“ಭಜನೆಯಿಂದ ಜೀವನ ಪಾವನ’
Team Udayavani, Apr 20, 2019, 5:17 PM IST
ಪಡುಬಿದ್ರಿ: ನಮ್ಮನ್ನು ನಾವು ಭಜನೆಯಲ್ಲಿ ತೊಡಗಿಸಿ ಕೊಂಡಾಗ ಭಗವಂತನ ಕೃಪೆ ನಮ್ಮ ಮೇಲಾಗುವುದು. ಅದರಿಂದ ನಮ್ಮ ಜೀವನ ಪಾವನವಾಗುವುದು ಎಂದು ಉಡುಪಿ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದ್ದಾರೆ.
ಅವರು ರಾಮ ನವಮಿ ಸಂದರ್ಭ ಎರ್ಮಾಳು ತೆಂಕ ರಾಮ ಮಂದಿರದ ಎದುರು ಭಾಗದಲ್ಲಿ ಹೊದೆಸ ಲಾದ ಇಂಟರ್‌ಲಾಕ್ ಜೋಡಣೆ ಉದ್ಘಾಟಿಸಿ ಮಾತನಾಡಿದರು.ಇದನ್ನು ಸೇವಾರೂಪದಲ್ಲಿ ದಿ| ಪುಚ್ಚೊಟ್ಟು ಬೀಡು ಸಂಕಪ್ಪ ಶೆಟ್ಟಿ ಮಕ್ಕಳು ಸುಮಾರು 3.5 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಿಕೊಟ್ಟ ಅವರ ಮಕ್ಕಳನ್ನು ಸ್ವಾಮೀಜಿ ಸಮ್ಮಾನಿಸಿದರು.
ಪುರೋಹಿತ ರಾಘವೇಂದ್ರ ತಂತ್ರಿಗಳು ಸಂದಭೋìಚಿತವಾಗಿ ಮಾತನಾಡಿದರು.ಭಜನಾ ಮಂಡಳಿ ಅಧ್ಯಕ್ಷ ಶ್ರೀಧರ ಬಂಗೇರ, ಮಹಿಳಾ ಮಂಡಳಿ ಅಧ್ಯಕ್ಷೆ ಸೀತಾ ವಿ. ಸುವರ್ಣ, ಅಪ್ಪಿ ಎಸ್. ಸಾಲ್ಯಾನ್, ಲಿಂಗಪ್ಪ ಪುತ್ರನ್, ಲೀಲಾಧರ ಕಾಂಚನ್, ಮಧುಕರ್ ಪುತ್ರನ್, ಮನೋಜ್ ಬಂಗೇರ, ಮತ್ತು ಮುಂಬಯಿ ಪ್ರತಿನಿಧಿಗಳಾದ ಜಗನ್ನಾಥ ಸುವರ್ಣ, ಕಮಲಾಕರ ಕುಂದರ್, ಪಿ. ಆರ್. ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ತೆಂಕ ಮೊಗವೀರಸಭಾ ಅಧ್ಯಕ್ಷ ವೈ. ದಾಮೋದರ ಸುವರ್ಣ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಮಂದಿರ ಸಮಿತಿ ಅಧ್ಯಕ್ಷ ವೈ. ಮಾಧವ ಸುವರ್ಣ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.