ಬಿದ್ಕಲ್ಕಟ್ಟೆ ಐಟಿಐ ಕಾಲೇಜು: ನೂತನ ಕಟ್ಟಡದಲ್ಲಿ ಕಳಪೆ ಕಾಮಗಾರಿ
Team Udayavani, Jul 25, 2019, 5:14 AM IST
ಕುಂದಾಪುರ: ಕಳೆದ 12 ವರ್ಷಗಳ ಹಿಂದೆ ಕುಂದಾಪುರ ತಾಲೂಕಿಗೆ ಮಂಜೂರಾದ ಸರಕಾರಿ ಐಟಿಐ ಕಾಲೇಜಿನ ಸುಸಜ್ಜಿತ ನೂತನ ಕಟ್ಟಡ ಬಿದ್ಕಲ್ಕಟ್ಟೆಯಲ್ಲಿ ನಿರ್ಮಾಣವಾಗುತ್ತಿದ್ದು, ಪೂರ್ಣಗೊಳ್ಳುವ ಮೊದಲೇ ಕಳಪೆ ಕಾಮಗಾರಿ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಈಗಾಗಲೇ ವರದಿಯೂ ಸಲ್ಲಿಕೆಯಾಗಿದೆ.
ಕೋಟೇಶ್ವರದಲ್ಲಿ ಆರಂಭ
2007-08 ನೇ ಸಾಲಿನಲ್ಲಿ ಕುಂದಾಪುರ ತಾಲೂಕಿಗೆ ಸರಕಾರಿ ಐಟಿಐ ಕಾಲೇಜು ಮಂಜೂರಾಗಿದ್ದು, ಮೊದಲಿಗೆ ಕೋಟೇಶ್ವರದಲ್ಲಿ ಕಾರ್ಯಾರಂಭಗೊಂಡಿತ್ತು. ಆ ಬಳಿಕ ಹಂಗಳೂರಿಗೆ ಸ್ಥಳಾಂತರಗೊಂಡು, ಸದ್ಯ ತಾತ್ಕಲಿಕವಾಗಿ ಅಲ್ಲಿನ ಖಾಸಗಿ ಕಟ್ಟಡದಲ್ಲಿ ಕಾಲೇಜಿನ ಚಟುವಟಿಕೆಗಳು ನಡೆಯುತ್ತಿದೆ. ಸದ್ಯ 7 ಬೇರೆ – ಬೇರೆ ಕೋರ್ಸ್‌ಗಳ ತರಗತಿಯನ್ನು ಆರಂಭಿಸಲಾಗಿದೆ.
3.86 ಕೋ.ರೂ. ಮಂಜೂರು
ಬಿದ್ಕಲ್ಕಟ್ಟೆಯಲ್ಲಿ ಸರಕಾರಿ ಜಾಗ ಇದ್ದ ಹಿನ್ನೆಲೆಯಲ್ಲಿ ನಬಾರ್ಡ್ ಯೋಜನೆಯಡಿ ಈ ಸರಕಾರಿ ಐಟಿಐ ಕಾಲೇಜಿಗೆ 3.86 ಕೋ.ರೂ. ಮಂಜೂರಾಗಿದ್ದು, ಸುಮಾರು 2 ವರ್ಷಗಳ ಹಿಂದೆ ನೂತನ ಕಟ್ಟಡದ ಕಾಮಗಾರಿ ಆರಂಭಗೊಂಡಿತ್ತು.
ಉಪನ್ಯಾಸಕರ ಕೊರತೆ
ಸದ್ಯ ಹಂಗಳೂರಿನಲ್ಲಿರುವ ಕಟ್ಟಡದಲ್ಲಿ ಸದ್ಯ 7 ಕೋರ್ಸ್‌ಗಳಲ್ಲಿ ಕುಂದಾಪುರದಿಂದ ಆರಂಭವಾಗಿ ಬೈಂದೂರಿನವರೆಗೂ ಬೇರೆ ಬೇರೆ ಕಡೆಗಳಿಂದ ಸುಮಾರು 205 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ 19 ಮಂದಿ ಉಪನ್ಯಾಸಕರಿರಬೇಕಿದ್ದು, ಆದರೆ ಸದ್ಯ 4 – 5 ಮಂದಿ ಮಾತ್ರ ಇದ್ದಾರೆ. ಬಾಕಿ ಎಲ್ಲ ಗೌರವ ಶಿಕ್ಷಕರೇ ಬೋಧಿಸುತ್ತಿದ್ದಾರೆ.
– ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ನಮ್ಮ ಶೌಚಾಲಯ ನಮ್ಮ ಗೌರವ ತಿಂಗಳ ಆಂದೋಲನಕ್ಕೆ ಚಾಲನೆ
Udupi: 10 ತಿಂಗಳಲ್ಲಿ 228 ಕಳವು ಕೇಸ್!
History: ನಕ್ಸಲ್ ಚಳವಳಿಯ ರಕ್ತಸಿಕ್ತ ಇತಿಹಾಸ; ಸಾವಿನೊಂದಿಗೆ ಪೊಲೀಸ್-ನಕ್ಸಲ್ ಮುಖಾಮುಖಿ
Naxal Vikram Gowda: ಮೂರು ಬಾರಿ ತಪ್ಪಿಸಿಕೊಂಡವ ಹುಟ್ಟೂರಲ್ಲೇ ಪ್ರಾಣ ತೆತ್ತ
Naxal Vikram Encounter: ಟಿವಿ ನೋಡಿ ವಿಷಯ ತಿಳಿಯಿತು, ನಮಗೆ ಯಾರೂ ಹೇಳಿಲ್ಲ: ಸಹೋದರಿ
MUST WATCH
ಹೊಸ ಸೇರ್ಪಡೆ
Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿಟ್ಟು ವ್ಯಕ್ತಿ ನಾಪತ್ತೆ ಪ್ರಕರಣ; ಶವ ಪತ್ತೆ
Vertex Workspace ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್‌ಪೈಸ್ ಅವಾರ್ಡ್
Kulgeri: ಟ್ರ್ಯಾಕ್ಟರ್ ಹಿಂಬದಿಗೆ ಬೈಕ್ ಡಿಕ್ಕಿ; ಸವಾರ ಮೃತ್ಯು
BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್
Udupi: ನಮ್ಮ ಶೌಚಾಲಯ ನಮ್ಮ ಗೌರವ ತಿಂಗಳ ಆಂದೋಲನಕ್ಕೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.