ಅತ್ಯುತ್ತಮ ಶಿಕ್ಷಕ ಪ್ರಶಸ್ತಿ: ಸತ್ಯ ಸಾಯಿ ಪ್ರಸಾದ್ ರಿಗೆ ನಾಗರಿಕ ಸಮಿತಿಯಿಂದ ಅಭಿನಂದನೆ
Team Udayavani, Sep 5, 2022, 9:13 PM IST
ಶಿರ್ವ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸರಕಾರಿ ಪ್ರಾರ್ಥಮಿಕ ಶಾಲೆ ರಾಜೀವ ನಗರ ಉಡುಪಿ ಇಲ್ಲಿಯ ಹಿರಿಯ ಶಿಕ್ಷಕ ಶ್ರೀ ಸತ್ಯ ಸಾಯಿ ಪ್ರಾಸಾದ್ ಬಂಟಕಲ್ಲು ಇವರು ಶಿಕ್ಷಕರ ದಿನಾಚರಣೆಯ ಸಂಧರ್ಭದಲ್ಲಿ ಅತ್ಯುತ್ತಮ ಶಿಕ್ಷಕ, ಜಿಲ್ಲಾ ಪ್ರಶಸ್ತಿ ಪಡೆದಿರುತ್ತಾರೆ. ಈ ಸಂಧರ್ಭ ಇವರನ್ನು ನಾಗರಿಕ ಸೇವಾ ಸಮಿತಿ ರಿ. ಬಂಟಕಲ್ಲು ಇವರು ಶಿಕ್ಷಕ ಸತ್ಯ ಸಾಯಿ ಪ್ರಸಾದ್ ರವರ ಮನೆಯಲ್ಲಿ ಸನ್ಮಾನಿಸಿ ಅಭಿನಂದಿಸಿದರು.
ಸಮಿತಿ ಅಧ್ಯಕ್ಷ ಕೆ.ಆರ್. ಪಾಟ್ಕರ್ ರವರು ಪ್ರಸಾದ್ ರವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಪೇಟ ತೊಡಿಸಿ ಸನ್ಮಾನಿಸಿ ಅಭಿನಂದಿಸಿ ಈ ನಿಮ್ಮ ಪ್ರಶಸ್ತಿ ನಮ್ಮ ಊರಿಗೆ, ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದ್ದು ಮುಂದೆ ರಾಜ್ಯಪ್ರಶಸ್ತಿ ದೊರೆಯುವಂತಾಗಲಿ ಎಂದು ಶುಭಹಾರೈಸಿದರು.
ಸಮಿತಿಯ ಉಪಾಧ್ಯಕ್ಷರಾದ ಶ್ರೀ ಪುಂಡಲೀಕ ಮರಾಠೆಯವರು ಪ್ರಸಾದ್ ರವರ ಸೇವೆಯನ್ನು ಶ್ಲಾಘಿಸಿ ಶುಭಹಾರೈಸಿದರು. ಇನ್ನೂರ್ವ ಉಪಾಧ್ಯಕ್ಷರಾದ ಮಾಧವ ಕಾಮತ್, ಸಮಿತಿ ಕಾರ್ಯದರ್ಶಿ ದಿನೇಶ್ ದೇವಾಡಿಗ, ಸದಸ್ಯರಾದ ಉಮೇಶ್ ರಾವ್, ಹರೀಶ್ ಹೇರೂರು, ಡೆನಿಸ್ ಡಿ’ ಸೋಜ ಹಾಗೂ ಇಂದಿರಾ ಪ್ರಸಾದ್ ರವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.