ಗೋಳಿಯಂಗಡಿ – ತೊಂಭತ್ತು ರಸ್ತೆ ಬದಿ ತ್ಯಾಜ್ಯ ರಾಶಿ
ಬೆಳ್ವೆ ಗ್ರಾಮ ಪಂಚಾಯತ್
Team Udayavani, Mar 13, 2020, 5:24 AM IST
ಗೋಳಿಯಂಗಡಿ: ಕೆಲ ವರ್ಷಗಳ ಹಿಂದೆ ಹಚ್ಚ – ಹಸುರುನಿಂದ ಕೂಡಿದ್ದ ಬೆಳ್ವೆ ಗ್ರಾ.ಪಂ. ವ್ಯಾಪ್ತಿಯ ಗೋಳಿಯಂಗಡಿಯಿಂದ ತೊಂಭತ್ತು ಕಡೆಗೆ ಸಂಚರಿಸುವ ರಸ್ತೆಯ ಮಕ್ಕಳ್ ಕೋಟಿ ಆಣಿ ಪ್ರದೇಶವೀಗ ಕಸ ಬಿಸಾಡುವ ಜಾಗವಾಗಿ ಪರಿವರ್ತನೆಗೊಂಡಿದೆ.
ಬೆಳ್ವೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗೋಳಿಯಂಗಡಿ ಪೇಟೆಯಿಂದ 150 ಮೀ. ಸಾಗಿ ಎಡಕ್ಕೆ ತಿರುವು ತೆಗೆದುಕೊಂಡು ಮುಂದೆ 100 ಮೀ. ಹೋಗಿ ಬಲಕ್ಕೆ ತಿರುಗಿದರೆ ರಸ್ತೆಯ ಬದಿಯಲ್ಲಿ ಈ ಜಾಗ ಕಾಣಸಿಗುತ್ತದೆ. ಈ ಜಾಗಕ್ಕೆ ಮಕ್ಕಳ್ ಕೋಟಿ ಅಣಿ ಎಂದು ಕರೆಯುತ್ತಾರೆ. ಕಡಿದಾದ ಇಳಿಜಾರಿನಿಂದ ಕೂಡಿದ ತಿರುವು ಇದ್ದು, ಮುಂದೆ ಸಾಗಿದರೆ ತೊಂಭತ್ತು, ಹೆಂಗವಳ್ಳಿ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಇದಾಗಿದೆ.
ಈ ಜಾಗವು ಎಲ್ಲಿಯೂ ಕೂಡ ಒಂದು ಪ್ಲಾಸ್ಟಿಕ್ ಚೂರು ಸಿಗದ ಸುಂದರ ಜಾಗವಾಗಿತ್ತು. ಆದರೆ ಬರು ಬರುತ್ತ ಪ್ಲಾಸ್ಟಿಕ್ ಬಳಕೆ ಹೆಚ್ಚಾದಂತೆ, ಕಸ ವಿಲೇವಾರಿಗೆ ಸೂಕ್ತ ಸ್ಥಳವೆಂದು ತಿಳಿದ ಜನರು ತಮ್ಮ ಮನೆಯ ಕಸ, ಅಂಗಡಿಯ ತ್ಯಾಜ್ಯ, ಕಸ ಮುಂತಾದವುಗಳನ್ನು ಇಲ್ಲಿ ತಂದು ಸುರಿದು ಅಕ್ಷರಶಃ ಡಂಪಿಂಗ್ ಯಾರ್ಡ್ ರೀತಿ ಮಾಡಿದ್ದಾರೆ. ಕೆಲವರು ಬೆಳಗ್ಗಿನ ವೇಳೆಯಲ್ಲಿ ಬಂದು ಕಸ ಎಸೆದು ಹೋಗುತ್ತಿದ್ದರೆ, ಕೆಲವರು ಸಂಜೆ ವೇಳೆ ವಾಹನದಲ್ಲಿ ಬಂದು ಇಲ್ಲಿ ಕಸ ಎಸೆದು ಹೋಗುತ್ತಿದ್ದಾರೆ. ಕೆಲ ಅಂಗಡಿಯವರು ಕೂಡ ಇಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ ಎನ್ನುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಇದರ ಬಗ್ಗೆ ಸಂಬಂಧಪಟ್ಟ ಯಾವುದೇ ಆರೋಗ್ಯ ಅಧಿಕಾರಿಗಳು, ಪಂಚಾಯತ್ ಸದಸ್ಯರು, ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಕಸ ಎಸೆಯ ಬೇಡಿ ಅನ್ನುವ ಸೂಚನ ಫಲಕ ಸಹ ಅಳವಡಿಸಿಲ್ಲ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು, ಸ್ಥಳೀಯಾಡಳಿತ ಸಂಸ್ಥೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
“ಸೂಕ್ತ ಕ್ರಮಕೈಗೊಳ್ಳಲಿ’
ಈ ಪ್ರದೇಶವು ಪ್ರಸ್ತುತ ಪ್ಲಾಸ್ಟಿಕ್, ಬಿಯರ್ ಬಾಟಲ್ ಮುಂತಾದ ಅನುಪಯುಕ್ತ ವಸ್ತುಗಳಿಂದ ಕೂಡಿದ ಸ್ಥಳವಾಗಿದೆ. ಜೋರಾದ ಗಾಳಿ ಬೀಸಿದರೆ ಗಾಳಿಗೆ ಪ್ಲಾಸ್ಟಿಕ್ ಹಾರಿ ಹೋಗಿ ತಗ್ಗು ಪ್ರದೇಶಗಳಲ್ಲಿ ಬೀಳುತ್ತದೆ. ಮೇವು ಅರಸಿ ಬರುವ ಜಾನುವಾರುಗಳಿಗೆ ಈ ಜಾಗವು ಕಂಟಕಪ್ರಾಯವಾಗಿದೆ. ಇಲ್ಲಿ ಕಸ ಎಸೆಯದಂತೆ ಸ್ಥಳೀಯಾಡಳಿತ ಸಂಸ್ಥೆಯು ಸೂಕ್ತ ಕ್ರಮವನ್ನು ಕೈಗೊಳ್ಳಲಿ.
– ಸುರೇಶ್ ಹೆಂಗವಳ್ಳಿ, ಸ್ಥಳೀಯರು
“ಪರಿಶೀಲನೆ ನಡೆಸಲಾಗುವುದು’
ಈ ಬಗ್ಗೆ ಪಂಚಾಯತ್‌ಗೆ ಯಾವುದೇ ಮಾಹಿತಿಯಿಲ್ಲ. ಈವರೆಗೆ ಗ್ರಾಮಸ್ಥರಿಂದ ಯಾವುದೇ ದೂರುಗಳು ಬಂದಿಲ್ಲ. ಕೂಡಲೇ ಪರಿಶೀಲನೆ ನಡೆಸಲಾಗುವುದು. ಬೆಳ್ವೆ, ಅಲಾºಡಿ, ಮಡಾಮಕ್ಕಿ 3 ಗ್ರಾಮಗಳನ್ನೊಳಗೊಂಡ ತ್ಯಾಜ್ಯ ವಿಲೇವಾರಿ ಘಟಕ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಸದ್ಯ ತಾತ್ಕಲಿಕವಾಗಿ ಆರಂಭಿಸಲಾಗಿದೆ.
– ಪ್ರಭಾಶಂಕರ್ ಪುರಾಣಿಕ್, ಪಿಡಿಒ, ಬೆಳ್ವೆ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು
Cooking Oil: ಅಡುಗೆ ಎಣ್ಣೆ ಆಮದು ಸವಾಲು
National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.