ಭೀಷ್ಮರ ಆಡಳಿತ ಸೂತ್ರ ಹೆಚ್ಚು ಪ್ರಸ್ತುತ: ಡಿ.ವಿ. ಪ್ರತಿಪಾದನೆ
ಉಡುಪಿ: ಅದಮಾರು ಪರ್ಯಾಯೋತ್ಸವದ ಸಭೆ
Team Udayavani, Jan 20, 2020, 6:01 AM IST
ಅದಮಾರು ಮಠ ಪರ್ಯಾಯದ ಎರಡನೆಯ ದಿನದ ಧಾರ್ಮಿಕ ಸಭೆ ರವಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು.
ಉಡುಪಿ: ಮಹಾಭಾರತದ ಭೀಷ್ಮಾಚಾರ್ಯರು ನೀಡಿದ ಆಡಳಿತ ಸೂತ್ರ ಹಿಂದೆಂದಿಗಿಂತಲೂ ಇಂದಿಗೆ ಹೆಚ್ಚು ಪ್ರಸ್ತುತವಾಗಿದೆ ಎಂದು ಕೇಂದ್ರ ರಸಗೊಬ್ಬರ ಖಾತೆಯ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ರವಿವಾರ ನಡೆದ ಪರ್ಯಾಯೋತ್ಸವದ ಸಭೆಯಲ್ಲಿ ಅವರು ಮಾತನಾಡಿದರು.ರಾಜ್ಯವು ರಾಜನಿಲ್ಲದೆಯೂ ಸುಭಿಕ್ಷವಾಗಿ, ಜನಕಲ್ಯಾಣಕರವಾಗಿ ರೂಪುಗೊಳ್ಳುವಂತಿರಬೇಕು ಎಂದು ಭೀಷ್ಮರು ದ್ವಾಪರ ಯುಗದಲ್ಲಿಯೇ ಹೇಳಿದ್ದರು. ಕುಕೃತ್ಯಗಳು ನಡೆಯದಂತೆ ದಂಡವಿಲ್ಲದ ದಂಡಸಂಹಿತೆ ರೂಪುಗೊಳ್ಳಬೇಕು, ಪ್ರೀತಿವಿಶ್ವಾಸಗಳು ಕಾನೂನಾಗುವ ಕಾನೂನು ಬೇಕು, ಸಹಮತವೇ ಬಹುಮತವಾಗಬೇಕು ಎಂಬ ಪ್ರಮುಖ ಸೂತ್ರಗಳನ್ನು ಭೀಷ್ಮರು ಮುಂದಿಟ್ಟಿದ್ದರು. ಅಧಿಕಾರ ಕ್ಕಾಗಿ ಹಾತೊರೆಯುವ ಇಂದಿನ ದಿನಗಳಲ್ಲಿ ಇದನ್ನು ಅಳವಡಿಸಿಕೊಳ್ಳುವುದು ಕಷ್ಟವಾದರೂ ಭೀಷ್ಮರ ನೀತಿಗಳು ಇಂದು ಹೆಚ್ಚು ಪ್ರಸ್ತುತ ಎಂದು ಡಿ.ವಿ. ಹೇಳಿದರು.
ಧಾರ್ಮಿಕ ಪೀಠಗಳು ನೀಡುವ ಸಂದೇಶಗಳು ಸಮಾಜಕ್ಕೆ ದೊಡ್ಡ ಸಂದೇಶವಾಗುತ್ತವೆ. ಅದಮಾರು ಪರ್ಯಾಯದಲ್ಲಿ ಸ್ವತ್ಛತೆ, ಪ್ಲಾಸ್ಟಿಕ್ ನಿರ್ಮೂಲನಕ್ಕೆ ನೀಡಿದ ಆದ್ಯತೆ ಮೆಚ್ಚುವಂತಹುದು. ಜನಜಾಗೃತಿ ಆಗುವುದು ಬಹಳ ಮುಖ್ಯ. ಈ ಕೆಲಸ ಶ್ರೀ ಅದಮಾರು ಶ್ರೀಪಾದರ ಮೂಲಕ ಆಗುತ್ತಿದೆ ಎಂದು ಡಿ.ವಿ. ಹೇಳಿದರು.
ನಾಮಸ್ಮರಣೆಯಿಂದ ಪಾವನ
ಭಗವಂತನ ನಾಮಸ್ಮರಣೆಯಿಂದ ಜೀವನ ಪಾವನವಾಗುತ್ತದೆ ಎಂದು ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ತಮ್ಮ ಆಶೀರ್ವಚನದಲ್ಲಿ ನುಡಿದರು.
ಭಾಗವತ, ಮಹಾಭಾರತ, ರಾಮಾಯಣಗಳ ಮೌಲಿಕ ಸಂದೇಶ ಗಳನ್ನು ಮಕ್ಕಳಿಗೆ ತಿಳಿಹೇಳುವ ಕೆಲಸ ಆಗಬೇಕು ಎಂದು ಮಂಗಳೂರು ಎನ್‌ಎಂಪಿಟಿ ಅಧ್ಯಕ್ಷ ಎ.ವಿ. ರಮಣ ಅವರು ಕರೆ ನೀಡಿದರು.
ಎಂಎಂಎನ್‌ಎಲ್ ಆಡಳಿತ ನಿರ್ದೇಶಕ ಟಿ. ಸತೀಶ್ ಯು. ಪೈ, ಮುಂಬಯಿಯ ವೈದ್ಯ ಡಾ| ಎಂ.ಎಸ್. ಆಳ್ವ, ಹರ್ಯಾಣದ ಸಂಸದ ಅಶೋಕ್ ತನ್ವಾರ್ ಮುಖ್ಯ ಅತಿಥಿಗಳಾಗಿದ್ದರು. ಕೃಷ್ಣ ಮಠದಲ್ಲಿ ನೈವೇದ್ಯ ತಯಾರಿಸುತ್ತಿದ್ದ ದಿ| ಸುಬ್ರಹ್ಮಣ್ಯ ಭಟ್ ಸ್ಮರಣಾರ್ಥ ಉದಯ ತಂತ್ರಿ, ಗಣಪತಿ ಭಟ್ ಅವರಿಗೆ, ನಾಗಸ್ವರ ಸೇವೆ ನಡೆಸುತ್ತಿದ್ದ ದಿ| ಸುಬ್ಬಣ್ಣ ಶೇರಿಗಾರ್ ಸ್ಮರಣಾರ್ಥ ಯು. ದಾಮೋದರ್ ಅವರಿಗೆ ಶ್ರೀಕೃಷ್ಣಸೇವಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಟಿ. ಸತೀಶ್ ಯು. ಪೈ ಮತ್ತು ಸಚಿವ ಡಿ.ವಿ. ಸದಾನಂದ ಗೌಡ ಅವರನ್ನು ಅದಮಾರು ಶ್ರೀಗಳು ಗೌರವಿಸಿದರು ಶ್ರೀಕೃಷ್ಣ ಸೇವಾ ಬಳಗದ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಸ್ವಾಗತಿಸಿ ಗೌರವಾಧ್ಯಕ್ಷ ರಘುಪತಿ ಭಟ್ ಪ್ರಸ್ತಾವನೆಗೈದರು.
ಒಂದು ಬಾರಿ ಬಳಸುವ ಪ್ಲಾಸ್ಟಿಕ್ ನಿಷೇಧ: ಡಿ.ವಿ.
ಟಿವಿ, ಕಾರು, ವಿಮಾನ, ಅಂಗಿಯ ಬಟನ್ ಹೀಗೆ ಎಲ್ಲವೂ ಪ್ಲಾಸ್ಟಿಕ್ ಆಗಿದೆ. ನಾವು ಒಂದು ಬಾರಿ ಉಪಯೋಗಿಸುವ ಪ್ಲಾಸ್ಟಿಕ್‌ನ್ನು ನಿಷೇಧಿಸುತ್ತಿದ್ದೇವೆ. ಇದಕ್ಕೆ ಪೂರಕವಾಗಿ ಪರ್ಯಾಯ ಶ್ರೀ ಅದಮಾರು ಮಠದ ಶ್ರೀಗಳು ಉತ್ತಮ ಕ್ರಮ ತೆಗೆದುಕೊಂಡಿದ್ದಾರೆ.
– ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವರು.
ಉಡುಪಿಯಲ್ಲಿ ನೀರಿಂಗಿಸುವಿಕೆ ಪ್ರಸ್ತಾವ
ಉಡುಪಿಯಲ್ಲಿ ಹೆಚ್ಚಿದ ಕಾಂಕ್ರೀಟೀಕರಣದಿಂದ ನೀರು ಇಂಗದೆ ನೀರಿನ ಕೊರತೆ ಉಂಟಾಗುತ್ತಿದೆ. ನಗರದಲ್ಲಿ ನೀರಿಂಗಿಸುವಿಕೆಯನ್ನು ಹೇಗೆ ಮಾಡಬೇಕೆಂದು ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಚಿಂತನೆ ನಡೆಸಿದ್ದಾರೆ. ಸಿಎಸ್‌ಆರ್ ನಿಧಿ ಸಹಕಾರದಿಂದ ಇದನ್ನು ಆಗಗೊಳಿಸಲು ಜಿಲ್ಲಾಧಿಕಾರಿ, ಹಿಂದಿನ ಎಸ್‌ಪಿ ಅಣ್ಣಾಮಲೈಯವರೊಂದಿಗೆ ಮಾತುಕತೆ ನಡೆಸಿದ್ದಾರೆ.
– ರಘುಪತಿ ಭಟ್, ಶಾಸಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Dangerous Stunt: 5 ವರ್ಷದ ಬಾಲಕನನ್ನು ಕಾರಿನ ಬಾನೆಟ್ ಮೇಲೆ ಕೂರಿಸಿ ಸ್ಟಂಟ್
BBK11: ಕ್ಯಾಪ್ಟನ್ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’
Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.