ನುಡಿದಂತೆ ನಡೆಯುವ ಮೋದಿ ವಿಶ್ವಾಸಾರ್ಹ ನಾಯಕ
Team Udayavani, Feb 21, 2019, 12:30 AM IST
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಭರವಸೆಗಳನ್ನು ಈಡೇರಿಸುತ್ತಿರುವುದರಿಂದ ಜನತೆ ಅವರ ನಾಯಕತ್ವದ ಮೇಲೆ ವಿಶ್ವಾಸ ಇಟ್ಟಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಅವಿನಾಶ್ ರಾಯ್ ಖನ್ನಾ ಹೇಳಿದ್ದಾರೆ.
ಬುಧವಾರ ಶಾರದಾ ಇಂಟರ್‌ನ್ಯಾಶನಲ್‌ನಲ್ಲಿ ಬಿಜೆಪಿ ವತಿಯಿಂದ ಮೀನುಗಾರರು ಹಾಗೂ ಚಿಂತಕರಿಗಾಗಿ ಆಯೋಜಿಸಲಾಗಿದ್ದ “ಮನ್ ಕಿ ಬಾತ್ ಮೋದಿ ಕೆ ಸಾಥ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶ್ರೀಮಂತರು ಗ್ಯಾಸ್ ಸಬ್ಸಿಡಿ ತ್ಯಜಿಸಬೇಕು ಎಂಬ ಮನವಿಗೆ ದೇಶದ 1.25 ಕೋಟಿ ಮಂದಿ ಸ್ಪಂದಿಸಿದ್ದಾರೆ. ಇದರಿಂದಾಗಿ 8 ಕೋಟಿ ಮಂದಿಗೆ ಗ್ಯಾಸ್ ನೀಡಲು ಸಾಧ್ಯವಾಯಿತು ಎಂದರು.
ಸ್ಪಷ್ಟ ಗುರಿ,ನೀತಿ
ಮೋದಿ ಸರಕಾರ ಸ್ಪಷ್ಟ ಗುರಿ ಮತ್ತು ನೀತಿ ಹೊಂದಿದೆ. ಜನಧನ ಮೂಲಕ ಬಡವರು-ಶ್ರೀಮಂತರ ನಡುವಿನ ಅಂತರ ಕಡಿಮೆ ಮಾಡಿದೆ. ಬಡವರಿಗೆ ಉಚಿತ ಮನೆ, ಗ್ಯಾಸ್ ಸಂಪರ್ಕ ನೀಡಿದೆ. ಮುದ್ರಾ ಯೋಜನೆಯಿಂದಾಗಿ ನವ ಉದ್ಯಮಿಗಳು ಭದ್ರತೆ ಇಲ್ಲದೆ ಸಾಲ ಪಡೆಯಲು ಸಾಧ್ಯವಾಗಿದೆ. ಇಂದು ಭಾರತೀಯ ಸೇನೆ ಜಗತ್ತಿನಲ್ಲಿ 3ನೇ ಸ್ಥಾನಕ್ಕೇರಿದೆ ಎಂದರು.
ಬೋಟ್ ಪತ್ತೆಗೆ ಗರಿಷ್ಠ ಯತ್ನ
ಬೋಟ್ ಸಹಿತ ನಾಪತ್ತೆಯಾಗಿರುವ ಮೀನು ಗಾರರ ಪತ್ತೆಗೆ ಕೇಂದ್ರ ಸರಕಾರ ಗರಿಷ್ಠ ಪ್ರಯತ್ನ ನಡೆಸುತ್ತಿದೆ. ಮೀನುಗಾರರು ತಮ್ಮಲ್ಲಿರುವ ಮಾಹಿತಿ ಹಂಚಿಕೊಳ್ಳಬಹುದು. ಅದರಿಂದ ಕಾರ್ಯಾಚರಣೆಗೆ ಅನುಕೂಲವಾಗುತ್ತದೆ ಎಂದರು.
ಅಂದು “ಸ್ಕ್ಯಾಮ್’, ಇಂದು “ಸ್ಕೀಮ್’ಫಲಾನುಭವಿಗಳ ಖಾತೆಗೆ ನೇರ ನಗದು ಪಾವತಿ ವ್ಯವಸ್ಥೆಯಿಂದಾಗಿ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆ. ಈ ಹಿಂದೆ ಸರಕಾರದ ಸ್ಕೀಮ್‌ಗಳು (ಯೋಜನೆ) ಸ್ಕ್ಯಾಮ್ (ಹಗರಣ) ವಾಗುತ್ತಿತ್ತು. ಆದರೆ ಇಂದು “ಸ್ಕೀಮ್’ ಆಗಿಯೇ ಉಳಿದಿದೆ. ಪಾರದರ್ಶಕವಾದ ಆಡಳಿತ ನಡೆಯುತ್ತಿದೆ ಎಂದು ಹೇಳಿದರು.
ರಾಜ್ಯ ಅಸಹಕಾರ
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, “ಕೇಂದ್ರದ ಅನೇಕ ಯೋಜನೆಗಳ ಪ್ರಯೋಜನ ಜನರಿಗೆ ದೊರೆಯಲು ರಾಜ್ಯದ ಸರಕಾರ ಅಡ್ಡಿಯಾಗಿದೆ. ಕೇಂದ್ರದ ಆಯುಷ್ಮಾನ್ ಭಾರತ್ ಯೋಜನೆಯಡಿ ಕುಟುಂಬದ ಪ್ರತಿಯೋರ್ವರಿಗೂ ಖಾಸಗಿ ಆಸ್ಪತ್ರೆಗಳಲ್ಲಿ 5 ಲ.ರೂ. ವೆಚ್ಚದ ಚಿಕಿತ್ಸೆ ಉಚಿತವಾಗಿ ದೊರೆಯುವಂತೆ ಮಾಡುತ್ತಿದೆ. ಉಜ್ವಲ ಯೋಜನೆಯಲ್ಲಿ ರಾಜ್ಯದ ಅಡ್ಡಿ ಇರಬಾರದೆಂಬ ಕಾರಣಕ್ಕೆ ತೈಲ ಕಂಪೆನಿಗಳ ಮೂಲಕ ನೇರವಾಗಿ ಜನರಿಗೆ ತಲುಪಿಸಿತು. ರೈತರಿಗೆ ನೀಡಿದ ಶೇ. 3 ಸಬ್ಸಿಡಿಯನ್ನು ರಾಜ್ಯ ಸರಕಾರ ಹಿಡಿದಿಟ್ಟುಕೊಂಡಿದೆ ಎಂದರು.
ಮಾಹಿತಿಗೆ ಗಡು
ಸುವರ್ಣ ತ್ರಿಭುಜ ಬೋಟ್‌ಗೆ ನೌಕಾಪಡೆಯ ಹಡಗಿನ ತಳಭಾಗಕ್ಕೆ ಢಿಕ್ಕಿಯಾಗಿರುವುದೇನು? ಅದು ಸುವರ್ಣ ತ್ರಿಭುಜವೇ? ಎಂಬುದನ್ನು ಬಹಿರಂಗಪಡಿಸಬೇಕು ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಒತ್ತಾಯಿಸಿದರು.
ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಡಾ| ವೈ. ಭರತ್ ಶೆಟ್ಟಿ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಗಣ್ಯರಾದ ಉದಯ ಕುಮಾರ್ ಶೆಟ್ಟಿ, ಸದಾನಂದ ಬಳ್ಕೂರು, ಶೋಭೇಂದ್ರ ಸಸಿಹಿತ್ಲು ಉಪಸ್ಥಿತರಿದ್ದರು. ಸಂಚಾಲಕ ಯಶ್‌ಪಾಲ್ ಸುವರ್ಣ, ಕುತ್ಯಾರು ನವೀನ್ ಶೆಟ್ಟಿ ಮತ್ತು ಕುಯಿಲಾಡಿ ಸುರೇಶ್ ನಾಯಕ್ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.