ಕೂ ಬರಲಿದೆ. ಹೊಸ ಬಾವಿಯೊಂದನ್ನು ನಿರ್ಮಿಸಲು ಲಕ್ಷಾಂತರ ರೂ. ಖರ್ಚು ಮಾಡಬೇಕಾಗಿದ್ದು ಇಲ್ಲಿ ಪಾಳು ಬಿದ್ದಿದ್ದ ಈ ಹಳೆಯ ಬಾವಿಗೆ ಮರು ಜೀವ ನೀಡಿದ ರೋಟರಿ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ. ಕೇವಲ ಪ್ರಶಸ್ತಿಗಳಿಗಾಗಿ ಫೋಟೋಗಳಿಗೆ ಫೋಸ್ ನೀಡಿ ಸುದ್ದಿಯಾಗುವ ಸಂಘ ಸಂಸ್ಥೆಗಳ ನಡುವೆ ಬೆಳ್ಮಣ್ ರೋಟರಿ ಜನರ ಮನಸ್ಸಿನಲ್ಲಿ ಉಳಿಯುವಂತಹ ಇಂತಹ ಬಹುತೇಕ ಚಟುವಟಿಕೆಗಳನ್ನು ನಡೆಸುತ್ತಿರುವುದೂ ಸ್ತುತ್ಯರ್ಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಡಂಪಿಂಗ್ ಯಾರ್ಡ್ ಆದ ಮಣ್ಣಪಳ್ಳ!
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Trasi: ಸಾಂಪ್ರದಾಯಿಕ ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ, ಗೋಪಾಲ ಪೂಜಾರಿ ಭಾಗಿ
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.