ಡಿವೈಡರ್ ಮಧ್ಯೆ ತೂರಿ ಬರುವ ದ್ವಿಚಕ್ರ ವಾಹನ ಸವಾರರು
Team Udayavani, Jul 29, 2018, 6:00 AM IST
ತೆಕ್ಕಟ್ಟೆ : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚತುಷ್ಪಥ ರಸ್ತೆ ವಿಭಾಜಕ ಈಗ ಅಪಘಾತಗಳ ತಾಣ. ಇದರ ಮಧ್ಯದಿಂದ ತೂರಿ ಬರುವ ದ್ವಿಚಕ್ರ ವಾಹನ ಚಾಲಕರು ಅಪಘಾತಗಳಿಗೆ ಕಾರಣವಾಗುತ್ತಿದ್ದಾರೆ.
ವಿಭಾಜಕದ ನಡುವೆ ನೀರು ಹರಿದು ಹೋಗಲು ಇರುವ ಅಂತರದಲ್ಲೇ ದ್ವಿಚಕ್ರ ವಾಹನ ಚಾಲನೆ ಮಾಡುವುದರಿಂದ ಎದುರಿನಿಂದ ಬರುವ ವಾಹನಗಳಿಗೆ ಇದರ ಅರಿವಿಲ್ಲದೇ ಅಪಘಾತಕ್ಕೆ ಎರವಾ ಗುತ್ತಿದೆ. ಅತಿ ವೇಗದಿಂದ ವಾಹನಗಳು ಬರುವುದರಿಂದ ಪ್ರಾಣ ಹಾನಿಗೆ ಕಾರಣವಾಗಿದೆ.
ಸಂಕಷ್ಟದ ಪಯಣ
ರಾ.ಹೆ.66 ಚತುಷ್ಪಥ ಕಾಮಗಾರಿ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಭಾಗದಲ್ಲಿ ಹಳ್ಳಿ ಮಿತಿಗಳಲ್ಲಿ ಸರ್ವೀಸ್ ರಸ್ತೆಗಳು ನಿರ್ಮಾಣವಾಗಿಲ್ಲ. ಈ ಕಾರಣದಿಂದಲೂ, ಗ್ರಾಮೀಣ ದ್ವಿಚಕ್ರ ವಾಹನ ಸವಾರರು ರಸ್ತೆ ನಡುವಿನ ಸಂದಿಯಲ್ಲಿ ದ್ವಿಚಕ್ರದಲ್ಲಿ ಸಾಗುವ ಪರಿಪಾಠವನ್ನು ಬೆಳಸಿಕೊಂಡಿದ್ದಾರೆ.
ಕುಂದಾಪುರ ತಾಲೂಕಿನ ತೆಕ್ಕಟ್ಟೆ, ಕುಂಭಾಸಿ, ಬೀಜಾಡಿ, ಕೋಟೇಶ್ವರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪಾದ ಚಾರಿಗಳು ನಡೆಯಲೂ ಸೂಕ್ತ ವ್ಯವಸ್ಥೆ ಇಲ್ಲ. ಈ ಕಾರಣದಿಂದಾಗಿ ರಸ್ತೆಯ ಮೇಲೆ ನಡೆದು ಸಾಗಬೇಕಾದ ಅನಿವಾರ್ಯತೆ ಇದೆ.
ಸೂಕ್ತ ಕ್ರಮ
ರಾ.ಹೆ.ಯಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ನವಯುಗ ಗುತ್ತಿಗೆ ಕಂಪೆನಿಯ ಇಂಜಿನಿಯರ್ ಮೇಲೆ ಕ್ರಿಮಿನಲ್ ಕೇಸ್ ಜರಗಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ .
– ಲಕ್ಷ್ಮಣ ನಿಂಬರ್ಗಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು
ನೋಟಿಸ್ ಮಾಡಿದ್ದೇವೆ
ಈ ಹಿಂದೆ ರಾ.ಹೆದ್ದಾರಿಯಲ್ಲಿ ನೀರು ಹರಿದು ಹೋಗುವ ನಿಟ್ಟಿನಿಂದ ಡಿವೈಡರ್ ನಡುವಿನ ಅಂತರಗಳಲ್ಲಿ ದ್ವಿಚಕ್ರ ವಾಹನ ಸವಾರರು ಸಮಯ ಉಳಿಸುವ ನಿಟ್ಟಿನಿಂದ ಒಳಮಾರ್ಗವಾಗಿ ಸಂಚರಿಸುವುದರಿಂದ ಡಿವೈಡರ್ ಎರಡು ಕಡೆಗಳಲ್ಲಿ ಗ್ರಿಲ್ ಅಳವಡಿಸುವಂತೆ ರಸ್ತೆ ಕಾಮಗಾರಿಯ ಗುತ್ತಿಗೆ ಕಂಪೆನಿ ನವಯುಗದವರಿಗೆ ಈ ಹಿಂದೆಯೇ ನೋಟಿಸ್ ಮಾಡಿದ್ದೇವೆ.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್
ಜಿಲ್ಲಾಧಿಕಾರಿಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.