ಮಣಿಪಾಲದ ವಿದ್ಯಾರ್ಥಿನಿಗೆ “ಬೆಸ್ಟ್ ಪೋಸ್ಟರ್ ಅವಾರ್ಡ್’
Team Udayavani, Jul 14, 2017, 3:35 AM IST
ಉಡುಪಿ: ಮಣಿಪಾಲ ವಿಶ್ವವಿದ್ಯಾನಿಲಯದ ಮಣಿಪಾಲ ಕಾಲೇಜ್ ಆಫ್ ಫಾರ್ಮಾಸುಟಿಕಲ್ ಸೈನ್ಸ್ನ ವಿದ್ಯಾರ್ಥಿನಿ ಸಂಗೀತಾ ಅಯ್ಯರ್ ಅವರು ಸ್ವೀಡನ್ನಲ್ಲಿ ನಡೆದ ಯುರೋ ಹಾರ್ಟ್ ಕೇರ್ – 2017 ಸ್ಪರ್ಧೆಯಲ್ಲಿ “ಬೆಸ್ಟ್ ಪೋಸ್ಟರ್ ಅವಾರ್ಡ್’ ಪಡೆದುಕೊಂಡಿದ್ದಾರೆ.
ಸಂಗೀತಾ ಅವರು ಭಾರತವನ್ನು ಪ್ರತಿನಿಧಿಸಿದ್ದು, ಇಂಗ್ಲೆಂಡ್, ಅಮೆರಿಕ, ಜಪಾನ್, ರಷ್ಯಾ, ನೆದರ್ಲೆಂಡ್, ಪೋರ್ಚುಗಲ್, ಸ್ಪೇನ್, ಟರ್ಕಿ ಸಹಿತ ಹತ್ತಕ್ಕೂ ಹೆಚ್ಚು ದೇಶಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.ಅವರು ಹೃದ್ರೋಗ ಕಾಯಿಲೆ (ಪ್ರಿವೆಂಟಿವ್ ಕಾರ್ಡಿಯಾಲಜಿ) ಸಂಬಂಧ ಸಮು ದಾಯದಲ್ಲಿ ಮುಂಚಿತ ಪರಿ ಹಾರ ಮಾರ್ಗ ಕೈಗೊಳ್ಳುವ ಕುರಿತು ಅಧ್ಯಯನ ನಡೆಸಿದ್ದರು. ಅದಲ್ಲದೆ ಸಂಗೀತಾ ಅವರು ಸ್ವೀಡನ್ನಲ್ಲಿ ನಡೆದ 6ನೇ ಫಾರ್ಮಾಸುÂಟಿಕಲ್ ಸೈನ್ಸಸ್ ವರ್ಲ್ಡ್ ಕಾಂಗ್ರೆಸ್ನಲ್ಲಿ ಭಾಗಿಯಾಗಿದ್ದು, ಅಲ್ಲಿ ಯುವ ವಿಜ್ಞಾನಿ ಟ್ರಾವೆಲ್ ಸ್ಕಾಲರ್ಶಿಪ್ ಪಡೆದಿದ್ದರು. ಭಾರತದ ಖ್ಯಾತ ಹೃದ್ರೋಗ ತಜ್ಞ ಡಾ| ರಂಜನ್ ಶೆಟ್ಟಿ ಕೆ. ಅವರ ಪ್ರಾಜೆಕ್ಟನ್ನುಕೂಡ ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದ ಬಳಿಕ ಪ್ರತಿಕ್ರಿಯಿಸಿದ ಸಂಗೀತಾ ಅವರು ನನ್ನ ಸಾಧನೆಗೆ ಹೆತ್ತವರು ಸದಾ ಸಹಕಾರ ನೀಡುತ್ತಿದ್ದು, ಸ್ನೇಹಿತರು, ಪ್ರಾಧ್ಯಾಪಕರು ಸಹಕರಿಸಿದ್ದಾರೆ. ವಿದ್ಯಾ ಸಂಸ್ಥೆಗಳು ಶಿಕ್ಷಣ ಹಾಗೂ ಸಂಶೋಧನೆಗೆ ಹೆಚ್ಚು ಮಹತ್ವ ಕೊಡಬೇಕು. ಯುವ ವಿಜ್ಞಾನಿಗಳು ಬೇರೆಡೆ ಗಮನ ಕೇಂದ್ರೀಕರಿಸದೆ ಒಂದೇ ವಿಷಯದತ್ತ ಅಧ್ಯಯನಶೀಲ ರಾಗಿರಬೇಕು ಎಂದವರು ಕರೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.