ಬೇಳೂರು: ಕೃಷಿಕ ನಾಪತ್ತೆ; ನೀರುಪಾಲು ಶಂಕೆ
Team Udayavani, Jul 3, 2018, 9:07 AM IST
ತೆಕ್ಕಟ್ಟೆ: ಬೇಳೂರು ಗ್ರಾ.ಪಂ. ವ್ಯಾಪ್ತಿಯ ದೇಲಟ್ಟು ತೆಂಕಬೆಟ್ಟು ಗ್ರಾಮದ ಕೃಷಿಕ ಸೋಮ ಪೂಜಾರಿ (70) ಸೋಮವಾರ ಬೆಳಗ್ಗೆ 10 ಗಂಟೆಗೆ ದನಕ್ಕೆ ಹುಲ್ಲು ತರಲು ಹೋದವರು ನಾಪತ್ತೆಯಾಗಿದ್ದಾರೆ. ಅವರು ಹೊಳೆಗೆ ಬಿದ್ದು ನೀರುಪಾಲಾಗಿರಬಹುದು ಎಂದು ಶಂಕಿಸಿ ಸ್ಥಳೀಯರು ಹಾಗೂ ಅಗ್ನಿಶಾಮಕದಳದ ನೇತೃತ್ವದಲ್ಲಿ ಹುಡುಕಾಟ ನಡೆಸಲಾಯಿತು. ಸೋಮ ಪೂಜಾರಿ ಅವರು ಹಲವು ವರ್ಷಗಳಿಂದ ನಿವೃತ್ತ ಮುಖ್ಯೋಪಾಧ್ಯಾಯ ಸಂಜೀವ ಶೆಟ್ಟಿ ಅವರ ಮನೆಯಲ್ಲೇ ನೆಲೆಸಿ ಕೃಷಿ ಕಾರ್ಯಗಳಲ್ಲಿ ತೊಡಗಿದ್ದರು. ಬೇಳೂರಿನ ಸಣ್ಣ ಹೊಳೆಯ ಸೇತುವೆಯ ಮಧ್ಯಭಾಗ ಮುರಿದಿದ್ದು, ಅದರಲ್ಲೇ ಸೋಮ ಪೂಜಾರಿ ಹುಲ್ಲಿಗೆ ಹೋಗಿದ್ದರು.
ತೇಲಿ ಬಂದ ಮುಟ್ಟಾಳೆ
ಸಮೀಪದ ಗದ್ದೆಯಲ್ಲಿ ನಾಟಿ ಮಾಡುತ್ತಿದ್ದವರು ಹೊಳೆಯಲ್ಲಿ ತೇಲಿ ಬರುತ್ತಿದ್ದ ಮಂಡೆ ಹಾಳೆ (ಮುಟ್ಟಾಳೆ ) ಹಾಗೂ ಹಸಿ ಹುಲ್ಲಿನ ಕಟ್ಟನ್ನು ಕಂಡು ಗಮನಕ್ಕೆ ತಂದರು.
ವ್ಯಾಪಕ ಶೋಧ
ಪಾತಾಳ ಗರಡಿಯನ್ನು ಬಳಸಿ ಹೊಳೆಯನ್ನು ಶೋಧಿಸಿದರೂ ಪ್ರಯೋಜನವಾಗಲಿಲ್ಲ. ಅನಂತರ ಅಗ್ನಿಶಾಮಕ ದಳದ ಸಿಬಂದಿ ನಾಗರಾಜ್ ಹಾಗೂ ಸ್ಥಳೀಯ ಯುವಕರಾದ ರಕ್ಷಿತ್, ಸುಮಂತ್, ವಿಜಯ, ಮನೀಶ್ ಹೊಳೆಗೆ ಧುಮುಕಿ ಸುಮಾರು ಎರಡು ಕಿ.ಮೀ. ವರೆಗೆ ಶೋಧ ನಡೆಸಿದರು. ಹೊಳೆಯ ಆಳ ಹಾಗೂ ನೀರಿನ ಹರಿವಿನ ಪ್ರಮಾಣ ಅಧಿಕವಾಗಿರುವ ಕಾರಣ ಅನುಭವಿ ಈಜುಗಾರರು ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಶೋಧಿಸಬೇಕಾದ ಪರಿಸ್ಥಿತಿ ಎದುರಾಗಿದೆ. ದೇಲಟ್ಟಿನ ಕಿಂಡಿ ಅಣೆಕಟ್ಟಿಗೆ ಅಡ್ಡಲಾಗಿ ಮರದ ಕೊಂಬೆ ಕಡಿದು, ಕಾರ್ಯಾಚರಣೆ ಮೊಟಕುಗೊಳಿಸಿದರು.
ಎಚ್ಚರಿಸಿದ್ದ ವೃದ್ಧ
ಕೆಲವು ತಿಂಗಳ ಹಿಂದೆ ಉದಯವಾಣಿ ಪ್ರತಿನಿಧಿಯು ಸೇತುವೆಯ ಬಗ್ಗೆ ವರದಿಗೆ ತೆರಳಿದ್ದಾಗ ಇದೇ ಹಿರಿಯ ಕೃಷಿಕ ಸೋಮ ಪೂಜಾರಿ ಅವರು ಸೇತುವೆ ಶಿಥಿಲಗೊಂಡಿರುವ ಬಗ್ಗೆ “ಸೇತುವೆ ಒಂದ್ ಮುರ್ದ್ ಹೋಯಿ ಬಾರಿ ತೊಂದ್ರಿ ಆಯ್ತ್. ಜೀವ ಕೈಯಂಗ್ ಹಿಡ್ಕಂಡ್ ಹೊಳಿ ದಾಟು ಪರಿಸ್ಥಿತಿ ಬಂದಿತ್!’ ಎಂದಿದ್ದರು.
ತಹಶೀಲ್ದಾರ್ ಭೇಟಿ
ಕುಂದಾಪುರದ ಪ್ರಭಾರ ತಹ ಶೀಲ್ದಾರ್ ಕಿರಣ್ ಗೌರಯ್ಯ, ಕೋಟ ಪೊಲೀಸ್ ಸಹಾಯಕ ನಿರೀಕ್ಷಕ ಆನಂದ ವೆಂಕಟ್, ಕಂದಾಯ ನಿರೀಕ್ಷಕ ನರಸಿಂಹ ಕಾಮತ್, ಗ್ರಾಮ ಲೆಕ್ಕಿಗ ಪ್ರಕಾಶ್, ಬಸ್ರೂರು ಗ್ರಾ.ಪಂ. ಸದಸ್ಯ ಬೇಳೂರು ದಿನಕರ ಶೆಟ್ಟಿ, ಸುರೇಶ್ ಹೆಮ್ಮಾಡಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.