ನಿತ್ಯ ಭಜನೆಯಿಂದ ನೆಮ್ಮದಿ: ಕಾಶೀ ಶ್ರೀ
Team Udayavani, Mar 17, 2017, 12:24 PM IST
ತೆಕ್ಕಟ್ಟೆ: ದೇವರನ್ನು ಮೆಚ್ಚಿಸುವ ಸಾಧನವೇ ಭಜನೆ. ನಿತ್ಯ ಭಜನೆಯ ಮೂಲಕ ದೇವರನ್ನು ಸ್ಮರಿಸುವು ದರಿಂದ ಜೀವನದಲ್ಲಿ ನೆಮ್ಮದಿ ಹಾಗೂ ಸಮೃದ್ಧಿ ದೊರೆಯುವುದು. ಈ ಹಿನ್ನೆಲೆಯಲ್ಲಿ ಗುರುಗಳ ಕೃಪೆಯಿಂದ ತೆಕ್ಕಟ್ಟೆ ಪೇಟೆಯಲ್ಲಿ ಸಮಾಜ ಬಾಂಧವರು ಅಭಿವೃದ್ಧಿ ಹೊಂದಿದ್ದು ಮುಂದೆಯೂ ಸಮಾ
ಜದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುತ್ತ ಮುನ್ನಡೆಯುವಂತಾಗಲಿ ಎಂದು ಶ್ರೀ ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ನುಡಿದರು.
ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರು ನೂತನವಾಗಿ ನಿರ್ಮಿಸಿರುವ ಶ್ರೀ ಸುಧೀಂದ್ರ ತೀರ್ಥ ಭಜನಾ ಮಂದಿರ ಹಾಗೂ ಶ್ರೀ ಸುಧೀಂದ್ರ ಸಭಾ ಭವನವನ್ನು ಗುರುವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಚೇಂಪಿ ವೆಂಕಟರಮಣ ದೇವಸ್ಥಾನ ಕೂಡುಕೂಟದ ವ್ಯಾಪ್ತಿಗೆ ಬರುವ ಹಾಗೂ ಚೇಂಪಿ ಹಾಗೂ ಕೋಟ ಶ್ರೀ ಕಾಶೀ ಮಠದ ಧಾರ್ಮಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ತೆಕ್ಕಟ್ಟೆ ಸಮಾಜ ಬಾಂಧವರು ಮುಂದೆಯೂ ಅಲ್ಲಿನ ಸಂಬಂಧ ಎಂದಿನಂತೆ ಮುಂದುವರಿಸಿಕೊಂಡು ಬರಬೇಕು. ಶ್ರೀ ವೆಂಕಟರಮಣ ಹಾಗೂ ವಿಠಲ ದೇವರ ಭಜನೆಯಿಂದ ಜೀವನದಲ್ಲಿ ಸಾರ್ಥಕತೆ ಪಡೆಯಬಹುದು ಎಂದು ನುಡಿದರು.
ಶ್ರೀಧರ ಕಾಮತ್, ದಿನಕರ ಶೆಣೈ, ರಮೇಶ್ ಪಡಿಯಾರ್, ನೀಲಕಂಠ ಪ್ರಭು, ಗಣಪತಿ ನಾಯಕ್, ಗೋವ ರ್ಧನ ನಾಯಕ್, ಉದ್ಯಮಿ ರಮೇಶ್ ನಾಯಕ್, ಉದ್ಯಮಿ ಟಿ. ಸಂತೋಷ ನಾಯಕ್, ಉದ್ಯಮಿ ಅನಂತ ನಾಯಕ್, ರವೀಂದ್ರ ನಾಯಕ್, ರಾಮಚಂದ್ರ ಕಾಮತ್, ರಾಮಚಂದ್ರ ಪಡಿಯಾರ್, ವಿಶ್ವನಾಥ ಪಡಿಯಾರ್, ಗುರುಚರಣ್ ಪಡಿಯಾರ್, ವಿಶ್ವಾಸ್ ಪ್ರಭು, ತೆಕ್ಕಟ್ಟೆ ಜಿ.ಎಸ್.ಬಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್‌ನ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ತೆಕ್ಕಟ್ಟೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರ ಪರವಾಗಿ ಉದ್ಯಮಿ ಟಿ. ಸಂತೋಷ ನಾಯಕ್ ಸ್ವಾಗತಿಸಿ, ಸ್ವಾಮೀಜಿಯವರನ್ನು ಗೌರವಿಸಿದರು.
120 ದಿನಗಳಲ್ಲಿ ಭವ್ಯ ಭಜನ ಮಂದಿರದ ಕಟ್ಟಡ ನಿರ್ಮಾಣ
ತೆಕ್ಕಟ್ಟೆಯಲ್ಲಿ ಭಜನ ಮಂದಿರ ನಿರ್ಮಾಣ ಮಾಡುವ ಬಯಕೆಯಿಂದ ತೆಕ್ಕಟ್ಟೆಯಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಸುಮಾರು 60 ಕುಟುಂಬಗಳ ಸದಸ್ಯರು ಸ್ವಾಮೀಜಿಯವರ ಆಶೀರ್ವಾದ ಪಡೆದು ಕೇವಲ 120 ದಿನಗಳಲ್ಲೇ ಶ್ರೀ ಸುಧೀಂದ್ರತೀರ್ಥ ಭಜನಾ ಮಂದಿರ ಹಾಗೂ ಶ್ರೀ ಸುಧೀಂದ್ರ ಸಭಾಭವನ ಕಟ್ಟಡ ನಿರ್ಮಾಣ ಮಾಡಿದ್ದು, ಸಾರ್ವತ್ರಿಕ ಶ್ಲಾಘನೆ ವ್ಯಕ್ತವಾಗಿದೆ.
ಚಿತ್ರ: ದರ್ಶನ್ ಸ್ಟುಡಿಯೋ ತೆಕ್ಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ
Malpe: ಆಯತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ
Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.