ಬೆಳ್ಮಣ್: ಎಲೆಕ್ಟ್ರಾನಿಕ್ಸ್ ಅಂಗಡಿ ದೋಚಿದ ಕಳ್ಳರು
Team Udayavani, Feb 27, 2019, 1:00 AM IST
ಬೆಳ್ಮಣ್: ನಂದಳಿಕೆ ಕ್ರಾಸ್ ಬಳಿಯ ಗುಡ್ವಿಲ್ ಎಂಟರ್ಪ್ರೈಸಸ್ನ ಶಟರ್ ಮುರಿದು 18 ಟಿವಿ ಹಾಗೂ ಕ್ಯಾಶ್ ಕೌಂಟರ್ನಲ್ಲಿದ್ದ ಸುಮಾರು 3000 ರೂ.ನಗದು ದೋಚಿ ಪರಾರಿಯಾದ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ. ಶ್ರೀಧರ್ ಮಾಲಕತ್ವದ ಈ ಅಂಗಡಿಯಲ್ಲಿ ಎಲೆಕ್ಟ್ರಾನಿಕ್ಸ್ ಉಪಕರಣಗಳಿದ್ದು ಮಾಲಕರ ಮನೆ ಈ ಅಂಗಡಿಯ ಮೇಲ್ಛಾವಣಿ ಯಲ್ಲಿದ್ದರೂ ಕಳ್ಳತನದ ಮಾಹಿತಿ ಬೆಳಗ್ಗೆ ಪೇಪರ್ ಹಾಕುವವರಿಂದಲೇ ತಿಳಿದು ಬಂತು.
ಹಾರ್ಡ್ ಡಿಸ್ಕ್ ಕದ್ದೊಯ್ದರು
ಸುಮಾರು ಬೆಳಗಿನ ಜಾವ 3ರಿಂದ 4 ಗಂಟೆಯ ಹೊತ್ತಿಗೆ ಈ ಘಟನೆ ಸಂಭವಿಸಿದೆ ಎನ್ನಲಾಗಿದ್ದು ಕಳ್ಳರು ಅಂಗಡಿಯ ಹೊರಗಿನ ಹಾಗೂ ಒಳಗಿನಸಿಸಿ ಕೆಮರಾ ಪಾಯಿಂಟ್ಗಳನ್ನು ತಿರುಗಿಸಿದ್ದು ಅಂಗಡಿಯ ಒಳಗಡೆ ಇರಿಸಲಾದ ಸಿಸಿ ಕೆಮರಾದ ಹಾರ್ಡ್ ಡಿಸ್ಕನ್ನು ಕದ್ದೊಯ್ದಿದ್ದಾರೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಎಸ್ಪಿ ಕೃಷ್ಣಕಾಂತ್, ವೃತ್ತ ನಿರೀಕ್ಷಕ ಹಾಲಮೂರ್ತಿ, ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ನಾಸಿರ್ ಹುಸೇನ್, ಡಿಸಿಐಬಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಬೆರಳಚ್ಚು ñಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ.
ನಾಮಫಲಕ ಅಡ್ಡ
ಗುಡ್ವಿಲ್ ಅಂಗಡಿಯ ಮೇಲ್ಮಹಡಿಯಲ್ಲಿ ನಂದಳಿಕೆ ಗ್ರಾಮ ಪಂಚಾಯತ್ನ ಆಡಳಿತ ಕಚೇರಿಯಿದ್ದು ಇಲ್ಲಿನ ಸಿಸಿ ಕೆಮರಾಗೆ ಪಂಚಾಯತ್ನ ಬೋರ್ಡ್ ಅಡ್ಡವಾಗಿದ್ದದ್ದು ಕಳ್ಳರಿಗೆ ವರದಾನವಾಯಿತು. ಈ ಮೂಲಕ ಪಂಚಾಯತ್ನ ಸಿಸಿ ಕೆಮರಾ ಇದ್ದೂ ಇಲ್ಲದಂತಾಯಿತು,
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್ನಿಂದ ಲಾಂಚ್
PM Modi Gifts: 2023ರಲ್ಲಿ ಬೈಡನ್ ಪತ್ನಿ ಜಿಲ್ ಅವರಿಗೆ ಮೋದಿ 17 ಲಕ್ಷದ ಉಡುಗೊರೆ
Congress;ಸಂಪುಟ,ಕೆಪಿಸಿಸಿ ಯಥಾಸ್ಥಿತಿ? ಬಜೆಟ್ ಅಧಿವೇಶನ, ಪಂ.ಚುನಾವಣೆ ಬಳಿಕ ಚುರುಕು?
KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !
Mangaluru; ಸಾಮಾನ್ಯ ಸ್ಥಳದಲ್ಲಿ ಬಿಲ್ಡರ್ ಹಕ್ಕು ಸಾಧಿಸುವಂತಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.