ನಿಮಿಷದಲ್ಲಿ ಭಗತ್‌ಸಿಂಗ್ ಚಿತ್ರ ಬಿಡಿಸಿ ವಿಶ್ವ ದಾಖಲೆ
Team Udayavani, Aug 13, 2019, 6:10 AM IST
ಹೆಬ್ರಿ : ಹೆಬ್ರಿ ಚಾಣಕ್ಯ ಚಿತ್ರಕಲಾ ಸಂಸ್ಥೆಯ ಚಿತ್ರಕಲಾ ಶಿಕ್ಷಕರಾಗಿದ್ದ ಮೂಲತಃ ಮೈಸೂರು ನಂದನಹಳ್ಳಿಯ ನಿವಾಸಿ ಪುನೀತ್ ಕುಮಾರ್ ಅವರು ಒಂದು ನಿಮಿಷದಲ್ಲಿ ತಲೆಕೆಳಗಾಗಿ ಭಗತ್ ಸಿಂಗ್ ಅವರ ಚಿತ್ರ ಬಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಸಾಧನೆಯನ್ನು ಜು. 29ರಂದು ನಡೆಸಿದ ದಾಖಲೆ ಕಾರ್ಯಕ್ರಮದಲ್ಲಿ ಗುರುತಿಸಿರುವ ವರ್ಲ್ಡ್ ರೆಕಾರ್ಡ್ ಇಂಡಿಯಾ ಸಂಸ್ಥೆ ಅವರಿಗೆ ವಿಶ್ವ ದಾಖಲೆಯ ಗರಿ ನೀಡಿದೆ.
ಪುನೀತ್ ಅವರು ಪ್ರಾಥಮಿಕ ಶಿಕ್ಷಣ ವನ್ನು ಮೈಸೂರಿನಲ್ಲಿ ಮುಗಿಸಿದ್ದು, ಪಿಯುಸಿಯನ್ನು ಉಡುಪಿ ಪೆರ್ಡೂರು ಸ.ಪ.ಪೂ. ಕಾಲೇಜಿನಲ್ಲಿ ಹಾಗೂ ಪದವಿ ಶಿಕ್ಷಣವನ್ನು ಹಿರಿಯಡಕ ಸರಕಾರಿ ಡಿಗ್ರಿ ಕಾಲೇಜಿನಲ್ಲಿ ಮುಗಿಸಿದ್ದಾರೆ. ಪ್ರಸ್ತುತ ಇವರು ಸಾತಗಳ್ಳಿಯ ಸೇಂಟ್ ಆರ್ನಾಲ್ಡ್ ಸೆಂಟ್ರಲ್ ಸ್ಕೂಲ್‌ನಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪರಿಶ್ರಮದಿಂದ ಯಶಸ್ಸು
ಸಾಧಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ. ನಿರಂತರ ಪರಿಶ್ರಮದಿಂದ ಯಶಸ್ಸು ಕಾಣಲು ಸಾಧ್ಯ ಎನ್ನುವುದಕ್ಕೆ ನಮ್ಮ ಸಂಸ್ಥೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದ ಪುನಿತ್ ಅವರ ಸಾಧನೆಯೇ ಸಾಕ್ಷಿ.
-ವೀಣಾ ಯು.ಶೆಟ್ಟಿ,
ಪ್ರಾಂಶುಪಾಲರು, ಚಾಣಕ್ಯ ಟ್ಯುಟೋರಿಯಲ್ ಕಾಲೇಜು ಹೆಬ್ರಿ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧಿಸುವ ಕನಸು
ನಾನು ಇಂದು ಈ ಮಟ್ಟದಲ್ಲಿ ಯಶಸ್ಸು ಕಾಣಲು ಹೆತ್ತವರ ಪ್ರೋತ್ಸಾಹ, ಗುರುಗಳ ಉತ್ತೇಜನ ಮತ್ತು ನನ್ನ ಕಲೆಯನ್ನು ಗುರುತಿಸಿ ಬೇರೆ ಬೇರೆ ಕಡೆ ಅವಕಾಶ ಕಲ್ಪಿಸಿದ ಹೆಬ್ರಿ ಚಾಣಕ್ಯ ಸಂಸ್ಥೆಯಿಂದ ಸಾಧ್ಯವಾಗಿದೆ. ಇನ್ನಷ್ಟು ಕಡಿಮೆ ಸಮಯದಲ್ಲಿ ಚಿತ್ರಗಳನ್ನು ಬಿಡಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಡಬೇಕು ಎಂಬ ಕನಸಿದೆ.
-ಪುನಿತ್ ಎಸ್., ವಿಶ್ವದಾಖಲೆ ನಿರ್ಮಿಸಿದ ಚಿತ್ರಕಲಾವಿದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.